ವಿಭಾಗಗಳು

ಸುದ್ದಿಪತ್ರ


 

Archive for October, 2012

ಇವರಿಗೆಲ್ಲ ಸ್ಫೂರ್ತಿ ಎಲ್ಲಿಂದ ಸ್ಫುರಿಸುತ್ತದೆಯೋ!

Saturday, October 27th, 2012

ಪ್ರೇರಣೆ ಎಲ್ಲಿಂದ, ಹೇಗೆ ಸಿಗುತ್ತೋ ದೇವರೇ ಬಲ್ಲ. ಕೆಲವರೊಡನೆ ಮಾತನಾಡಿದರೆ, ಕೆಲವರನ್ನು ನೋಡಿದರೆ, ಕೆಲವರ ಕುರಿತು ಓದಿದರೆ, ಕೇಳಿದರೂ ಸಾಕು- ಹೀಗೆ ಬದುಕಬೇಕು ಎನ್ನಿಸಿಬಿಡುತ್ತೆ. ಆರೇಳು ತಿಂಗಳ ಹಿಂದೆ ಅರುಣಾಚಲಕ್ಕೆ ಕಾಲಿಡುವ ಮುನ್ನ ಗೌಹಾಟಿಗೆ ಹೋಗಿದ್ದೆ. ಮಿತ್ರರ ಸಹಾಯದಿಂದ ವಿವೇಕಾನಂದ ಕೇಂದ್ರದಲ್ಲಿ ಉಳಕೊಳ್ಳಲು ಅವಕಾಶ ಸಿಕ್ಕಿತ್ತು. ಅರುಣಾಚಲದೊಳಕ್ಕೆ ಹೋಗಲು ಬೇಕಾದ ಅನುಮತಿ ಪತ್ರಕ್ಕಾಗಿ ಕಾಯುತ್ತ ಕುಳಿತಿದ್ದೆ. ಆಗ ಪರಿಚಯವಾದರವರು ಸುಜಾತಾ ದೀದಿ. ಅಸ್ಸಾಮ್‌ನ ವಿವೇಕಾನಂದ ಕೇಂದ್ರ ಸಂಬಂಧಿತ ಚಟುವಟಿಕೆಗಳೆಲ್ಲದರ ಕೇಂದ್ರ ಅವರು. ದೀದಿ ಮೂಲತಃ ಕನ್ನಡಿಗರು. ಉಡುಪಿ […]

ಸಸ್ಯಶಾಸ್ತ್ರದ ಮಹಾಬೋಧಿ

Sunday, October 21st, 2012

ಕೆಲವೊಮ್ಮೆ ಬದುಕಿನಲ್ಲಿ ಎಂತೆಂಥ ಅವಕಾಶಗಳನ್ನು ಕಳೆದುಕೊಂಡುಬಿಡುತ್ತೇವೆ ಗೊತ್ತಾ? ಬಹುಕಾಲದವರೆಗೂ ಅದರ ಬಗ್ಗೆ ಮೆಲುಕು ಹಾಕುವಾಗಲೆಲ್ಲ ಹೊಟ್ಟೆಯಲ್ಲಿ ತಳಮಳವಾಗುತ್ತೆ. ಸಂತನಂತೆ ಬದುಕಿ, ಋಷಿಯಂತೆ ತಪಸ್ಸುಗೈದು, ಪರಿವ್ರಾಜಕನಾಗಿ ಜಗವ ಸುತ್ತಿ ತನ್ನೊಳಗಿನ ಜ್ಞಾನವನ್ನೆಲ್ಲ ಧಾರೆಯೆರೆದು, ಮರಳಿ ಮಾತೃಭೂಮಿಗೆ ಬಂದು ಜ್ಞಾನಸ್ರೋತಕ್ಕೆ ನಮಿಸಿದ ಸಸ್ಯಶಾಸ್ತ್ರ ಪಂಡಿತ ಪಲ್ಲತಡ್ಕ ಕೇಶವ ಭಟ್ಟರನ್ನು ಒಮ್ಮೆಯೂ ನೋಡುವುದಾಗಲಿಲ್ಲವೆಂಬ ಸಂಕಟ ಅದು. ಭಾರತೀಯ ಸಿದ್ಧಾಂತಗಳನ್ನೆ ನಂಬಿ, ಅದರಂತೆ ಬದುಕಿ ಸತ್ಯ ಸಾಕ್ಷಾತ್ಕಾರ ಮಾಡಿಕೊಂಡ ವ್ಯಕ್ತಿ ಅವರು. ಒಲವು ಆಯುರ್ವೇದದ ಕಡೆಗಿದ್ದರೂ ಅದರ ಮೂಲದ ಹುಡುಕಾಟಕ್ಕೆಂದೇ ಸಸ್ಯಶಾಸ್ತ್ರವನ್ನು ಅರಸಿ […]

ಹದಿನಾಲ್ಕರ ಬಾಲೆಗೆ ಹೆದರಿದ ತಾಲಿಬಾನಿ ಹೇಡಿಗಳು!

Saturday, October 13th, 2012

’ನನ್ನ ಪಾಕಿಸ್ತಾನದ ಕನಸು ಇಂತಹದುಲ್ಲ. ಅಲ್ಲಿ ಶಾಂತಿ ಇರಬೇಕು. ನೆರೆಯವರೊಂದಿಗೆ ಸೌಹಾರ್ದ ಗೆಳೆತನವಿರಬೇಕು. ನನ್ನ ಪಾಕಿಸ್ತಾನದಲ್ಲಿ ಹಗರಣಗಳಿರಬಾರದು. ಶತ್ರುಗಳಿಲ್ಲದ ರಾಷ್ಟ್ರವಾಗಿರಬೇಕು ಅದು.’ ಹಾಗಂತ ಪಟಪಟನೆ ಮಾತನಾಡುತ್ತ ಇಂತಹದೊಂದು ರಾಷ್ಟ್ರದ ನಿರ್ಮಾಣಕ್ಕೆ ಅಗತ್ಯಬಿದ್ದಲ್ಲಿ ಓದು ಮುಗಿಸಿ ರಾಜಕಾರಣಕ್ಕೂ ಧುಮುಕುವೆನೆಂದು ಪತ್ರಕರ್ತರ ಮುಂದೆ ಹೇಳಿದ್ದು ಬೆನಜಿರ್ ಭುಟ್ಟೋ ಅಲ್ಲ. ಹದಿಮೂರರ ಬಾಲೆ ಮಲಾನಾ ಯೂಸುಫ್ ಜಾಯ್. ಹೌದು. ಮೊನ್ನೆ ದುಷ್ಟ ತಾಲಿಬಾನಿಗಳು ಗುಂಡು ಹಾರಿಸಿ ಕೊಲ್ಲುವ ಯತ್ನ ನಡೆಸಿದ್ದು ಈ ಹುಡುಗಿಯ ಮೇಲೆಯೇ. ಈಗ ಅವಳಿಗೆ ಹದಿನಾಲ್ಕು ವರ್ಷ ಮಾತ್ರ. ತಾಲಿಬಾನ್ […]

ವಾಲ್‌ಮಾರ್ಟ್‌ ಹಿನ್ನೆಲೆ, ಹುನ್ನಾರ

Monday, October 8th, 2012

ಚಿಲ್ಲರೆ ಕ್ಷೇತ್ರದಲ್ಲಿ ವಿದೇಶಿಗರ ಅಬ್ಬರದ ಕುರಿತು ಕೇಳೀಕೇಳೀ ಬೇಸರ ಬಂದುಬಿಟ್ಟಿದೆಯಲ್ಲವೆ? ಎಷ್ಟೆಲ್ಲ ಮಾತುಗಳು, ಚರ್ಚೆಗಳು, ಸಿದ್ಧಾಂತಗಳು, ಪ್ರತಿವಾದಗಳು! ಈ ವಿಚಾರದ ಸೂಕ್ಷ್ಮತೆ ಅದೆಷ್ಟೆಂದರೆ, ದೇಶ ಹೊತ್ತುರಿಯುವಾಗಲೂ ಮೂಗಿನ ಮೇಲೆ ಬೆರಳಿಟ್ಟಿದ್ದ ಮನಮೋಹನ ಸಿಂಗರು ಈ ಗಲಾಟೆಯಲ್ಲಿ ಬಾಯ್ದೆರೆದರು. ಶತಾಯಗತಾಯ ವಾಲ್‌ಮಾರ್ಟ್‌ನಂತಹ ಚಿಲ್ಲರೆ (?) ಕಂಪನಿಗಳಿಗೆ ಅವಕಾಶ ಮಾಡಿಯೇಕೊಡುತ್ತೇನೆ ಎಂದರು. ದೇಶ ಸ್ವಾತಂತ್ರ್ಯ ಕಂಡ ಆರಂಭದಿಂದಲೂ ಹೀಗೆಯೇ. ನಮಗೆ ಬೇಡವಾದುದಿರಲಿ, ಜಗತ್ತಿನಲ್ಲಿ ಯಾರಿಗೂ ಬೇಡವಾದುದನ್ನೆಲ್ಲ ಇಲ್ಲಿಗೆ ತಂದು ಸುರಿಯುತ್ತಾರೆ. ಇದು ಮೊದಲ ಪ್ರಧಾನಿಯಿಂದ ಹಿಡಿದು ಎಂಡೋಸಲ್ಫಾನಿನವರೆಗೆ, ಎಲ್ಲರಿಗೆ, ಎಲ್ಲದಕ್ಕೆ […]

October – November Programmes

Friday, October 5th, 2012

October – November Programmes   6,7: Abhyasa Varga; Shivamogga 8: ITC Camp; Vijayapura 12: Harate (udaya tv) 13: abhyasa varga; Bengaluru 14: Jagobharath@ hanate prgrm; Bengaluru 16: Bantwala 18,19: Hampi 20: Gangavathi 21: Jagobharath; Rayachuru 23: Balehonnuru 26: Jagobharath; Channenahalli 27: Jagobharath; Mumbai 29: Ponnampete 30: Abhyasawarga; Koramangala   November 1: Rajyotsava, Volvo company, Peenya […]