ವಿಭಾಗಗಳು

ಸುದ್ದಿಪತ್ರ


 

Archive for May, 2015

ವೇದ ಪುರಾಣಗಳಲ್ಲಿ ಸೃಷ್ಟಿ ಕಥನದ ಅನಾವರಣ ~ ವಿಶ್ವಗುರು 9

Monday, May 25th, 2015

‘ಭಾರತ್ ಏಕ್ ಖೋಜ್’ ಧಾರಾವಾಹಿ ನೋಡಿದ್ದು ನೆನಪಿದೆಯಾ? ಆವಾಹರ್ ಲಾಲ್‍ರ ಡಿಸ್ಕವರಿ ಆಫ್ ಇಂಡಿಯಾವನ್ನು ತೆರೆಗೆ ತರುವ ದೂರದರ್ಶನದ ಪ್ರಯತ್ನ ಅದು, ನನಗೆ ಧಾರಾವಾಹಿಯಲ್ಲಿ ನೋಡಿದ ಕಥಾನಕಗಳೆಲ್ಲ ಮರೆತುಹೋಗಿವೆ. ಆದರೆ ಅದರ ಶೀರ್ಷಿಕೆ ಗೀತೆ ಮಾತ್ರ ಕಿವಿಯಲ್ಲಿ ಮತ್ತೆಮತ್ತೆ ಗುಂಯ್‍ಗುಡುತ್ತದೆ. “ವಹಾ ಸತ್ ಭೀ ನಹೀ ಥಾ, ಅಸತ್ ಭೀ ನಹೀ.. ಅಂತರಿಕ್ಷ್ ಭೀ ನಹೀ, ಆಕಾಶ್ ಭೀ ನಹೀ ಥಾ” (ಅಲ್ಲಿ ಸತ್ಯವೂ ಇರಲಿಲ್ಲ, ಅಸತ್ಯವೂ ಇರಲಿಲ್ಲ. ಅಂತರಿಕ್ಷವೂ ಇಲ್ಲ, ಆಕಾಶವೂ ಇರಲಿಲ್ಲ) ಎನ್ನುವ ಈ […]

ಸರಸ್ವತಿಯನ್ನು ಹರಾಕಿತಿ ಎಂದವರ ಕಿತಾಪತಿ : ವಿಶ್ವಗುರು ಅಂಕಣ ~ 8

Monday, May 18th, 2015

ಯಾವಾಗಲಾದರೂ ಬದರೀನಾಥಕ್ಕೆ ಹೋಗಿದ್ದೀರಾ? ದೇವರ ದರ್ಶನ ಮಾಡಿಕೊಂಡು ಸ್ವಲ್ಪ ಗುಡ್ಡದೆಡೆಗೆ ಹೋದರೆ ನೂರು – ನೂರಿಪ್ಪತ್ತು ಅಡಿ ಅಂತರದಲ್ಲಿ ಎರಡು ಪುಟ್ಟ ಗುಹೆಗಳು. ಒಂದರಲ್ಲಿ ವ್ಯಾಸರು, ಮತ್ತೊಂದರಲ್ಲಿ ಗಣೇಶ ಕುಳಿತಿರುತ್ತಿದ್ದರಂತೆ. ವ್ಯಾಸರು ಹೇಳುವ ಮಹಾಭಾರತ ಕಥನವನ್ನು ಗಣೇಶ ಬರೆದುಕೊಳ್ಳುತ್ತಿದ್ದನಂತೆ. ಇವೆರಡರ ಜೊತೆಗೇ ಅಲ್ಲಿ ಹುಟ್ಟಿ, ಭೋರ್ಗರೆದು ಕಾಣೆಯಾಗಿಬಿಡುವ ನೀರಿನ ಸ್ರೋತವೊಂದಿದೆ. ಅದನ್ನು ಸರಸ್ವತಿ ಅಂತಾರೆ. ಆಕೆಗೆ ಹರಿವಿನ ಸದ್ದು ಕಡಿಮೆ ಮಾಡಿಕೊಳ್ಳುವಂತೆ ಕೇಳಿಕೊಂಡರೂ ಆಕೆ ಮನ್ನಿಸದೆ ಹೋದಾಗ ಲುಪ್ತವಾಗಿ ಹೋಗೆಂದು ಶಾಪ ಕೊಟ್ಟಿದ್ದನಂತೆ ಗಣಪ. ಅಂದಿನಿಂದ ಆಕೆ […]

ವಾಸ್ತವ ಇತಿಹಾಸವನ್ನು ಒಪ್ಪಿಕೊಳ್ಳಲೇಕೆ ಹಿಂಜರಿಕೆ!?

Sunday, May 10th, 2015

ಆನೆಗೆ ಮೂರೇ ಕಾಲು ಎಂದು ನಂಬೋದು, ಅನಂತರ ಕಾಡಿನಲ್ಲಿ ಆನೆಯ ಜಾಡನ್ನು ಹಿಡಿದು ಪ್ರಯತ್ನಪೂರ್ವಕವಾಗಿ ಮೂರು ಮೂರೇ ಕಾಲುಗಳನ್ನು ಗುರುತಿಸೋದು. ಕೊನೆಗೊಮ್ಮೆ ಯಾರಾದರೂ ನಾಲ್ಕನೇ ಕಾಲನ್ನು ತೋರಿಸಿದರೆ ಒಂದೋ ಆ ವಾದವನ್ನೆ ತಳ್ಳಿ ಹಾಕುವುದು ಅಥವಾ ಅದೊಂದು ರೋಗಿಷ್ಠ ಆನೆ ಎಂದುಬಿಡೋದು. ಏಕೆಂದರೆ ಆನೆಗೆ ಮೂರೇ ಕಾಲು ಎಂಬ ನಂಬಿಕೆ ಅಷ್ಟರೊಳಗೆ ಸತ್ಯವೆಂದು ಒಪ್ಪಿಗೆಯಾಘಿಬಿಟ್ಟಿರುತ್ತದೆ! ಭಾರತದ ಇತಿಹಾಸ ಕುರಿತಂತೆಯೂ ಇದೇ ರೀತಿಯ ಅಪದ್ಧಗಳು ನಡೆದುಹೋಗಿವೆ. ಆರ್ಯರು ಆಕ್ರಮಣಕಾರರೆಂದು ನಂಬಿದರು. ಸಿಕ್ಕ ಸಾಕ್ಷ್ಯಗಳನ್ನು ಈ ನಂಬಿಕೆಗೆ ಹೊಂದಿಸಲು ಹರ […]

ಸ್ವಂತ ಮನೆಯೊಳಗೆ ನಾವೇ ಪರಕೀಯರಾ? ~ ವಿಶ್ವಗುರು – ೬

Monday, May 4th, 2015

ಆರ್ಯರ ಆಕ್ರಮಣ ಸಿದ್ಧಾಂತವನ್ನು ಇಂದಿನ ಜನಜೀವನ ಎಳ್ಳಷ್ಟೂ ಸಮರ್ಥಿಸುವುದಿಲ್ಲ. ದ್ರವಿಡ ವಾದದ ಆಧಾರದ ಮೇಲೆ ಪ್ರತ್ಯೇಕತೆಯ ಸೌಧ ಕಟ್ಟಿ, ರಾಜಕಾರಣದ ಬೇಳೆ ಬೇಯಿಸಿಕೊಂಡ ಕೆಲವರು ಅನಿವಾರ್ಯಕ್ಕೆ ಬಸುರಾಗುತ್ತಿದ್ದಾರೆ ಬಿಟ್ಟರೆ, ಇದು ಸಹಜ ಪ್ರಕ್ರಿಯೆಯಲ್ಲ. ಜಗತ್ತು ಕ್ರಿ.ಪೂ.4004ರ ಅಕ್ಟೋಬರ್ 23 ಬೆಳಗ್ಗೆ ಒಂಭತ್ತು ಗಮಟೆಗೆ ಸರಿಯಾಗಿ ಹುಟ್ಟಿತು. ಹೀಗೆ ಹೇಳಿದ್ದು ಯಾವುದೇ ವಿಜ್ಞಾನಿಯೂ ಅಲ್ಲ, ಭಾರತದ ಜ್ಯೋತಿಷಿಯೂ ಅಲ್ಲ. ಇದು ಬೈಬಲ್ ನೊಳಗಿರುವ ನಂಬಿಕೆ. ಜಗತ್ತಿನ ಇತಿಹಾಸವೆಲ್ಲ ಇದಕ್ಕೆ ಅನುಗುಣವಾಗಿಯೇ ಇರಬೇಕೆಂದು ಪಶ್ಚಿಮದ ಸಾಹಿತಿಗಳೂ ಕೆಲವು ವಿಜ್ಞಾನಿಗಳೂ ನಂಬುತ್ತಾರೆ. […]