ವಿಭಾಗಗಳು

ಸುದ್ದಿಪತ್ರ


 

Archive for December, 2017

ಎಂದಿಗೂ ಬತ್ತದ ನೀರಿನ ಸೆಲೆ ಕನರ್ಾಟಕ!

Sunday, December 31st, 2017

ಯಾವಾಗಲಾದರೂ ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳಿಗೆ ಹೋಗಿ ಬಂದಿರುವಿರೇನು? ಜಗತ್ತಿನ ಅತ್ಯಂತ ಹೆಚ್ಚಿನ ಜನರ ಅಚ್ಚರಿಗೆ ಕಾರಣವಾಗಬಲ್ಲ ಸ್ಮಾರಕಗಳು ಇವು. ಕೇಂದ್ರ ಸಂಸತ್ತಿನ ಆಕಾರದ ಪ್ರೇರಣೆಯೂ ಇಲ್ಲಿಂದಲೇ ಬಂದಿರುವಂಥದ್ದು. ಭಾರತದ ಇತಿಹಾಸವನ್ನು ಅತ್ಯಂತ ವೈಭವಯುತವಾಗಿ ಮುಟ್ಟಿಸುವಲ್ಲಿ ಇವುಗಳದ್ದು ನಿಸ್ಸಂಶಯವಾಗಿ ಮಹತ್ವದ ಪಾತ್ರವಿದೆ. ಆದರೆ ಅಲ್ಲಿ ಸಕರ್ಾರ ಒದಗಿಸಿರುವ ವ್ಯವಸ್ಥೆಯ ಕುರಿತಂತೆ ಮಾತನಾಡದಿರುವುದೇ ಒಳಿತು. ಚುನಾವಣೆಯ ಹೊತ್ತಿಗೆ ಸರಿಯಾಗಿ ತಮ್ಮ ಹಳೆಯ ಹಪ್ಪಟ್ಟು ಐಡಿಯಾಗಳನ್ನು ಮತ್ತೆ ಚಾಲ್ತಿಗೆ ತರುವ ಜನನಾಯಕರನ್ನು ನೋಡಿ ನೋಡಿ ಸಾಕಾಗಿ ಹೋಗಿದೆ. ಕನರ್ಾಟಕದ ಅಗತ್ಯಕ್ಕೆ ಸ್ಪಂದಿಸದವರನ್ನು […]

ಐದಾರು ಬಾರಿ ಗೆದ್ದರೂ ಐದು ಪೈಸೆ ಉಪಯೋಗವಿಲ್ಲ!

Tuesday, December 26th, 2017

ಆಡಳಿತದ ಚುಕ್ಕಾಣಿ ಹಿಡಿದವರು ಸ್ವಲ್ಪ ತಲೆ ಕೆಡಿಸಿಕೊಳ್ಳಬೇಕಷ್ಟೇ. ಟಿಪ್ಪೂ ಜಯಂತಿ ಮಾಡಿದ್ದರಿಂದ ಮತ-ಮತಗಳ ನಡುವೆ ಭಡಕಾಯಿಸಲಷ್ಟೇ ಸಾಧ್ಯವಾಯಿತು. ಅದರಿಂದ ಉದ್ಯೋಗವು ಹುಟ್ಟಲಿಲ್ಲ, ಪ್ರವಾಸೋದ್ಯಮದ ಆಸ್ಥೆಯೂ ಬೆಳೆಯಲಿಲ್ಲ. ವೋಟುಬ್ಯಾಂಕಿನ ರಾಜಕಾರಣವನ್ನು ಅಷ್ಟು ಶ್ರದ್ಧೆಯಿಂದ ಮಾಡಿದ ಮುಖ್ಯಮಂತ್ರಿಗಳು ಸ್ವಲ್ಪ ಪ್ರವಾಸೋದ್ಯಮದ ಕಡೆಗೆ ಹರಿಸಿದ್ದರೆ ನಾವಿಂದು ಬೆಂಗಳೂರೊಂದನ್ನೇ ಮುಂದಿಟ್ಟು ಬಂಡವಾಳ ಸಂಗ್ರಹ ಮಾಡಬೇಕಿರಲಿಲ್ಲ. ಉದ್ಯೋಗ ಸೃಷ್ಟಿಗಾಗಿ ಎಲ್ಲ ಸಕರ್ಾರಗಳೂ ಹೆಣಗಾಡುತ್ತಿವೆ. ಕೃಷಿ ಮತ್ತು ಕೃಷಿ ಆಧಾರಿತ ವ್ಯವಸ್ಥೆಯನ್ನು ಸಂಪೂರ್ಣ ನಾಶಗೊಳಿಸಿದ ಆಂಗ್ಲರು ಭಾರತದಲ್ಲಿ ಉದ್ಯೋಗವಿಲ್ಲದೇ ದಾರಿದ್ರ್ಯಕ್ಕೆ ಸಿಲುಕಿದ ಜನಾಂಗವನ್ನು ಸೃಷ್ಟಿಸಿದರು. ಸ್ವಾತಂತ್ರ್ಯಾನಂತರವೂ […]

ನರೇಂದ್ರ ಮೋದಿ ಕೊಟ್ಟ ಮಾತಿಗೆ ತಪ್ಪಿದ್ದಾರಾ?

Sunday, December 24th, 2017

ಮೋದಿಯವರ ಸಕರ್ಾರ ಬಂದಾಗಿನಿಂದ ಅರಚಾಡುವ ಬುದ್ಧಿಜೀವಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಬಿಹಾರದ ಚುನಾವಣೆಯ ವೇಳೆಗೆ ಅಸಹಿಷ್ಣುತೆಯನ್ನು ಮುಂದಿಟ್ಟುಕೊಂಡು ಪ್ರಶಸ್ತಿ ಮರಳಿಸಿದ ಅನೇಕ ಸಾಹಿತಿಗಳು ಈಗ ಮೂಲೆಗುಂಪಾಗಿಬಿಟ್ಟಿದ್ದಾರೆ. ತೀಸ್ತಾ ಸೇತಲ್ವಾಡ್ ತನ್ನ ಅವ್ಯವಹಾರದ ಬ್ಯಾಂಕ್ ಅಕೌಂಟನ್ನು ಮತ್ತೆ ಉಪಯೋಗಿಸಲು ಅನುವು ಮಾಡಿಕೊಡಿರೆಂದು ನ್ಯಾಯಾಲಯದ ಅನುಮತಿ ಕೇಳುತ್ತಿದ್ದಾಳೆ. ಹಿಂದೂಗಳ ಅವಹೇಳನ, ಹಿಂದೂ ಧರ್ಮದ ಮೇಲಿನ ತನ್ನ ಭಾಷಣ ಜನ್ಮ ಸಿದ್ಧ ಹಕ್ಕೆಂದು ಭಾವಿಸಿದ ಅಮೀರ್ ಖಾನ್ ಅನಿವಾರ್ಯವಾಗಿ, ಕೆಲವೊಮ್ಮೆ ಅನವಶ್ಯಕವಾಗಿ ದೇಶ ಭಕ್ತಿಯ ಪ್ರದರ್ಶನ ಮಾಡಬೇಕಾದ ಒತ್ತಡಕ್ಕೆ ಸಿಲುಕಿದ್ದಾನೆ. ಗುಜರಾತಿನ […]

ಸ್ಮಾರ್ಟ್ ಹಳ್ಳಿಗಳ ನಿರ್ಮಾಣಕ್ಕೆ ನೀವು ಸಿದ್ಧರಿದ್ದೀರಾ, ಹೇಳಿ!

Sunday, December 17th, 2017

ನಾವೀಗ ಹೇಗಾಗಿದ್ದೇವೆ ಗೊತ್ತೇನು? ಸ್ವಾರ್ಥಕ್ಕಾಗಿ ಏನನ್ನು ಬೇಕಾದರೂ ಬಲಿಕೊಡಬಲ್ಲವರಾಗಿದ್ದೇವೆ. ದೇಶದ ಅಭಿವೃದ್ಧಿ-ರಾಜ್ಯದ ಬೆಳವಣಿಗೆಗಳಿಗಿಂತಲೂ ನಮಗಿಂದು ನಮ್ಮ ಜಾತಿಯ ಪ್ರಶ್ನೆ ಬಲುಮುಖ್ಯವಾಗಿದೆ. ಭಾಷೆಯ ಹೆಸರಲ್ಲಿ ಬಡಿದಾಡುವುದು ನಮಗೆ ಬೇರೆಲ್ಲವುಗಳಿಗಿಂತಲೂ ಮುಖ್ಯ. ನಾಲ್ಕೂವರೆ ವರ್ಷ ಅಭಿವೃದ್ಧಿಯ ಮಾತನಾಡದ ಸಂಸದ, ಶಾಸಕರು ಕೊನೆಯ ಆರು ತಿಂಗಳಲ್ಲಿ ಎರಡು ಜಾತಿ ಸಮಾವೇಶ ಮತ್ತು ಒಂದು ಹಿಂದೂ-ಮುಸ್ಲೀಂ ಕದನ ಮಾಡಿಸಿಕೊಂಡು ಮತ್ತೆ ಜನನಾಯಕರಾಗಿಬಿಡುತ್ತಾರೆ. ಇತ್ತೀಚೆಗೆ ಶಿವಮೊಗ್ಗ ಮತ್ತು ಮಂಗಳೂರಿನ ಒಂದಷ್ಟು ಮಿತ್ರರು ಭಿನ್ನಭಿನ್ನ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಅರಿಯುವ, ಅದಕ್ಕೆ ಪರಿಹಾರ […]

ಸ್ಮಾರ್ಟ್ ಹಳ್ಳಿಗಳ ನಿರ್ಮಾಣಕ್ಕೆ ನೀವು ಸಿದ್ಧರಿದ್ದೀರಾ, ಹೇಳಿ!

Sunday, December 17th, 2017

ನಾವೀಗ ಹೇಗಾಗಿದ್ದೇವೆ ಗೊತ್ತೇನು? ಸ್ವಾರ್ಥಕ್ಕಾಗಿ ಏನನ್ನು ಬೇಕಾದರೂ ಬಲಿಕೊಡಬಲ್ಲವರಾಗಿದ್ದೇವೆ. ದೇಶದ ಅಭಿವೃದ್ಧಿ-ರಾಜ್ಯದ ಬೆಳವಣಿಗೆಗಳಿಗಿಂತಲೂ ನಮಗಿಂದು ನಮ್ಮ ಜಾತಿಯ ಪ್ರಶ್ನೆ ಬಲುಮುಖ್ಯವಾಗಿದೆ. ಭಾಷೆಯ ಹೆಸರಲ್ಲಿ ಬಡಿದಾಡುವುದು ನಮಗೆ ಬೇರೆಲ್ಲವುಗಳಿಗಿಂತಲೂ ಮುಖ್ಯ. ನಾಲ್ಕೂವರೆ ವರ್ಷ ಅಭಿವೃದ್ಧಿಯ ಮಾತನಾಡದ ಸಂಸದ, ಶಾಸಕರು ಕೊನೆಯ ಆರು ತಿಂಗಳಲ್ಲಿ ಎರಡು ಜಾತಿ ಸಮಾವೇಶ ಮತ್ತು ಒಂದು ಹಿಂದೂ-ಮುಸ್ಲೀಂ ಕದನ ಮಾಡಿಸಿಕೊಂಡು ಮತ್ತೆ ಜನನಾಯಕರಾಗಿಬಿಡುತ್ತಾರೆ. ಇತ್ತೀಚೆಗೆ ಶಿವಮೊಗ್ಗ ಮತ್ತು ಮಂಗಳೂರಿನ ಒಂದಷ್ಟು ಮಿತ್ರರು ಭಿನ್ನಭಿನ್ನ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಅರಿಯುವ, ಅದಕ್ಕೆ ಪರಿಹಾರ […]

ಹೊನ್ನಾವರ ಶಾಂತವಾಗಲು ಇನ್ನೆಷ್ಟು ಪರೇಶ್ ಮೇಸ್ತರು ಹೆಣವಾಗಬೇಕು?

Monday, December 11th, 2017

ನಿಧಾನವಾಗಿ ಕೇರಳದ ಮುಸ್ಲೀಮರು ನಮ್ಮೂರಿಗೆ ಕಾಲಿಟ್ಟರು. ಅವರು ಬರುವಾಗಲೇ ತಮ್ಮೊಂದಿಗೆ ಇಸ್ಲಾಂನ ಕಟ್ಟರತೆಯನ್ನು ಹೊತ್ತುಕೊಂಡೇ ಬಂದಿದ್ದರು. ಶರಾವತಿಗೆ ಅಂಗಾತ ಮೈ ತೆರೆದುಕೊಂಡ ಬ್ರಿಡ್ಜಿನ ಆ ಬದಿಯ ಕಾಸರಕೋಡಿನಲ್ಲಿ ಅವರು ನೆಲೆಸಿದ್ದರೆಂದು ನಾನೂ ಕೇಳಿದ್ದೆ. ಅವರು ನಮ್ಮೂರಿನ ನಮ್ಮೊಂದಿಗೇ ಬೆಳೆದ ಮುಸಲ್ಮಾನರಂತಲ್ಲ. ಅವರ ಮಾತು, ಬಟ್ಟೆ, ವ್ಯವಹಾರ ಎಲ್ಲವೂ ಭಯಾನಕವೇ! ನಮ್ಮ ಹೊಟೆಲ್ಲಿನಲ್ಲಿ ಬನ್ಸ್ ಭಾಳ ಫೇಮಸ್ಸು. ಅದಕ್ಕೆ ಕಳಿತ ಬಾಳೇ ಹಣ್ಣು ಹಾಕಲೇಬೇಕು. ರಜಕ್ಕೆ ಊರಿಗೆ ಹೋದಾಗ ಬಾಳೇಹಣ್ಣು ತರುವ ಕೆಲಸ ನ್ನದ್ದು. ಆಗಿನ್ನು ನಾನು ಐದನೇ […]

ಹಳ್ಳಿಗಳು ಪಕ್ಷದ ಕಪಿಮುಷ್ಟಿಯಿಂದ ಹೊರಬಂದರಷ್ಟೇ ಉದ್ಧಾರ!

Sunday, December 10th, 2017

ವಾಸ್ತವದಲ್ಲಿ ಭಾರತದ ಹಳ್ಳಿಗಳು ಸ್ವಯಂ ಆಡಳಿತ ಹೊಂದಿದವಾಗಿದ್ದವು. ತಮಗೆ ಬೇಕಾದ್ದನ್ನೆಲ್ಲ ತಾವೇ ಬೆಳೆದುಕೊಳ್ಳುತ್ತ ಹೊರಗಿನ ಸಂಪರ್ಕವನ್ನು ಅತಿ ಕಡಿಮೆ ಇರಿಸಿಕೊಂಡಿದ್ದವು. ವಾರಕ್ಕೊಮ್ಮೆ ಸಂತೆ, ವರ್ಷಕ್ಕೊಮ್ಮೆ ಜಾತ್ರೆಗಳನ್ನು ನಡೆಸಿ ಅಕ್ಕಪಕ್ಕದ ಹಳ್ಳಿಗಳವರು ಬಂದು ತಂತಮ್ಮ ವಸ್ತುಗಳನ್ನು ಮಾರಾಟ ಮಾಡಿಹೋಗಲು ವ್ಯವಸ್ಥೆ ಮಾಡಿಕೊಡುತ್ತಿದ್ದರು. ಎಲ್ಲಿಯೂ ಯಾರೂ ಮತ್ತೊಬ್ಬರ ಬದುಕಿನಲ್ಲಿ ಮೂಗು ತೂರಿಸುವಂತಿರಲಿಲ್ಲ. ಇತ್ತೀಚೆಗೆ ನನ್ನ ಕನಸಿನ ಕನರ್ಾಟಕದ ಕಲ್ಪನೆ ಹೊತ್ತು ಹೊಸದುರ್ಗಕ್ಕೆ ಹೋಗುವ ಅವಕಾಶ ದಕ್ಕಿತ್ತು. ಪ್ರಬುದ್ಧರೊಂದಷ್ಟು ಜನ ಹಂಚಿಕೊಂಡ ವಿಚಾರಗಳು ಬರಲಿರುವ ಕರಾಳ ದಿನಗಳ ಮುನ್ಸೂಚನೆಯೇ ಆಗಿದ್ದವು. ಕೃಷಿಯನ್ನೇ […]

ಗುಜರಾತ್ನಲ್ಲಿ ಎಡವಿತೇ ಮೋದಿ-ಶಾಹ್ ಜೋಡಿ?

Saturday, December 9th, 2017

ಎಬಿಪಿ ನ್ಯೂಸ್ ವರದಿ ಸುಳ್ಳಾಗಿರಲಿಲ್ಲ. ಆದರೆ ಪರಿಪೂರ್ಣ ಸತ್ಯವೂ ಅಲ್ಲ. ಆರಂಭದಲ್ಲಿ ಅವರೆಲ್ಲರ ಪ್ರಕಾರ ಬಿಜೇಪಿಯ ಗೆಲುವು ನಿಶ್ಚಯವಾಗಿತ್ತು. ಕಾಲಕ್ರಮದಲ್ಲಿ ಅದು ಕಡಿಮೆಯಾಗುತ್ತ ಬಂದು ಕಾಂಗ್ರೆಸ್ಸು ಮತ್ತು ಬಿಜೇಪಿಗಳ ನಡುವೆ ಸಮಾನ ಕದನವಿತ್ತು. ವಾಸ್ತವವಾಗಿ ಅದು ಉಲ್ಟಾ. ಆರಂಭದಲ್ಲಿ ಮೋದಿ ಪಾಳಯದ ವಿರುದ್ಧ ಜನಾಕ್ರೋಶ ಘನೀಭವಿಸಿತ್ತು. ಬರು ಬರುತ್ತ ಅದನ್ನು ಕಡಿಮೆ ಮಾಡುವಲ್ಲಿ ಮೋದಿ-ಶಾಹ್ ಜೋಡಿ ಯಶಸ್ವಿಯಾಯ್ತು. ಮತ್ತೊಮ್ಮೆ ವೋಟ್ ಬ್ಯಾಂಕಿಗಾಗಿ ಒಡೆದು ಆಳುವ ದಾರಿ ಬಳಕೆಯಾಗತೊಡಗಿದೆ. ಗುಜರಾತಿನಲ್ಲಿ ಮೋದಿಯವರು ಈ ಬಾರಿ ಇಟ್ಟ ಹೆಜ್ಜೆ ಬಲು […]

ಎಲ್ಲವೂ ಇದೆ! ಕೊರತೆ ಇರುವುದು ಸಮರ್ಥ ನಾಯಕನದ್ದೇ!!

Sunday, December 3rd, 2017

ಭಾರತದಲ್ಲಿ ಅಮೇರಿಕಾ, ಚೀನಾಗಳು ಎಸೆಯುವ ಬಿಸ್ಕತ್ತಿಗೆ ಬಾಯ್ಬಿಟ್ಟು ಕುಳಿತ ಬುದ್ಧಿಜೀವಿ ವರ್ಗ ರಾಷ್ಟ್ರೀಯತೆಯಿಂದ ಬಲುದೂರ ಸೌಧವೊಂದನ್ನು ನಿಮರ್ಿಸಿ ಭಾರತವನ್ನು ಒಡೆದು ಹಾಕುವ ಸಂಚನ್ನು ರೂಪಿಸಿಕೊಂಡಿದೆ. ಇದು ಇಂದು ನಿನ್ನೆಯ ಸಂಚೆಂದು ಭಾವಿಸಬೇಡಿ. ಸ್ವಾತಂತ್ರ್ಯ ಪೂರ್ವದಿಂದಲೂ ಬ್ರಿಟೀಷರ ವೈಭವೋಪೇತ ಬದುಕನ್ನು ತಮ್ಮದಾಗಿಸಿಕೊಳ್ಳುವ ಹಂಬಲದಿಂದ ಅವರ ಬೂಟು ನೆಕ್ಕುವ ಒಂದು ವರ್ಗ ಇದ್ದೇ ಇತ್ತು. ಮುಂದೆ ಅವರುಗಳಲ್ಲಿ ಅನೇಕರು ಅಧಿಕಾರವನ್ನು ತಮ್ಮ ತೆಕ್ಕೆಗೆ ಹಾಕಿಕೊಂಡರು. ಅಧಿಕಾರವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಮತ್ತು ತಮ್ಮ ಮಕ್ಕಳು-ಮೊಮ್ಮಕ್ಕಳಿಗೆ ವಗರ್ಾಯಿಸಲು ರಾಷ್ಟ್ರದ ಅಸ್ಮಿತೆಯನ್ನು ಧ್ವಂಸಗೊಳಿಸಲೂ ಹೇಸಲಿಲ್ಲ. […]