ವಿಭಾಗಗಳು

ಸುದ್ದಿಪತ್ರ


 

Archive for March, 2013

ಪ್ರಶ್ನೆಗಳೇನೋ ಸಾಕಷ್ಟಿವೆ.. ಕೇಳುವುದು ಯಾರನ್ನು?

Friday, March 29th, 2013

ಮಠಕ್ಕೆ ಹಣ ಕೊಟ್ಟಾಗ ವಿಷಾದಿಸುವ ಅಗತ್ಯವಿಲ್ಲ. ಬದಲಿಗೆ ಭಕ್ತ ಸಮೂಹ ಅದು ಮಠದವರೆಗೂ ಬಂದು, ಸದ್ವಿನಿಯೋಗವಾಗುವಂತೆ ನೋಡಿಕೊಂಡರೆ ಅದು ಬಹು ಮುಖ್ಯ ಕೆಲಸವಾದೀತು. ಕೆಲವಾದರೂ ಮಠಾಧೀಶರು ಒಟ್ಟಿಗೆ ಕುಳಿತು ಸರ್ಕಾರದ ಹಣವನ್ನು ಬಳಸಿಕೊಳ್ಳುವ ಕುರಿತು ಒಂದು ನೀತಿ ಸಂಹಿತೆ ರಚಿಸಿಕೊಂಡರೆ ಮತ್ತೂ ಒಳಿತೇ. – ಚಕ್ರವರ್ತಿ ಸೂಲಿಬೆಲೆ ಬೇಲಿ ಮಠಾಧೀಶರು ಮಠಕ್ಕೆಂದು ಕೊಟ್ಟಅನುದಾನ ಮರಳಿಸಿಬಿಟ್ಟಿದ್ದಾರಂತೆ. ಹಾಗಂತ ಸುದ್ದಿ ನೋಡಿದಾಗ ಅಚ್ಚರಿಯಾಯ್ತು. ಇನ್ನೂ ಅನೇಕ ಮಠಾಧೀಶರಿಗೆ ಅದು ಮೇಲ್ಪಂಕ್ತಿಯಾಗಲೆಂಬ ಆಸೆಯನ್ನು ಹಲವರು ವ್ಯಕ್ತಪಡಿಸಿದರು. ಸ್ವಾಮೀಜಿ ರಾಜ್ಯದಲ್ಲಿ ಬರ ಪರಿಸ್ಥಿತಿ […]

ರೀಲ್‌ನವರು ಇನ್ನು ಸಾಕು, ರಿಯಲ್ ಹೀರೋಗಳು ಬೇಕು

Saturday, March 23rd, 2013

ತರುಣ ಪೀಳಿಗೆ ದಿಕ್ಕು ತಪ್ಪುತ್ತಿರೋದೇ ಇಲ್ಲಿ. ಸ್ವಾರ್ಥದ ಅಧೀನರಾಗಿ, ದುಷ್ಟ ಚಟಗಳ ದಾಸರಾಗಿ ಯಾವಕಾರಣಕ್ಕೂ ಮಾದರಿಯಾಗಲು ಯೋಗ್ಯರಲ್ಲದವರನ್ನು ಅನುಸರಿಸುವಂತೆ ಯುವಕರನ್ನು ಪ್ರೇರೇಪಿಸುತ್ತಿದ್ದೇವಲ್ಲ ಅದೇ ದೊಡ್ಡ ಸಮಸ್ಯೆ. ಸಂಜಯ್ ದತ್‌ಗೆ ಜೈಲು! ಸುದ್ದಿ ಕೇಳಿದಾಗ ನೆಮ್ಮದಿಯಾಯ್ತು. ದೇಶಕ್ಕೆ ಕಂಟಕವಾದವನನ್ನು ಯಾವ ಕಾಲಕ್ಕೂ ಕ್ಷಮಿಸಬಾರದೆನ್ನುವ ಸುಪ್ರೀಮ್ ಕೋರ್ಟಿನ ನಿರ್ಣಯ ಸಮಾಧಾನಕರವೇ. ಆದರೆ ನೋವೇನು ಗೊತ್ತೆ? ’ಇದಕ್ಕಿಂತ ಕಡಿಮೆ ಶಿಕ್ಷೆ ಕೊಡಲಾಗುತ್ತಿರಲಿಲ್ಲ’ ಎಂದು ಸುಪ್ರೀಮ್ ಕೋರ್ಟ್ ಗೋಳು ಹೇಳಿಕೊಂಡಿರುವುದು. ಜಗತ್ತಿನಲ್ಲೆಲ್ಲ ದೇಶದ್ರೋಹಕ್ಕೆ ಅತ್ಯುಗ್ರ ಶಿಕ್ಷೆ ವಿಧಿಸುವ ರೂಢಿ ಇದ್ದರೆ, ಭಾರತದಲ್ಲಿ ಅದನ್ನು […]

ರಾಮಸೇತು ಒಡೆದರೆ ಥೋರಿಯಮ್ ನಿಕ್ಷೇಪಕ್ಕೆ ಎಳ್ಳು ನೀರು…

Friday, March 15th, 2013

ಮನಮೋಹನ ಸಿಂಗರು ಅಧಿಕಾರಕ್ಕೆ ಬಂದ ನಂತರ ೨೦ ಲಕ್ಷ ಟನ್‌ನಷ್ಟು ಥೋರಿಯಮ್‌ಗೆ ಸಮನಾದ ಮೋನಾಝೈಟ್ ನಮ್ಮ ಕರಾವಳಿಯಿಂದ ಕಾಣೆಯಾಗಿದೆ. ಬೆಲೆಕೇರಿಯಿಂದ ಕಾಣೆಯಾದ ಕಬ್ಬಿಣದ ಅದಿರಿನ ತನಿಖೆ ಬಲು ಜೋರಾಗಿ ನಡೆಯುತ್ತಿದೆಯಲ್ಲ, ಈ ಮೋನಾಜೈಟ್ ನಾಪತ್ತೆಯಾದುದರ ಬಗ್ಗೆ ಯಾರು ಮಾಡುತ್ತಾರೆ ಹೇಳಿ!? ನಮಗೇ ಅರಿವಿಲ್ಲದೇ ಭಯಾನಕ ಪರಿಸ್ಥಿತಿಯತ್ತ ತೆವಳಿಕೊಂಡು ಹೋಗುತ್ತಿದ್ದೇವೆ! ನಾವು ಬಳಸುವ ಪೆಟ್ರೋಲು – ಡೀಸೆಲ್ಲಿನ ಮುಕ್ಕಾಲು ಭಾಗ ಆಮದು ಮಾಡಿಕೊಳ್ಳುತ್ತಿದ್ದೇವೆ. ಕಳೆದ ವರ್ಷದ ಲೆಕ್ಕಾಚಾರದ ಪ್ರಕಾರ ೧೩೪ ಶತಕೋಟಿ ಡಾಲರುಗಳಷ್ಟು ತೈಲ ಆಮದು ಮಾಡಿಕೊಂಡಿದ್ದೇವೆ. ಆಮದು […]

ಯುದ್ಧ ಶುರುವಾಗುವ ಮೊದಲೇ ಸೋತುಹೋದವರು

Friday, March 8th, 2013

ರಾಹುಲ್‌ಗೆ ನಿಜಕ್ಕೂ ಕಾಳಜಿ ಇದ್ದಲ್ಲಿ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿಯೇ ಉಪಾಧ್ಯಕ್ಷ ಹುದ್ದೆ ಒಪ್ಪಿಕೊಳ್ಳದೆ ಜಾಗ ಬಿಟ್ಟುಕೊಟ್ಟು ಎದ್ದಿದ್ದರೆ ನಂಬಬಹುದಿತ್ತು. ರಾಜೀವ್ ಗಾಂಧಿಯ ಮಗನೆಂಬ ಏಕೈಕ ಅರ್ಹತೆ ಬಿಟ್ಟರೆ ಉಪಾಧ್ಯಕ್ಷ ಸ್ಥಾನದಲ್ಲಿ ಕೂರಲು ಅವರಿಗೆ ಮತ್ಯಾವ ಯೋಗ್ಯತೆ ಇತ್ತು ಹೇಳಿ? ಆಗೆಲ್ಲ ಇಲ್ಲದ ವಂಶ ಪರಂಪರೆಯ ಕಾಳಜಿ ಮೋದಿ ಪ್ರಧಾನಿ ಪಟ್ಟಕ್ಕೇರುವುದು ಖಾತ್ರಿಯಾದಾಗ ಹೊರಬಂದಿತೇಕೆ? ಅದು ಮೋದಿಯ ಮ್ಯಾಜಿಕ್ಕು. ಒಂದು ಗಂಟೆಯ ಭಾಷಣ ಮುಗಿವ ವೇಳೆಗೆ ಎದುರಾಳಿಗಳೆಲ್ಲ ಹೊದ್ದು ಮಲಗಿಬಿಟ್ಟಿದ್ದರು. ಅನಂತ ಕುಮಾರ್, ಮುರಳಿ ಮನೋಹರ್ ಜೋಷಿಯಂತಹ ಮನಸಲ್ಲೇ […]

ಭಾರತದ ಕಂಕುಳಲ್ಲಿ ಮತ್ತೊಂದು ಕಾಶ್ಮೀರ

Friday, March 1st, 2013

ಈಗ ಯೋಚಿಸಿ. ಗಿಲಾನಿಯ ಸ್ಥಾನದಲ್ಲಿ ಓವೈಸಿ ಇದ್ದಾನೆ. ಈಗಲೂ ಪಾಕಿಸ್ತಾನದಿಂದ ಅವರಿಗೆ ಸಂದೇಶಗಳು, ಶಸ್ತ್ರಗಳು ದಕ್ಕುತ್ತಿವೆ. ರಾಜೀವ್ ಗಾಂಧಿಯ ಜಾಗವನ್ನು ಸೋನಿಯಾ ಆಕ್ರಮಿಸಿಕೊಂಡಿದ್ದಾರೆ. ಅಂದಮೇಲೆ, ಹೈದರಾಬಾದಿನ ಕತೆಯೇನು? ಹೆದರಿಕೆಯಾಗುತ್ತಿರುವುದು ಅದಕ್ಕೇ. ಇತಿಹಾಸದ ಪಾಠ ಬಲು ನಿಚ್ಚಳವಾಗಿದೆ. ರಾಜ ಗಟ್ಟಿಗನಾಗಿರುವವರೆಗೂ ಸಾಮ್ರಾಜ್ಯ ಭದ್ರ. ಹೇಡಿಯಾಗಿರುವ, ಸರಿಯಾದ ನಿರ್ಧಾರ ಕೈಗೊಳ್ಳದ, ದೂರ ದೃಷ್ಟಿಯಿಲ್ಲದ ರಾಜ ಗದ್ದುಎಗಯೇರಿದಾಗಲೆಲ್ಲ ಅರಸೊತ್ತಿಗೆ ಸಂಕಟಕ್ಕೆ ಸಿಲುಕಿದೆ, ನಾಡು ನಲುಗಿದೆ. ಕೃಷ್ಣದೇವ ರಾಯನ ಕಾಲಕ್ಕೆ ಉತ್ತುಂಗದಲ್ಲಿದ್ದ ವಿಜಯ ನಗರದ ಎದುರಿಗೆ ಸುತ್ತಲಿನ ದೊರೆಗಳು ಬಾಲ ಮುದುರಿದ ನಾಯಿಗಳಂತಿದ್ದರು. […]