ವಿಭಾಗಗಳು

ಸುದ್ದಿಪತ್ರ


 

Archive for July, 2015

ಕುಂಡಲಿನಿ, ನಮ್ಮೊಳಗಿನ ಸುಪ್ತ ಶಕ್ತಿ ಸಂಜೀವಿನಿ

Monday, July 27th, 2015

ಶಿವನಿಗೆ ಮೂರನೇ ಕಣ್ಣು ಇರೋದು ಕಲಾವಿದನ ಕಲ್ಪನೆಯಾ ಅಥವಾ ಹಾಗೊಂದು ಸಾದ್ಯತೆ ಇದೆಯಾ? ಹೌದು, ಪುರಾಣದ ಕಥೆಗಳು ನಮ್ಮನ್ನು ಪ್ರಗತಿಂದ ದೂರ ತಳ್ಳಿಬಿಡುವ ಭಯ ಯಾವಾಗಲೂ ಇದ್ದದ್ದೇ. ಆದರೆ ಪ್ರಾಮಾಣಿಕವಾಗಿ ಹೇಳಿ, ಅನೇಕ ಬಗೆಯ ಅತೀಂದ್ರಿಯ ಶಕ್ತಿಗಳು ನಮಗೂ ಇಲ್ಲವೇ? ಉದಾಹರಣೆಗೆ ಕೆಲವು ಅಪರೂಪದ ಘಟನೆಗಳು ಆಗಾಗ ನಮ್ಮ ಅನುಭವಕ್ಕೆ ಬರುತ್ತಲೇ ಇರುತ್ತವೆ. ಯಾರನ್ನೋ ಉತ್ಕಟವಾಗಿ ನೆನಪಿಸಿಕೊಳ್ಳುತ್ತಿರುತ್ತೇವೆ, ಅವರ ಫೋನ್ ಕಾಲ್ ಬರುತ್ತೆ ಅಥವಾ ಅವರೇ ಹಾಜರಾಗಿಬಿಡ್ತಾರೆ. ಆಗೆಲ್ಲ ನಿಮಗೆ ನೂರು ವರ್ಷ ಆಯಸ್ಸು ಅಂತೀವಿ. ದೂರದೂರಿನಲ್ಲಿ […]

ಇದು ಬೌದ್ಧಿಕ ಕ್ಷತ್ರಿಯರ ಯುದ್ಧ

Tuesday, July 21st, 2015

ಅಮೇರಿಕಾದ ಪ್ರಿಸ್ನಟನ್ ನ ಶಾಲೆ. ಅಲ್ಲಿನ ಶಿಕ್ಷರರೊಬ್ಬರು ದೆಹಲಿ ಮೂಲದ ಹಿಂದೂವೊಬ್ಬರನ್ನು ವಿವೇಕಾನಂದರು ಮತ್ತು ರಾಮಕೃಷ್ಣರ ಕುರಿತಂತೆ ಮಕ್ಕಳಿಗೆ ಪಾಠ ಮಾಡಬಾರದೆಂದು ನುಡಿದರು.ಆಶ್ಚರ್ಯಚಕಿತರಾದ ಆತ ಹುಬ್ಬೇರಿಸಿ ಏಕೆಂದು ಕೇಳಿದರೆ ಅವರು ಸಲಿಂಗಕಾಮಿಗಳಾಗಿದ್ದರಂತೆ ಎಂಬ ಉತ್ತರ ಬಂತು.ಬೆಚ್ಚಿ ಬಿದ್ದ ಭಾರತೀಯ ಮೂಲದ ವ್ಯಕ್ತಿ ಹಾಗೆ ಹೇಳಿದ್ದು ಯಾರೆಂದು ಕೇಳಿದ್ದಕ್ಕೆ ಅವರು ಆತನ ಕೈಗೊಂದು ಪುಸ್ತಕವಿತ್ತರು.ಅದು ಜೆಫ್ರಿ ಕೃಪಾಲ್ ಬರೆದಿದ್ದ ‘ಕಾಳಿಯ ಮಕ್ಕಳು’. ಕೃತಿಯುದ್ದಕ್ಕೂ ವಿಕೃತಿಗಳೇ ತುಂಬಿದ್ದುದನ್ನು ಕಂಡು ಅಸಹ್ಯದಿಂದ ಬೆಂದು ಹೋದ ಆತ ಅಮೇರಿಕಾದ ಬುದ್ಧಿವಂತರ ನಡುವೆ ತಿರುಗಾಡುತ್ತಿರುವ […]

ಭಾರತೀಯ ಚಿಂತನೆಗಳು ಜಗವನ್ನೆ ಆಳಲಾರಂಭಿಸಿವೆ…!

Monday, July 20th, 2015

ರಮಣ ಮಹರ್ಷಿಗಳ ಬದುಕಿನ ಈ ಘಟನೆ ಬಲು ಜನಜನಿತ. ಅದೊಮ್ಮೆ ಅವರು ಭಕ್ತರೊಂದಿಗೆ ಮಾತಾಡುತ್ತ ಕುಳಿತಿದ್ದರು. ಅವರ ತೋಳಿನ ಹುಣ್ಣಿಗೆ ಚಿಕಿತ್ಸೆ ನೀಡಲೆಂದು ಅದೇ ಹೊತ್ತಿಗೆ ವೈದ್ಯರು ಬಂದರು. ಚಿಕಿತ್ಸೆ ಸಮಯದಲ್ಲಿ ತೀವ್ರ ನೋವು ಉಂಟಾಗುತ್ತದೆಯಾದ್ದರಿಂದ ಅರೆವಳಿಕೆ ಮದ್ದು ಕೊಡುವುದು ಒಳ್ಳೆಯದೆಂದು ವೈದ್ಯರ ಅಭಿಮತ. ರಮಣರು ನಿರಾಕರಿಸಿದರು. “ತೋಳಿನಿಂದ ಮನಸ್ಸನ್ನು ತೆಗೆದುಬಿಡುತ್ತೇನೆ. ಆಮೇಲೆ ಏನು ಬೇಕಾದರೂ ಮಾಡಿಕೊಳ್ಳಿ” ಎಂದು ಒಂದು ನಿಮಿಷ ಕಣ್ಮುಚ್ಚಿ ತೆರೆದರು. ಭಕ್ತರೊಂದಿಗೆ ಮಾತುಕತೆ ಮುಂದುವರೆಯಿತು. ಅತ್ತ ವೈದ್ಯರು ತಮ್ಮ ಉಪಚಾರ ಶುರು ಮಾಡಿದರು. […]

ಆಲೋಚನೆಗಳ ಹಿಂದಿನ ಚಿತ್ತ ವಿಚಿತ್ರ

Wednesday, July 15th, 2015

ನಾನು ಖಂಡಿತವಾಗಿ ವಿಜ್ಞಾನದ ವಿರೋಧಿಯಲ್ಲ. ಆದರೆ ಎಲ್ಲ ಪ್ರಶ್ನೆಗೂ ಭೌತಿಕ ವಿಜ್ಞಾನ ಉತ್ತರಿಸಬಲ್ಲದು ಎಂಬುದನ್ನು ಒಪ್ಪಲಾರೆ ಅಷ್ಟೇ. ಮತ್ತೆ ಮತ್ತೆ ಒತ್ತಿ ಹೇಳುತ್ತೇನೆ; ಯಾವ ಪ್ರಶ್ನೆಗೆ ವಿಜ್ಞಾನ ಉತ್ತರಿಸುವುದನ್ನು ನಿಲ್ಲಿಸುವುದೋ, ಅಲ್ಲಿಂದಾಚೆಗೆ ಅಧ್ಯಾತ್ಮ ಶುರುವಾಗುತ್ತದೆ. ಸುಮ್ಮನೆ ಚರ್ಚೆ ಯಾಕೆ? ಸೈನಿಕರಾಗಿದ್ದ ಹಜಾರೆ, ಜೀವನದಲ್ಲಿ ನೊಂದು ಬೆಂದು ಆತ್ಮಹತ್ಯೆಯ ತಯಾರಿಯಲ್ಲಿದ್ದಾಗ ವಿವೇಕಾನಂದರ ಮಾತಿನ ಸಾಲುಗಳಿಂದ ಪ್ರಭಾವಿತರಾಗಿ ಬದುಕು ಬದಲಿಸಿಕೊಂಡರು – ಹಾಗಂತೆ ಓದಿದ್ದೇವೆ, ಅಣ್ಣಾ ಬಾಯಿಂದಲೂ ಕೇಳಿದ್ದೇವೆ. ಈಗ ಹೇಳಿ. ಅಣ್ಣಾ ವಿವೇಕಾನಂದರಿಂದ ಪ್ರಭಾವಿತರಾದ ದಿನ ವೈಜ್ಞಾನಿಕವಾಗಿ ಆದದ್ದೇನು? ಅಣ್ಣಾ ದೇಹದಲ್ಲಿ ಆಮ್ಲಜನಕ ಹೆಚ್ಚಾಯ್ತೆ? ಜಲಜನಕವೋ? ಪ್ರಭಾವವಾಗಿದ್ದು ಇಂದ್ರಿಯಗಳ ಮೇಲೋ, […]