ವಿಭಾಗಗಳು

ಸುದ್ದಿಪತ್ರ


 

Archive for September, 2016

ಅಖಂಡ ಆರ್ಯಾ‍ವರ್ತದ ಪ್ರಚಂಡ ಅಶೋಕ!

Tuesday, September 27th, 2016

ರೋಮಿಲಾ ಥಾಪರ್ ಅಶೋಕನ ಹುಟ್ಟಿಗೂ ಪಶ್ಚಿಮದ ಇತಿಹಾಸಕಾರರಿಂದ ಪ್ರೇರಿತವಾದ ತನ್ನದೇ ಆದ ಶೃಂಗಾರ ಕಾವ್ಯವನ್ನು ಹೆಣೆದಿದ್ದಾಳೆ. ಆಕೆಯ ಪ್ರಕಾರ ಅಶೋಕ ಇಷ್ಟು ವಿಭಿನ್ನವಾದ ಚಕ್ರವರ್ತಿಯಾಗಲು ಅವನೊಳಗೆ ಹರಿಯುತ್ತಿರುವ ಬಿಳಿಯರ ರಕ್ತವೇ ಕಾರಣ! ಚಂದ್ರಗುಪ್ತ ಗ್ರೀಕ್ ದೊರೆ ಸೆಲ್ಯುಕಸ್ನ ಮಗಳ ಮದುವೆಯಾದ್ದರಿಂದ ಬಿಂದುಸಾರ ಅವರಿಗೆ ಹುಟ್ಟಿದವನಾಗಿರಬೇಕು. ಇಲ್ಲವೇ ಬಿಂದುಸಾರನೇ ಈ ಪೃಥೆ ಮುಂದುವರೆಸಿ ಗ್ರೀಕ್ ರಾಣಿಯನ್ನು ಮದುವೆಯಾಗಿದ್ದು ಅವಳಿಗೆ ಹುಟ್ಟಿದವ ಅಶೋಕನಾಗಿರಬೇಕು ಅಂತ! ಚಂದ್ರಗುಪ್ತ-ಚಾಣಕ್ಯರು ಓದಿದ ತಕ್ಷಶಿಲಾ ವಿಶ್ವವಿದ್ಯಾಲಯದ ಕುರಿತು ಮಾಹಿತಿ ಕೆದಕುತ್ತಾ 18 ನೇ ಶತಮಾನದ ಭಾರತೀಯ […]

ವೃಕ್ಷ ಉರುಳಿಸಿ ನೆಟ್ಟಿದ್ದು, ಆಂಗ್ಲನಾಡಿನ ಸಸಿ!

Tuesday, September 20th, 2016

‘ಶಿಕ್ಷಣದ ಕುರಿತಂತೆ ಪೂರ್ವ ದೇಶದ ಜನರಿಗೆ ಯಾವಾಗಲೂ ಒಂದು ಗೌರವದ ಭಾವನೆ ಇದೆ. ಆಗಾಗ್ಗೆ ದಾಳಿ ಮತ್ತು ನಾಗರಿಕ ಯುದ್ಧಗಳು ನಡೆದ ನಂತರವೂ ಇಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಜನ ಸಾಮಾನ್ಯರೂ ಕೂಡ ಶಾಲೆಗಳನ್ನು ತೆರೆದು ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುತ್ತಿದ್ದರು. ಶಿಕ್ಷಣ ನೀಡುವವರಿಗಾಗಿ ತನ್ನ ಉತ್ಪಾದನೆಯ ಒಂದಷ್ಟು ಭಾಗವನ್ನು ನೀಡದ ಯಾವ ಹಳ್ಳಿಗನೂ ಇರಲಿಲ್ಲ. ಹೀಗಾಗಿಯೇ ಎಷ್ಟೇ ಕಡಿಮೆ ಎಂದರೂ ಈಗಿರುವ ಕನಿಷ್ಠ ಪಕ್ಷ ಮೂರು ಪಟ್ಟು ಹೆಚ್ಚು ಜನ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದರು’ ಎಂದು ಅಪರೂಪದ […]

ಬೇಕಿದ್ದು ನೀರು, ಹೊತ್ತಿದ್ದು ಬೆಂಕಿ!

Tuesday, September 20th, 2016

ಸುಪ್ರೀಂ ಕೋಟರ್್ಗೆ ಈ ವಿಚಾರವನ್ನೊಯ್ಯುವ ಮೊದಲೇ ಜಯಲಲಿತಾಳೊಂದಿಗೆ ಮಾತುಕತೆ ಸಾಧ್ಯವಿರಲಿಲ್ಲವೇ? ಅಥವಾ ರಾಜ್ಯ ಒಂದು ಹೆಜ್ಜೆ ಮುಂದಿಟ್ಟು ತಮಿಳುನಾಡಿನ ಮತ್ತು ಕನರ್ಾಟಕದ ಪ್ರಗತಿಪರ ರೈತರನ್ನು ಸೇರಿಸಿ ಒಂದು ವಿಚಾರ ಸಂಕಿರಣ ಮಾಡಿಸಿ ಮಧ್ಯಮ ಮಾರ್ಗದ ಗೆರೆ ಎಳೆಯಲು ಸಾಧ್ಯವಿರಲಿಲ್ಲವೇ? ತಮಿಳುನಾಡಿನ ಪ್ರವಾಹದ ಸಂದರ್ಭದಲ್ಲಿ ಕನರ್ಾಟಕ ತೋರಿದ ಮಾನವೀಯತೆಯಿಂದಾಗಿ ಆ ರಾಜ್ಯ ಕರಗಿ ಹೋಗಿದ್ದಾಗ ಇಂತಹುದೊಂದು ಪ್ರಯತ್ನ ಮಾಡಿದ್ದರೆ ನಗು ನಗುತ್ತ ಸಮಸ್ಯೆಗೆ ಪರಿಹಾರ ಹುಡುಕಬಹುದಿತ್ತು. ನಮ್ಮ ಮುಖ್ಯಮಂತ್ರಿಗಳಿಗೆ ಇವಕ್ಕೆಲ್ಲ ಎಲ್ಲಿ ಪುರಸೊತ್ತು? ಪ್ರಧಾನಮಂತ್ರಿಗಳು ಚೀನಾಕ್ಕೆ ಕರೆದರೆ ಹೋಗದ, […]

ತೊಗಲ ತೆವಲು ಎಲ್ಲಕ್ಕೂ ಮಿಗಿಲು. . .

Friday, September 16th, 2016

‘ಒಬ್ಬನೇ ಮಗ ನೀನು. ರಸ್ತೆಯಲ್ಲಿ ಅಪಘಾತವಾಗಿ ಸತ್ತು ಹೋದರೆ?’ ಆಳೆತ್ತರ ಬೆಳೆದು ನಿಂತ ಮಗನಿಗೆ ಅಪ್ಪ ಹೇಳುತ್ತಿದ್ದ. ಮಗ ಕಕ್ಕಾಬಿಕ್ಕಿ. ‘ನಾನು ಗಾಡಿ ಓಡಿಸುವುದನ್ನೂ ಬಿಡಬೇಕೇ? ಮನೆಯಿಂದ ಹೊರಗೆ ಹೋಗಲೇಬಾರದೇ?’ ರಾತ್ರಿಯಿಡೀ ನಿದ್ದೆಯಿಲ್ಲದೇ ಹೊರಳಾಡಿದ ಹುಡುಗ. ಭಾರವಾದ ಮನಸ್ಸಿನಿಂದಲೇ ಮನೆಯಿಂದ ಆಚೆಬಂದ. ತನ್ನ ಕಾರು ಮುಟ್ಟುವ ಧೈರ್ಯವಾಗಲಿಲ್ಲ. ತಂದೆಯ ಕಾರು ಹತ್ತಿ ಡ್ರೈವರಿಗೆ ‘ನಡಿ’ ಎಂದ. ‘ಎಲ್ಲಿ, ಹೇಗೆ’ ಹೇಳುವುದನ್ನೇ ಮರೆತಿದ್ದ. ಲೊಕೇಶನ್ ಕೂಡ ಶೇರ್ ಮಾಡಿರಲಿಲ್ಲ. ಕಚೇರಿಗೇ ಇರಬೇಕೆಂದು ಡ್ರೈವರ್ ಒಂದೇ ವೇಗದಲ್ಲಿ ಗಾಡಿ ಓಡಿಸುತ್ತಿದ್ದ. […]

ದಡ್ಡ ಭಾರತೀಯರೆಂಬ ಹೆಡ್ಡ ಮಾನಸಿಕತೆ

Monday, September 12th, 2016

ಮದ್ರಾಸ್ ಪ್ರೆಸಿಡೆನ್ಸಿಯ ದಾಖಲೆಗಳು ಹೇಳುವುದನ್ನು ನಂಬುವುದಾದರೆ ವೈದ್ಯಕೀಯ ಶಸ್ತ್ರ ಚಿಕಿತ್ಸೆಯಲ್ಲಿಯೂ ಭಿನ್ನ ಭಿನ್ನ ಜಾತಿಯ ಜನರಿದ್ದರು. ಇನ್ನೂ ಅಚ್ಚರಿಯ ಸಂಗತಿಯೇನು ಗೊತ್ತೇ? ಬ್ರಿಟೀಷರ ಪ್ರಕಾರ ಕ್ಷೌರಿಕರೇ ಶಸ್ತ್ರ ಚಿಕಿತ್ಸೆಯನ್ನು ಮಾಡುವಲ್ಲಿ ನಿಷ್ಣಾತರಾಗಿದ್ದರು! ಗಾಂಧೀಜಿ ಭಾರತದ ಅಂತಃಸತ್ತ್ವವನ್ನು ಅರಿತಿದ್ದವರು. ಅನೇಕ ಬಾರಿ ಮೇಲ್ನೋಟಕ್ಕೆ ಕಾಣುವ ಸಂಗತಿಗಳಿಗೆ ಪ್ರತಿಕ್ರಿಯಿಸುತ್ತಲೇ ನಮ್ಮ ಆಯಸ್ಸು ಕಳೆದು ಹೋಗುತ್ತದೆ. ಗಾಂಧೀಜಿ ಭಾರತದ ಹೃದಯಕ್ಕೆ ಕಿವಿಯಿಟ್ಟು ಆಲಿಸಿದವರು. ಅದಕ್ಕೇ ಗಾಂಧೀಜಿಯವರನ್ನು ಮಣಿಸಲು ಬ್ರಿಟೀಷರು ಅವರ ಸುತ್ತಮುತ್ತಲಿನವರನ್ನೇ ತೆಕ್ಕೆಗೆ ಸೆಳೆದುಕೊಂಡು ಗಾಂಧೀಜಿಯವರ ಹೋರಾಟವನ್ನು ಮೂಲೆಗುಂಪಾಗಿಸಬೇಕಾಯ್ತು. ಗಾಂಧೀಜಿ ನಿಜಕ್ಕೂ […]

ಸ್ವಾಮಿ ವಿವೇಕಾನಂದರ ಹೆಸರಲ್ಲಿ ಅದೆಷ್ಟು ಸುಳ್ಳು ಹೇಳುತ್ತೀರಿ?

Saturday, September 10th, 2016

ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಗುಡುಗಿ ಅದೆಷ್ಟೋ ದಶಕಗಳು ಕಳೆದುಹೋದವು. ಆ ಗುಡುಗಿಗೆ ಅಲುಗಾಡಿದ ಭೂಮಿ ಇಂದಿಗೂ ಕಂಪಿಸುತ್ತಿದೆ. ಆ ಕಂಪನವನ್ನು ಸಹಿಸಲಾಗದ ಒಂದಷ್ಟು #ತಿರುಪೆ_ಜೀವಿ ಗಳು ಅಂದು, ಇಂದು ಸ್ವಾಮೀಜಿಯವರ ಮೇಲೆ ಸುಳ್ಳುಗಳ ದಾಳಿಯನ್ನೇ ಮಾಡುತ್ತಿದ್ದಾರೆ. ಅವರು ಬದುಕಿದ್ದಾಗಲೇ ಅನೇಕ ಸುಳ್ಳು ಆಪಾದನೆಗಳನ್ನು ಮಾಡಿಯಾಗಿತ್ತು. ಅವರ ದೇಹತ್ಯಾಗವಾದ ಮೇಲಂತೂ ಕೇಳಲೇಬೇಡಿ. ಅವರ ಗೋಮಾಂಸ ಸೇವನೆಯ ಕುರಿತಂತೆ ಅಂತೂ ಪ್ರತಿಯೊಬ್ಬ ತಿರುಪೆ ಜೀವಿಗೂ ಹೇಳಲೊಂದು ಕಥೆಯಿದೆ. ಇದೋ! ಅವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ. ಹಳೆಯ ಲೇಖನವನ್ನು ದಿಗ್ವಿಜಯ್ […]

ಹೀಗೆ ಬರೆದರೆ ನನ್ನನ್ನೂ ಬಂಧಿಸ್ತಾರೆ!

Tuesday, September 6th, 2016

ಕಲ್ಬುಗರ್ಿಯವರು ತೀರಿಕೊಂಡು ಒಂದು ವರ್ಷವಾಯಿತು. ಸಕರ್ಾರ ಹಂತಕರನ್ನು ಹಿಡಿಯುವುದಿರಲಿ, ಸಕರ್ಾರದ ವಿರುದ್ಧ ಮಾತನಾಡಿದವರನ್ನು ಮಾಧ್ಯಮ ಸಲಹೆಗಾರರು ಜೈಲಿಗೆ ಅಟ್ಟುತ್ತಾರೆ. ಸ್ಕ್ರೀನ್ ಶಾಟ್ ಕೇಳುವ ಬೆದರಿಕೆ ಒಡ್ಡುತ್ತಾರೆ. ಈ ಹೊತ್ತಲ್ಲಿ ಇಂತಹ ಹಿಟ್ಲರ್ ಶಾಹೀ, ಬಂಡವಾಳ ಶಾಹೀ ಮತ್ತು ಪ್ರಜಾಪ್ರಭುತ್ವ ವಿರೋಧೀ ಮನಸ್ಥಿತಿಯನ್ನು ಧಿಕ್ಕರಿಸಿ ಹಳೆಯ ಲೇಖನವನ್ನು ಮತ್ತೆ reblog ಮಾಡುತ್ತಿದ್ದೇನೆ. ನೆಲದ ಮಾತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನೊಬ್ಬ ಪಾಪದ ಹುಡುಗರ ಮೇಲೆ ಕೇಸ್ ಹಾಕಿಸಿ ಬಳಲುವಂತೆ ಮಾಡಿರಲಿಲ್ಲವೇ? ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ವಾಕ್ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಹೊರಟಿರಲಿಲ್ಲವೇ? […]

ಸುಂದರ ವೃಕ್ಷ ಬುಡ ಸಮೇತ ಕಿತ್ತೊಗೆದರು!!

Sunday, September 4th, 2016

ಅಂದಿನ ದಿನಗಳಲ್ಲಿ ಜ್ಞಾನಿಗೆ ನೀಡುತ್ತಿದ್ದ ಗೌರವದ ಕುರಿತಂತೆ ಒಂದು ವಿಶೇಷ ಉಲ್ಲೇಖವಿದೆ. ಅದೊಮ್ಮೆ ಸುಮಾರು 8000 ಭಿಕ್ಷುಗಳ ಮಹಾ ಸಮಾವೇಶ ವಿಕ್ರಮಶಿಲೆಯಲ್ಲಿ ನಡೆದಿತ್ತಂತೆ. ಮಗಧದ ರಾಜನಿಗೆ ಎಲ್ಲರಿಗಿಂತಲೂ ಎತ್ತರದ ಪೀಠ ನೀಡಲಾಗಿತ್ತು. ಆದರೆ ಆತ ಬರುವಾಗ ಹಿರಿ-ಕಿರಿಯ ಭಿಕ್ಷುಗಳಲ್ಲಿ ಯಾರೊಬ್ಬರೂ ಎದ್ದು ನಿಲ್ಲಲಿಲ್ಲವಂತೆ. ಆದರೆ ಬಹುಶ್ರುತ ಪಂಡಿತ ವೀರವಜ್ರ ಆಸ್ಥಾನ ಪ್ರವೇಶಿಸುವಾಗ ರಾಜನೂ ಸೇರಿದಂತೆ ಪ್ರತಿಯೊಬ್ಬರೂ ನಿಂತು ಗೌರವಿಸಿದರಂತೆ. ‘ವಿದ್ವಾನ್ ಸರ್ವತ್ರ ಪೂಜ್ಯತೆ’ (ಜ್ಞಾನಿಗೆ ಎಲ್ಲೆಡೆ ಗೌರವವಿದೆ) ಎನ್ನುವ ಮಾತು ಅಕ್ಷರಶಃ ಸತ್ಯವಾಗಿದ್ದ ಕಾಲ ಅದು. ದೆಹಲಿಯ […]

ಚೀನಾಕ್ಕೆ ಥಂಡಿ, ಇಲ್ಲಿ ಮಾವೋವಾದಿಗಳಿಗೆ ಜ್ವರ!!

Saturday, September 3rd, 2016

ಎಲ್ಲಾ ರಾಜತಾಂತ್ರಿಕ ನಡೆಗೂ ಕಿರೀಟಪ್ರಾಯವಾದುದು ಭಾರತ ಮತ್ತು ಅಮೇರಿಕಾದ ನಡುವಣ ಸೇನಾ ನೆಲೆ ಕುರಿತಂತಹ ಒಪ್ಪಂದ. ಈ ಎರಡೂ ರಾಷ್ಟ್ರಗಳೂ ಒಬ್ಬರು ಮತ್ತೊಬ್ಬರ ಭೂ, ನೌಕಾ, ವಾಯು ನೆಲೆಗಳನ್ನು ಬಳಸಿಕೊಳ್ಳುವ ಈ ಒಪ್ಪಂದ ಐತಿಹಾಸಿಕವೇ ಸರಿ. ಅತ್ತ ರಷ್ಯಾದೊಂದಿಗೆ ಸುಖೋಯ್ ವಿಮಾನಗಳ ಅಭಿವೃದ್ಧಿಯ ಒಪ್ಪಂದಕ್ಕೆ ಅಂಕಿತ ಹಾಕುವ ಭಾರತ ಇತ್ತ ಅಮೇರಿಕಾದೊಂದಿಗೆ ಇಂತಹುದೊಂದು ಮಹತ್ವದ ಹೆಜ್ಜೆ ಇಟ್ಟು ದಕ್ಷಿಣ ಚೀನಾದ ಸಮುದ್ರಕ್ಕೆ ಅದು ಅಬಾಧಿತವಾಗಿ ಬರುವಂತೆ ತಬ್ಬಿಕೊಳ್ಳುತ್ತದೆ. ಅದಕ್ಕೇ ಆರಂಭದಲ್ಲಿಯೇ ಬಹುಮಿತ್ರನೀತಿ ಎಂದಿದ್ದು. ಜವಹರಲಾಲ್ ನೆಹರೂರವರ ‘ಅಲಿಪ್ತ […]