ವಿಭಾಗಗಳು

ಸುದ್ದಿಪತ್ರ


 

Archive for June, 2018

ಬಹುಕಾಲ ಕಾಡುವ ಮಹಾನಟಿ!

Saturday, June 30th, 2018

ಸಿನಿಮಾ ಒಂದಕ್ಕೆ ವಿಭಿನ್ನ ಆಯಾಮಗಳಿರುತ್ತವೆ. ಬಹುತೇಕರಿಗೆ ಕಥೆಯ ಎಳೆಯೇ ಮುಖ್ಯ. ಇನ್ನೂ ಕೆಲವರು ಆ ಕಥೆಯನ್ನು ಪ್ರಸ್ತುತ ಪಡಿಸಿರುವ ವಿನೂತನ ಶೈಲಿಯ ಕುರಿತಂತೆ ಅಚ್ಚರಿ ವ್ಯಕ್ತಪಡಿಸುತ್ತಾರೆ. ಸ್ವಲ್ಪ ತಾಂತ್ರಿಕ ಜ್ಞಾನ ಇದ್ದವರು ಕಥೆಯನ್ನು ಗಮನಿಸುವುದೇ ಇಲ್ಲ. ಅವರು ಕಥೆಯ ಹಿಂದೆ ತಂತ್ರಜ್ಞರ ವಿಶೇಷ ಪ್ರಯತ್ನಗಳನ್ನು ಗುರುತಿಸುತ್ತಾ ಕುಳಿತಿರುತ್ತಾರೆ. ಸಾಮಾನ್ಯರಾದವರು ನಟ-ನಟಿಯರ ಹಿಂದೆ ಬೆನ್ನು ಬಿದ್ದು ತನ್ನಿಚ್ಛೆಯವರಿದ್ದರೆ ಸಂಗೀತ, ಸಾಹಿತ್ಯ, ನಟನೆ ಎಲ್ಲವನ್ನೂ ಪಕ್ಕಕ್ಕಿಟ್ಟು ಸಿನಿಮಾ ನೋಡಿಬಿಡುತ್ತಾರೆ. ಮಹಾನಟಿ ಈ ಎಲ್ಲ ದೃಷ್ಟಿಯಿಂದಲೂ ಒಂದು ವಿಶಿಷ್ಟವಾದ ಪ್ರಯತ್ನ. ಎಲ್ಲ […]

ಮಲ್ಯ, ಲಲಿತ್ ಹಿಡಿದು ತರುತ್ತಾರಾ ಮೋದಿ?

Sunday, June 24th, 2018

ಮೊದಲೆಲ್ಲ ಇತರೆ ರಾಷ್ಟ್ರಗಳೊಂದಿಗೆ ಮಾತನಾಡುವಾಗ ನಮ್ಮ ಧಾಟಿಯೇ ಬೇರೆ ಇರುತ್ತಿತ್ತು. ಈಗ ನಾವು ಮಾತನಾಡುವ ಶೈಲಿ ಬದಲಾಗಿದೆ. ಇಂಗ್ಲೆಂಡಿರಲಿ ಅಮೇರಿಕಾ ಇರಲಿ ಚೀನಾ-ರಷ್ಯಾಗಳೇ ಇರಲಿ ಭಾರತದ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡೇ ನಮ್ಮ ವಾದ ಚಚರ್ೆಗಳೆಲ್ಲವೂ. ನರೇಂದ್ರಮೋದಿ ಇಂಗ್ಲೆಂಡಿಗೆ ಹೋಗುವ ಮುನ್ನ ತೆರೆಸಾ ಮೇ ಭಾರತದೊಂದಿಗೆ ಮುಕ್ತ ವ್ಯಾಪಾರದ ಮಾತುಗಳನ್ನಾಡಿದ್ದರು. ಹೀಗಾಗಿ ನರೇಂದ್ರಮೋದಿಯವರೊಂದಿಗಿನ ಅವರ ಮಾತುಕತೆಗೆ ಬಹುವಾದ ಬೆಲೆ ಇತ್ತು. 2019 ಕ್ಕೂ ಮುಂಚೆ ನರೇಂದ್ರಮೋದಿಯವರ ಮುಂದೆ ಇರುವ ಕೆಲವು ಸವಾಲುಗಳಲ್ಲಿ ಮಲ್ಯ, ನೀರವ್, ಲಲಿತ್ ಮೂವರನ್ನೂ ಎಳೆದುಕೊಂಡು ಬರುವುದು […]

ಮೆಹಬೂಬಾ ಮುಫ್ತಿಯೊಂದಿಗೆ ವಿಚ್ಛೇದನದ ಲಾಭ ಯಾರಿಗೆ?

Friday, June 22nd, 2018

2012-13 ರ ಎರಡು ವರ್ಷಗಳಲ್ಲಿ ಸುಮಾರು 130 ಭಯೋತ್ಪಾದಕರನ್ನು ಕೊಂದಿದ್ದರೆ ಭಾಜಪ ಅಧಿಕಾರಕ್ಕೆ ಬಂದ ಮೊದಲನೇ ವರ್ಷದಲ್ಲಿಯೇ 110, 2015 ರಲ್ಲಿ 108, 2016 ರಲ್ಲಿ 150, 2017 ರಲ್ಲಿ 217 ಮತ್ತು ಈ ಮೈತ್ರಿ ಮುರಿದು ಬೀಳುವ ಮುನ್ನ ಈ ವರ್ಷದಲ್ಲಿ ಅದಾಗಲೇ 75 ಭಯೋತ್ಪಾದಕರನ್ನು ಯಮಪುರಿಗೆ ಅಟ್ಟಿಬಿಟ್ಟಿದೆ. ಇದು ಪಿಡಿಪಿಯದ್ದೇ ಸಕರ್ಾರ ಇದ್ದಾಗಲೂ ಭಾಜಪ ಮಾಡಿದ ಅಪರೂಪದ ಸಾಧನೆ. ಮೇಲ್ನೋಟಕ್ಕೆ ನೋಡಲು ಪಿಡಿಪಿಯ ಸಕರ್ಾರ ಕೇಂದ್ರ ಸಕರ್ಾರದ ಮೇಲೆ ಏರಿ ಹೋಗಿದೆ ಎನಿಸುತ್ತದೆ. ಜಮ್ಮು-ಕಾಶ್ಮೀರದಲ್ಲಿ […]

ವಿಧಾನಸಭೆಯಂತೆ ಲೋಕಸಭೆಯನ್ನು ಅಂತತ್ರ ಮಾಡಬಾರದಷ್ಟೇ!

Sunday, June 17th, 2018

ಇವೆಲ್ಲದರ ಕಿತ್ತಾಟದಲ್ಲಿ ಕನರ್ಾಟಕವಾದರೂ ಗೆದ್ದಿತಾ ಎಂದು ಕೇಳಿದರೆ ಅದನ್ನೂ ಇಲ್ಲವೆಂದೇ ಹೇಳಬೇಕು. ಕಳೆದ 5 ವರ್ಷಗಳ ಕಾಲ ಸಿದ್ದರಾಮಯ್ಯನವರ ಆಡಳಿತ ಸ್ಥಿರವಾಗಿತ್ತು ಎನ್ನವುದನ್ನು ಬಿಟ್ಟರೆ ಅದು ಕನರ್ಾಟಕಕ್ಕೆ ಗಳಿಸಿಕೊಟ್ಟಿದ್ದು ಅತ್ಯಲ್ಪ. ಈಗಾಗಲೇ ಸಾಲದ ಹೊರೆ ಹೊತ್ತಿರುವ ರಾಜ್ಯ ರೈತರ ಸಾಲ ಮನ್ನಾ ಅಲ್ಲದೇ ಇನ್ನೊಂದಿಷ್ಟು ಜನಪ್ರಿಯ ಘೋಷಣೆಗಳ ಭಾರಕ್ಕೆ ನಲುಗಿ ಕುಸಿದೇ ಹೋಗುತ್ತದೆ. ಮುಂದಿನ 5 ವರ್ಷಗಳ ಕಾಲ ತಮ್ಮ ತಮ್ಮ ಅಧಿಕಾರವನ್ನು ಭದ್ರವಾಗಿ ಹಿಡಿದುಕೊಳ್ಳುವಲ್ಲೇ ಹೆಣಗಾಡುವ ಮಂತ್ರಿ, ಮುಖ್ಯಮಂತ್ರಿಗಳು ಸಮರ್ಥವಾದ ರಾಜ್ಯ ರೂಪಿಸುವಲ್ಲಿ ಆಸ್ಥೆ ತೋರಬಲ್ಲರೆಂದು […]

ರಂಜಾನ್ ಮುಗಿಯಿತು. ಇನ್ನು ಲೆಕ್ಕ ಚುಕ್ತಾ ಮಾಡಬೇಕಷ್ಟೇ!

Saturday, June 16th, 2018

ಕಾಶ್ಮೀರ ಈ ರೀತಿಯ ಶಾಂತ ಸ್ಥಿತಿಗೆ ಮರಳುವುದನ್ನು ಅರಿತೊಡನೆ ಪಾಕಿಸ್ತಾನ ಬೆಂಬಲಿತ ಉಗ್ರರು ಮತ್ತು ಪ್ರತ್ಯೇಕತಾವಾದಿಗಳು ಚಡಪಡಿಕೆಗೆ ಒಳಗಾಗುತ್ತಾರೆ. ಈ ಬಾರಿಯೂ ಹಾಗೆಯೇ ಆಯ್ತು. ಹೇಗಾದರೂ ಮಾಡಿ ಸೈನಿಕರನ್ನು ಭಡಕಾಯಿಸಿ ಕದನವಿರಾಮವನ್ನು ಅವರೇ ಮುರಿಯುವಂತೆ ಮಾಡಬೇಕೆಂಬ ಪ್ರಯತ್ನ ಪ್ರತ್ಯೇಕತಾವಾದಿಗಳಲ್ಲಿ ಖಂಡಿತವಾಗಿಯೂ ಇತ್ತು. ಆದರೆ ಈ ಬಾರಿ ಭಾರತೀಯ ಸೇನೆ ತೋರಿದ ಸಂಭ್ರಮ ಬಲು ಅಪರೂಪದ್ದು. ಈ ಲೇಖನ ಓದುವ ವೇಳೆಗಾಗಲೇ ರಂಜಾನ್ ಮಾಸ ಮುಗಿದು ಹಬ್ಬವೂ ಕಳೆದುಬಿಟ್ಟಿರುತ್ತದೆ. ಅದರೊಟ್ಟಿಗೆ ಕೇಂದ್ರ ಸರ್ಕರ ಏಕಪಕ್ಷೀಯವಾಗಿ ಘೋಷಿಸಿದ್ದ ಕದನವಿರಾಮವೂ ಅಂತ್ಯಗೊಳ್ಳುತ್ತದೆ. […]

ಪ್ರಣಬ್ ಮುಖಜರ್ೀ ಸಂಘ ಭೇಟಿ; ಲಾಭ ಯಾರಿಗೆ?

Sunday, June 10th, 2018

ತಮ್ಮ ವಿರೋಧಿಗಳನ್ನು ಆಹ್ವಾನಿಸುವ ಪರಂಪರೆ ಸಂಘಕ್ಕೆ ಈಗ ಶುರುವಾದುದೇನಲ್ಲ. ಹಿಂದೂ ಮಹಾ ಸಭಾದ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿಂದುತ್ವದ ಚಿಂತನೆಗಳನ್ನು ಒಪ್ಪದ ಮಹಾತ್ಮಾ ಗಾಂಧೀಜಿಯವರು 1934 ರಲ್ಲಿಯೇ ಸಂಘ ವರ್ಗಕ್ಕೆ ಭೇಟಿ ಕೊಟ್ಟಿದ್ದರು. ಇಂದಿರಾರವರು ತುತರ್ು ಪರಿಸ್ಥಿತಿಯನ್ನು ಜಾರಿಗೊಳಿಸಿದಾಗ ಅದರ ವಿರುದ್ಧವಾಗಿ ಸಂಘ ರೂಪಿಸಿದ ಜನಾಂದೋಲನಕ್ಕೆ ಮಾರು ಹೋದ ಇದೇ ಜಯ ಪ್ರಕಾಶ್ ನಾರಾಯಣ್ 1977ರಲ್ಲಿ ಸಂಘದ ವರ್ಗದಲ್ಲಿ ಭಾಗವಹಿಸಿ ಸ್ವಯಂ ಸೇವಕರ ದೇಶಭಕ್ತಿಯನ್ನು ಮನಸಾರೆ ಕೊಂಡಾಡಿದರು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖಜರ್ಿ ರಾಷ್ಟ್ರೀಯ ಸ್ವಯಂ […]

ಅಧಿಕಾರಕ್ಕಾಗಿ ಎಲ್ಲರೂ ಹಸಿದ ನಾಯಿಗಳೇ!!

Friday, June 8th, 2018

ಐಟಿ ರಾಜಧಾನಿಯೆಂದು ಕರೆಸಿಕೊಳ್ಳಲ್ಪಡುವ ಬೆಂಗಳೂರಿಗೆ ಕುಮಾರ ಸ್ವಾಮಿ ಕೊಟ್ಟಿರುವ ಐಟಿ ಮಂತ್ರಿ ಬರಿಯ ದ್ವಿತೀಯ ಪಿಯುಸಿ ಓದಿರುವುದಷ್ಟೇ ಎಂಬುದು ದೇಶಾದ್ಯಂತ ಸುದ್ದಿಯಾಗಬೇಕಿರುವ ವಿಚಾರ. ಬಿಜೇಪಿಗರು ತಲೆ ಕೆಡಿಸಿಕೊಳ್ಳದೇ ಎಲ್ಲವನ್ನು ಮೋದಿ ಮಾಡಲಿ ಎಂದು ಕಾಯುತ್ತ ಕುಳಿತಿದ್ದಾರೆ. ಅಧಿಕಾರದ ದಾಹ ಅದೆಷ್ಟಿದೆಯೆಂದರೆ ನಾಯಿ ಎತ್ತಿನ ವೃಷಣಗಳಿಗೋಸ್ಕರ ಕಾದಂತೆ ಕಾಯುತ್ತಲೇ ಇರುವುದು ಇವರ ಪಾಡಾಗಿಬಿಡುವುದೇನೊ! ರಸ್ತೆಯಲ್ಲಿ ಎತ್ತು ನಡೆದು ಹೋಗುವಾಗ ಹಸಿದ ನಾಯಿಯೊಂದು ಅದನ್ನು ಹಿಂಬಾಲಿಸುತ್ತದೆಯಂತೆ. ನೇತಾಡುತ್ತಿರುವ ಎತ್ತಿನ ವೃಷಣಗಳನ್ನು ಕಂಡು ಅದು ಎತ್ತಿನದೇ ಮಾಂಸವೆಂದು ಭಾವಿಸುತ್ತದೆಯಂತೆ. ಈಗಲೋ ಆಗಲೋ […]

ಮೋದಿ ಹುಡುಕುತ್ತಿರುವ ವಸ್ತು ಅದಾವುದು?

Sunday, June 3rd, 2018

ನೇಪಾಳದ ಭೇಟಿಯ ಒಂದು ವಾರದ ಒಳಗೆ ಮೋದಿ ರಷ್ಯಾಕ್ಕೆ ಹೋದರು. ಈ ಬಾರಿ ಕೂಡ ರಾಜಧಾನಿಯಲ್ಲಿ ಔಪಚಾರಿಕ ಭೇಟಿಯಾಗದೇ ಎರಡೂ ರಾಷ್ಟ್ರಗಳ ನಾಯಕರು ಸೋಚಿಯಲ್ಲಿ ಜೊತೆಯಾದರು, ಅಡ್ಡಾಡಿದರು, ಒಂದಷ್ಟು ಹರಟಿದರು ಎಂದು ಪತ್ರಿಕೆಗಳು ವರದಿ ಮಾಡಿದವು. ಹಾಗೆ ಸುಮ್ಮನೆ ಆಲೋಚಿಸಿ ನೋಡಿ. ತಮ್ಮ ರಾಷ್ಟ್ರಗಳ ಅಭಿವೃದ್ಧಿಗೆ ಪುರಸೊತ್ತಿಲ್ಲದೇ ದುಡಿಯುತ್ತಿರುವ ಮೋದಿ ಮತ್ತು ಪುತಿನ್ರು ಹೀಗೆ ಟೈಮ್ಪಾಸ್ ಮಾಡುತ್ತಾ ಅಡ್ಡಾಡುವುದು ಸಾಧ್ಯವೇನು? ಇತ್ತೀಚೆಗೆ ಅಮೇರಿಕಾ ಪೆಸಿಫಿಕ್ ಸಾಗರದಲ್ಲಿ ಕಾರ್ಯ ನಿರ್ವಹಿಸುವ ತನ್ನ ಕಮಾಂಡೊ ಪಡೆಯ ಹೆಸರನ್ನು ಇಂಡೊ-ಪೆಸಿಫಿಕ್ ಕಮಾಂಡೊ […]

ಮೋದಿ ಹುಡುಕುತ್ತಿರುವ ವಸ್ತು ಅದಾವುದು?

Sunday, June 3rd, 2018

ನೇಪಾಳದ ಭೇಟಿಯ ಒಂದು ವಾರದ ಒಳಗೆ ಮೋದಿ ರಷ್ಯಾಕ್ಕೆ ಹೋದರು. ಈ ಬಾರಿ ಕೂಡ ರಾಜಧಾನಿಯಲ್ಲಿ ಔಪಚಾರಿಕ ಭೇಟಿಯಾಗದೇ ಎರಡೂ ರಾಷ್ಟ್ರಗಳ ನಾಯಕರು ಸೋಚಿಯಲ್ಲಿ ಜೊತೆಯಾದರು, ಅಡ್ಡಾಡಿದರು, ಒಂದಷ್ಟು ಹರಟಿದರು ಎಂದು ಪತ್ರಿಕೆಗಳು ವರದಿ ಮಾಡಿದವು. ಹಾಗೆ ಸುಮ್ಮನೆ ಆಲೋಚಿಸಿ ನೋಡಿ. ತಮ್ಮ ರಾಷ್ಟ್ರಗಳ ಅಭಿವೃದ್ಧಿಗೆ ಪುರಸೊತ್ತಿಲ್ಲದೇ ದುಡಿಯುತ್ತಿರುವ ಮೋದಿ ಮತ್ತು ಪುತಿನ್ರು ಹೀಗೆ ಟೈಮ್ಪಾಸ್ ಮಾಡುತ್ತಾ ಅಡ್ಡಾಡುವುದು ಸಾಧ್ಯವೇನು? ಇತ್ತೀಚೆಗೆ ಅಮೇರಿಕಾ ಪೆಸಿಫಿಕ್ ಸಾಗರದಲ್ಲಿ ಕಾರ್ಯ ನಿರ್ವಹಿಸುವ ತನ್ನ ಕಮಾಂಡೊ ಪಡೆಯ ಹೆಸರನ್ನು ಇಂಡೊ-ಪೆಸಿಫಿಕ್ ಕಮಾಂಡೊ […]

ಈ ಬಾರಿ ಲೋಕಸಭಾ ಚುನಾವಣೆ 2004 ರ ಪುನರಾವರ್ತನೆಯಾ?

Friday, June 1st, 2018

ಉತ್ತರ ಪ್ರದೇಶದ ಕೈರಾನಾದಲ್ಲಿ ಭಾಜಪ ಸೋತಿದ್ದನ್ನು ಮುಂದಿಟ್ಟುಕೊಂಡು ಈ ಮಾಧ್ಯಮಗಳು 2019 ರ ಚುನಾವಣೆಯ ಮೋದಿಯ ಸೋಲಿನ ಮುನ್ಸೂಚನೆ ಎಂಬಂತೆ ಚಿತ್ರೀಕರಿಸಿಬಿಟ್ಟವು. ಆದರೆ ಗಮನಿಸಬೇಕಾದ ಸಂಗತಿಯೊಂದಿದೆ. ಕೈರಾನಾದಂತಹ ಸಾಮಾನ್ಯ ಚುನಾವಣೆಯೊಂದನ್ನೆದುರಿಸಲು ಕಾಂಗ್ರೆಸ್ಸು, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷಗಳು ಒಟ್ಟಾಗಿ ರಾಷ್ಟ್ರೀಯ ಲೋಕ ದಳವನ್ನು ಬೆಂಬಲಿಸಿದ್ದವು. 2004 ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಾಗ ಅಟಲ್ ಬಿಹಾರಿ ವಾಜಪೇಯಿ ಸೋಲಬಹುದೆಂದು ಯಾರೂ ಎಣಿಸಿರಲಿಲ್ಲ. ಅದೊಂದು ಅನಿರೀಕ್ಷಿತ ಆಘಾತ. ವಿಕಾಸದ ದೃಷ್ಟಿಯಿಂದ ಭಾರತ ಹಿಂದೆಂದೂ ಕಂಡಿರದಂತಹ ಬೆಳವಣಿಗೆಯನ್ನು ಸಾಧಿಸಿತ್ತು. ರಸ್ತೆಗಳ […]