ವಿಭಾಗಗಳು

ಸುದ್ದಿಪತ್ರ


 

Archive for February, 2017

ಬುದ್ಧಿಜೀವಿಗಳ ದೆವ್ವ ಬಿಡಿಸಿದ ಕಾಳಿ!

Sunday, February 26th, 2017

ನಿವೇದಿತಾ ಭಾರತೀಯ ಆಚರಣೆಗಳನ್ನು ವಿರೋಧಿಸಲಿಲ್ಲ, ಭಾರತೀಯರನ್ನು ದೂಷಿಸಲಿಲ್ಲ. ತಾನು ಇಲ್ಲಿನ ಅನಾಗರಿಕ ಜನರ ಸೇವೆಗೆ ಬಂದವಳೆಂದು ಪತ್ರಿಕಾ ಹೇಳಿಕೆ ಕೊಡಲಿಲ್ಲ. ಕೊನೆಗೆ ತನ್ನ ಮತವನ್ನು ಇಲ್ಲಿನ ಜನರ ಮೇಲೆ ಹೇರಿ ಅವರ ಪರಿವರ್ತನೆಗೆ ಪ್ರಯತ್ನ ಪಡಲಿಲ್ಲ. ಎಲ್ಲಾ ಬಿಡಿ ಯಾವ ಕಾಳಿಯ ಕುರಿತಂತೆ ಇಷ್ಟು ಅಮೋಘವಾಗಿ ಮಾತನಾಡುತ್ತಿದ್ದಳೋ ದಕ್ಷಿಣೇಶ್ವರದ ಅದೇ ಕಾಳಿ ಮಂದಿರಕ್ಕೆ ಅವಳಿಗೆ ವಿದೇಶೀಯಳೆಂಬ ಕಾರಣಕ್ಕೆ ಕೊನೆಯವರೆಗೂ ಪ್ರವೇಶ ದಕ್ಕಲಿಲ್ಲ. ಆದಾಗ್ಯೂ ಮನಸಿಗೆ ಕಿರಿಕಿರಿ ಮಾಡಿಕೊಳ್ಳಲಿಲ್ಲ. ಇಲ್ಲಿನ ನಂಬಿಕೆಗಳನ್ನು ವಿರೋಧಿಸುವ ಅಧಿಕಾರ ತನಗಿಲ್ಲವೆಂದೇ ಶಾಂತವಾಗಿ ಒಪ್ಪಿಕೊಂಡಳು. […]

ನೋವು ನುಂಗುವ ಶಿವ, ಪ್ರೇಮ ಪ್ರವಾಹದ ಬುದ್ಧ!

Tuesday, February 21st, 2017

ನಿವೇದಿತಾಗೆ ಸ್ವಾಮೀಜಿಯವರ ಮೇಲೆ ಅಪಾರ ಶ್ರದ್ಧೆಯಿತ್ತು. ಸ್ವಾಮೀಜಿ ಹೇಳಿದ ಕೆಲಸ ಮಾಡುವುದಷ್ಟೇ ತನ್ನ ಜೀವನದ ಗುರಿಯೆಂದು ಆಕೆ ನಿರ್ಧರಿಸಿಯಾಗಿತ್ತು. ಹೀಗೆ ನಿರ್ಧರಿಸುವ ಮುನ್ನ ಅನೇಕ ತಾಕಲಾಟಗಳು ಎದುರಾದರೂ ಅದನ್ನು ಎದುರಿಸಿ ಗೆದ್ದು ಭಾರತದ ಶಿಶುವಾದಳು. ಹಾಗಂತ ಇದು ಏಕಾಕಿ ನಡೆದ ಪ್ರಕ್ರಿಯೆಯಲ್ಲ. ಸ್ವಾಮೀಜಿ ಭಾರತಕ್ಕೆ ಬಂದ ನಂತರ ಮಾರ್ಗರೇಟ್ ನೋಬಲ್ಳೊಡನೆ ನಿರಂತರ ಪತ್ರ ವ್ಯವಹಾರ ನಡೆದಿದೆ. ಅತ್ತ ಆಕೆಯೂ ವೇದಾಂತದ ಪ್ರಚಾರ ಕಾರ್ಯದಲ್ಲಿ ತನ್ನ ತಾನು ಪೂತರ್ಿ ತೊಡಗಿಸಿಕೊಂಡು ಆಧ್ಯಾತ್ಮದ ಅತ್ಯುನ್ನತ ಸವಿ ಅನುಭವಿಸಲಾರಂಭಿಸಿದ್ದಳು. ಆ ವೇಳೆಗೆ […]

ಎದುರಿಸಿ ಗೆಲ್ಲುವಲ್ಲಿಯೇ ನಿಜವಾದ ಆನಂದ!!

Thursday, February 16th, 2017

ಈ ಸಮ್ಮೇಳನ ಎರಡು ವಿಶ್ವದಾಖಲೆಗಳಿಗೆ ಸಾಕ್ಷಿಯಾಯಿತು. ಪುಸ್ತಕ ಮಾರಾಟವೂ ಅಷ್ಟೇ. ರಾಷ್ಟ್ರೀಯ ಸಾಹಿತ್ಯ, ವಿವೇಕ-ನಿವೇದಿತೆಯರ ವಿಚಾರಧಾರೆಯ ಸಾಹಿತ್ಯಕ್ಕೆ ಜನ ಮುಗಿಬಿದ್ದ ರೀತಿ ರೋಚಕವಾಗಿತ್ತು. ಒಟ್ಟು ಎರಡು ದಿನಗಳಲ್ಲಿ 70 ಸಾವಿರಕ್ಕೂ ಮಿಕ್ಕಿ ಜನ ಆವರಣಕ್ಕೆ ಬಂದು ಹೋಗಿದ್ದುಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಾಕ್ಷಿಯಾಗಿತ್ತು. ಇವೆಲ್ಲವನ್ನೂ ಗಮನಿಸಿಯೇ ರಾಜ್ಕೋಟ್ನಿಂದಾಗಮಿಸಿದ್ದ ಸ್ವಾಮಿ ಸರ್ವಸ್ಥಾನಂದಜೀ ಗುಜರಾತ್ನಲ್ಲಿ ಇಂತಹುದೇ ಸಮ್ಮೇಳನ ಮಾಡುವ ಆಲೋಚನೆ ಮಾಡಿದ್ದೇವೆಂದಾಗ ಕಾರ್ಯಕರ್ತರು ನೆಲದ ಮೇಲೆ ನಿಂತಿರಲಿಲ್ಲ! ಅಚ್ಚರಿಯೇನು ಗೊತ್ತೇ? ಈ ಸಮ್ಮೇಳನವನ್ನು ವಿರೋಧಿಸಿದ ಎಡಪಂಥೀಯರು ಸುಮ್ಮನಾಗುವುದಿರಲಿ ಹೊಗಳಲು ಆರಂಭ ಮಾಡಿದ್ದರು. […]