ವಿಭಾಗಗಳು

ಸುದ್ದಿಪತ್ರ


 

Archive for August, 2015

ವಿವೇಕಾನಂದರೇಕೆ ನಮ್ಮ ಮನೆಯಲ್ಲಿ ಹುಟ್ಟೋದಿಲ್ಲ?

Monday, August 24th, 2015

ನಮ್ಮ ಪರಮ ವೈಭವವನ್ನು ಮರೆತಿರುವ ನಾವೂ ಓಜಸ್ಸನ್ನೂ, ತೇಜಸ್ಸನ್ನೂ ಕಳೆದುಕೊಂಡು ಪ್ರಾಣವಿಹೀನರಾಗಿಬಿಟ್ಟಿದ್ದೇವೆ. ಹೀಗಾಗಿಯೇ ಹೊಸ ಆಲೋಚನೆಗಳು, ಹೊಸ ಭರವಸೆಗಳು ಇಲ್ಲಿಂದ ಹೊರಡುತ್ತಲೇ ಇಲ್ಲ. ಹೀಗೊಂದು ಲೆಕ್ಕಾಚಾರನಿಮಗಾಗಿ. ಆನೆಗಳು ನಿಮಿಷಕ್ಕೆ ನಾಲ್ಕು ಬಾರಿ ಉಸಿರಾಟ ನಡೆಸುತ್ತವೆ. ಅವುಗಳ ಆಯಸ್ಸು ಸುಮಾರು 150 ವರ್ಷ. ಕುದುರೆಗಳ ಉಸಿರಾಟದ ದರ ನಿಮಿಷಕ್ಕೆ ಎಂಟರಿಂದ ಹದಿನೈದು. ಅವುಗಳ ಸರಾಸರಿ ಆಯಸ್ಸು 50 ವರ್ಷ. ಮಂಗಗಳು ನಿಮಿಷಕ್ಕೆ ಸುಮಾರು ಮೂವತ್ತು ಬಾರಿ ಉಸಿರಾಡುತ್ತವೆ; 20 ವರ್ಷ ಬದುಕುತ್ತವೆ. ನಿಮಿಷಕ್ಕೆ 20 ರಿಂದ 30 ಬಾರಿ […]

ಜರಡಿ ಹಿಡಿದು ಸಂಗ್ರಹಿಸಿದ್ದು ತೇಜಸ್ಸಿನ ಶಕ್ತಿ, ಓಜಸ್ಸಿನ ಬೆಂಕಿ!

Monday, August 17th, 2015

“ರ್ಯವನ್ನು ಮೇಲ್ಮುಖವಾಗಿ ಏರಿಸಿ ಹೃದಯ ಭಾಗದಲ್ಲಿ ಓಜಸ್ಸಾಗಿ ನಿಲ್ಲಿಸಿದರೆ ಬ್ರಹ್ಮ-ವಿಷ್ಣುವಿನ ಸಮಾಗಮ. ಇಲ್ಲಿಂದಲೂ ಇದನ್ನು ಮೇಲ್ಮುಖವಾಗಿ ಒಯ್ದು ಸಹಸ್ರಾರದಲ್ಲಿ ಒಂದು ಮಾಡಿದರೆ ತ್ರಿಮೂರ್ತಿಗಳ “ಲನ. ಸಹಜವಾಗಿಯೇ ಅಂತಹ ವ್ಯಕ್ತಿ ಸ್ಟೃಸಬಲ್ಲ ರಕ್ಷಿಸಬಲ್ಲ ಮತ್ತು ಲಯಕಾರಿಯೂ ಆಗಬಲ್ಲ! ‘ಅವನ ಮುಖದಲ್ಲಿ ಅದೆಂಥ ತೇಜಸ್ಸು ನೋಡು’. ಕೆಲವರನ್ನು ಕಂಡಾಗ ಹಾಗೊಮ್ಮೆ ಉದ್ಗರಿಸಬೇಕು ಎನಿಸಿಲ್ಲವೇ? ‘ ಓಜಸ್ವಿಯಾಗು, ವೀರ್ಯವಂತನಾಗು’ ಅಂತಲ್ಲ ಆಶೀರ್ವಾದ ಮಾಡೋದನ್ನು ಕೊನೇ ಪಕ್ಷ ರಾಮಾಯಣ, ಮಹಾಭಾರತ ಧಾರಾವಾಹಿಗಳಲ್ಲಾದರೂ ನೋಡಿರಬೇಕು. ಏನು ಹಾಗೆಂದರೆ ಅನ್ನೋ ಪ್ರಶ್ನೆ ಯಾವಾಗಲಾದರೂ ಕಾಡಿದೆಯಾ? ವೀರ್ಯಕ್ಕೂ-ಓಜಸ್ಸಿಗೂ-ತೇಜಸ್ಸಿಗೂ […]

ಪ್ರೇಮ ಲೋಕಕ್ಕಿಂತಲೂ ರೋಚಕವಾದದ್ದು ಪ್ರಾಣ ಲೋಕ!!

Monday, August 10th, 2015

ಯಾರಾದರೂ ಸತ್ತಾಗ ‘ಪ್ರಾಣ ಹೋಯ್ತು’ ಅಂತೇವಲ್ಲ; ಅಲಂಕಾರಿಕವಾಗಿ ’ಪ್ರಾಣ ಪಕ್ಷಿ ಹಾರಿ ಹೋಯ್ತು’ ಅಂತಾನೂ ಹೇಳುತ್ತೇವೆ. ಅದಾದ ನಂತರವೂ ಕಿಡ್ನಿ, ಕಣ್ಣುಗಳು ಜೀವಂತವಾಗಿರುತ್ತವಲ್ಲ. ಮತ್ತೆ ಹಾರಿ ಹೋಗಿದ್ದು ಏನು? ಸತ್ತು ಹೋದನೆಂದು ವೈದ್ಯರು ಘೋಷಿಸಿದ ಮೇಲೂ ಅಂಗಾಂಗಗಳು ಬದುಕಿದ್ದು ಹೇಗೆ? ಹೀಗೆ ಅಂಗಾಂಗಗಳು ಬದುಕಿದ್ದಾಗಲೇ ಯಾರಾದರೂ ಸಮರ್ಥ ಯೋಗಿಗಳು ಪ್ರಾಣಶಕ್ತಿಯನ್ನು ಧಾರೆ ಎರೆದರೆ ಮತ್ತೆ ವ್ಯಕ್ತಿಯನ್ನು ಜೀವಂತ ಮಾಡಿಬಿಡಬಹುದೇ? ಸಾವಿತ್ರೀ ಸತ್ಯವಾನನ ಅಂಗಾಂಗಗಳು ನಿಷ್ಕ್ರಿಯವಾಗುವುದಕ್ಕೆ ಮುನ್ನವೇ ಯಮನನ್ನು ಕಾಡಿ-ಬೇಡಿ ಪ್ರಾಣಶಕ್ತಿ ಹರಿಸಿಕೊಂಡಳಾ? ‘ಸ್ವರಾಜ್ಯ ನನ್ನ ಆಜನ್ಮಸಿದ್ಧ ಹಕ್ಕು’ಎನ್ನುವ […]

ಹಾದಿ ತಪ್ಪಾದರೆ ಎದ್ದ ಕುಂಡಲಿನಿಯೇ ಬೀಳಿಸಬಹುದು!!

Monday, August 3rd, 2015

1996 ರ ವಿಶ್ವಕಪ್ ಕ್ರಿಕೆಟ್ ನೆನಪಿದೆಯಾ? ಕ್ವಾರ್ಟ್‍ರ್ ಫೈನಲ್ ಪಂದ್ಯ. ಪಾಕಿಸ್ತಾನದೊಂದಿಗೆ ಭಾರತದ್ದು. ಬೆಂಗಳೂರಿನಲ್ಲಿ ನಡೆದಿತ್ತು. ಅಮೀರ್ ಸೋಹೈಲ್ ವೆಂಕಟೇಶ್ ಪ್ರಸಾದರ ಚೆಂಡನ್ನು ಬೌಂಡರಿಗಟ್ಟಿ ‘ ಹೇಗಿದೆ?’ ಎಂದು ವಿಕೃತ ನಗೆ ನಕ್ಕಿದ್ದರು. ಅದು ವೆಂಕಟೇಶ ಪ್ರಸಾದರನ್ನು ಅದ್ಯಾವ ಪರಿ ಕೆಣಕಿತ್ತೆಂದರೆ, ಇದ್ದ ಬದ್ದ ಶಕ್ತಿಯನ್ನೆಲ್ಲಾ ಕ್ರೋಢೀಕರಿಸಿ ಆತ ಎಸೆದ ಮರು ಚೆಂಡು ವಿಕೇಟನ್ನು ಉರುಳಿಸಿ ಅಮೀರ್ ಸೋಹೈಲ್‍ರನ್ನು ಪೆವಿಲಿಯನ್‍ಗಟ್ಟಿತ್ತು. ಎಲ್ಲಾ ಕ್ರಿಕೆಟ್ ಪ್ರೇಮಿಗಳಲ್ಲೂ ಮಿಂಚು ಹರಿದಿತ್ತು. ಅದು ವೆಂಕಿ ಜೀವನದ ‘ಬೆಸ್ಟ್ ಬಾಲ್’. ಈ ರೀತಿಯ […]