ವಿಭಾಗಗಳು

ಸುದ್ದಿಪತ್ರ


 

Archive for April, 2017

ಕ್ಷಾಮಕ್ಕೆ ಪರಿಹಾರ ಮನೆಯ ಅಂಗಳದಲ್ಲಿದೆ!

Sunday, April 30th, 2017

ಅರಣ್ಯವನ್ನು ನಾಶಗೈದು ಕೃಷಿಗೆ ಭೂಮಿಯನ್ನು ಚೊಕ್ಕಗೊಳಿಸುತ್ತಿದ್ದಂತೆ ಎಲೆಗಳಿಂದಾವೃತವಾದ ಭೂಮಿಯ ಮೇಲ್ಮೈ ಕೂಡ ಕಡಿಮೆಯಾಗುತ್ತದೆ. ನಾವು ಬೆಳೆಯುವ ಬೆಳೆಗಳ ಬೇರು ಆಳಕ್ಕಿಳಿಯುವುದಿಲ್ಲವಾದ್ದರಿಂದ ಈ ಗಿಡಗಳು ವಾತಾವರಣದ ತಂಪಿಗೆ ವಿಶೇಷವಾಗಿ ಏನನ್ನೂ ಸೇರಿಸಲಾರವು. ಪರಿಣಾಮ ಮಳೆ ನೀರಿಗೆ ತತ್ವಾರ. ‘ಹುಲಿ ಉಳಿಸಿ’ ಯೋಜನೆ ಬಲು ಜೋರಾಗಿ ನಡೆಯೋದು ನಿಮಗೆ ಗೊತ್ತೇ ಇದೆ. ಅದಕ್ಕೆ ಅನೇಕ ಸಿನಿಮಾ ನಟ-ನಟಿಯರು ರಾಯಭಾರಿಗಳಾಗಿ ಬರುತ್ತಾರೆ. ಸರ್ಕಾರವೂ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ. ಘನ ಕಾಡನ್ನು ಹೊಂದಿರುವ ಎಲ್ಲ ರಾಜ್ಯಗಳ ರಾಜಕಾರಣಿಗಳೂ ಕೇಂದ್ರ ಸರ್ಕಾರದಿಂದ ಇದಕ್ಕಾಗಿಯೇ ದೊಡ್ಡ […]

ಕನಸು ಕಾಣೋದಕ್ಕೂ ದಾರಿದ್ರ್ಯವೇಕೆ?

Sunday, April 30th, 2017

ನಾವೀಗ ವರಸೆ ಬದಲಿಸಬೇಕಿದೆ. ನಮ್ಮ ರಾಜ್ಯದ ಕುರಿತಂತೆ ನಾವೊಂದು ಕನಸು ಕಾಣಬೇಕಿದೆ. ಪಕ್ಷ ಯಾವುದೇ ಬರಲಿ. ವ್ಯಕ್ತಿಯಾರೇ ಅಧಿಕಾರದಲ್ಲಿರಲಿ. ರಾಜ್ಯದ ಜನತೆಯ ಕನಸನ್ನು ನನಸು ಮಾಡುವುದಷ್ಟೇ ಅವನ ಕರ್ತವ್ಯವಾಗಿರಬೇಕು. ಅಂತಹ ಪ್ರಜ್ಞಾವಂತಿಕೆ ನಾವೂ ಬೆಳೆಸಿಕೊಳ್ಳಬೇಕು ನಾಯಕರಿಗೂ ತುಂಬಬೇಕು. ನಿಜಾರ್ಥದಲ್ಲಿ ಪ್ರಜಾಪ್ರಭುತ್ವ ಆಚರಿಸುವಂತಾಗಬೇಕು. ಪ್ರಜಾಪ್ರಭುತ್ವಕ್ಕೆ ಎಷ್ಟು ಗುಣಗಳಿವೆಯೋ, ಒಂದಷ್ಟು ದೋಷಗಳೂ ಇವೆ. ರಾಜಪ್ರಭುತ್ವವಾಗಿದ್ದರೆ ಸಮರ್ಥ ರಾಜನ ಆಯ್ಕೆಯಲ್ಲಿ ಪ್ರಜೆಗಳ ಪಾತ್ರ ಹೆಚ್ಚು ಕಡಿಮೆ ಇಲ್ಲವೇ ಇಲ್ಲ. ಬುದ್ಧಿವಂತ ಮಂತ್ರಿಮಂಡಲ ರಾಜನಿಗೆ ಸಲಹೆ ನೀಡಬಹುದು. ಆದರೆ ರಾಜನ ನಿರ್ಣಯವೇ ಅಂತಿಮ. […]

ಶಾಶ್ವತ ಬರಪ್ರದೇಶದ ಘೋಷಣೆಗೆ ಸಿದ್ಧರಾಗಿ!

Monday, April 24th, 2017

ನಾವು ಜ್ವಾಲಾಮುಖಿಯ ಮೇಲೆ ಕುಳಿತಿದ್ದೇವೆ. ಸಿಡಿಯುವ ದಿನ, ವಾರ ಗೊತ್ತಿಲ್ಲದಿರಬಹುದು. ಆದರೆ ಸದ್ಯಕ್ಕೇ ಸಿಡಿಯಲಿದೆ ಎಂಬ ಸತ್ಯವಂತೂ ತಿಳಿದಿದೆ. ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ನ ಅಧ್ಯಯನದ ಪ್ರಕಾರ 1997 ರಿಂದೀಚೆಗೆ ಭಾರತದಲ್ಲಿ ಕ್ಷಾಮಕ್ಕೆ ತುತ್ತಾಗಬಹುದಾದ ಪ್ರದೇಶಗಳ ಸಂಖ್ಯೆ ಶೇಕಡಾ 57ರಷ್ಟು ಏರಿಕೆ ಕಂಡಿದೆ. ದುರ್ದೈವವೆಂದರೆ ಇವ್ಯಾವುವೂ ಮಳೆಯ ಕೊರತೆಯಿಂದ ಆದದ್ದಲ್ಲ. ‘ಭಾರತದ ಜನಸಂಖ್ಯೆಯ 25 ಪ್ರತಿಶತ ಜನ ಅಂದರೆ 33 ಕೋಟಿಯಷ್ಟು ಜನ ಬರಗಾಲದ ಬೇಗೆಗೆ ತುತ್ತಾಗಿದ್ದಾರೆ’ ಹಾಗಂತ ಡೆಕ್ಕನ್ ಕ್ರೋನಿಕಲ್ ಎಂಬ ಇಂಗ್ಲೀಷ್ ಪತ್ರಿಕೆ […]

ಸಾವಿನ ಮೇಲೆ ಸಾಮ್ರಾಜ್ಯ ಕಟ್ಟುವುದು ಹೊಸತಲ್ಲ!

Monday, April 17th, 2017

ಬ್ರಿಟೀಷರಿಗೆ ಭಾರತೀಯರ ಸಾವು ಬೇಕಿತ್ತು. 30 ಕೋಟಿ ಜನರನ್ನು ಹಿಡಿ ಹಿಡಿದು ಕೊಲ್ಲುವುದು ಸುಲಭವಲ್ಲ. ಅದಕ್ಕೆ ಬೇಕಾದ ಅವರ ಸೈನಿಕರ ಸಂಖ್ಯೆಯೂ ಕಡಿಮೆಯೇ. ಉಳಿದ ಮಾರ್ಗ ಕೃತಕ ಕ್ಷಾಮಗಳು, ಸಾಂಕ್ರಾಮಿಕ ರೋಗಗಳು ಮಾತ್ರ. ಬಂಗಾಳದಲ್ಲಿ ಈ ಬಗೆಯ ವ್ಯವಸ್ಥಿತ ಕೊಲೆಗೆ ಬಿಳಿಯ ಅಧಿಕಾರಿಗಳು ಪ್ರಯತ್ನ ಪಟ್ಟೇ ಇದ್ದರು. ಅದನ್ನು ವ್ಯರ್ಥಗೊಳಿಸಲೆಂದೇ ಭಗವಂತ ನಿವೇದಿತೆಯನ್ನು ಕಳಿಸಿದ್ದನೇನೋ? ಮತ್ತೊಂದು ಬಿರು ಬೇಸಿಗೆ ಕಾಲಿಟ್ಟಿದೆ. ಈ ಬಾರಿಯಂತೂ ನೀರಿಗೂ ಕುಡಿಯುವ ಹಾಹಾಕಾರವಾಗಲಿರುವುದು ಸತ್ಯ. ಬರಗಾಲದ ಸ್ಥಿತಿಯನ್ನು ಅನೇಕ ಜಿಲ್ಲೆಗಳು, ತಾಲೂಕುಗಳು ಅನುಭವಿಸಲೇಬೇಕಾದ […]

ಗೂಢಚಾರನೊಬ್ಬನ ಹಿಂದೆ ಎಷ್ಟೆಲ್ಲಾ ರಾಜತಾಂತ್ರಿಕ ನಡೆ!

Monday, April 17th, 2017

ಮೋದಿಯ ಕುರಿತಂತೆ ಭರವಸೆ ಈಗ ಪಾಕೀಸ್ತಾನದಲ್ಲಿರುವ ಹಿಂದೂಗಳಿಗೆ ಮಾತ್ರವಲ್ಲ ಟಿಬೇಟಿನಲ್ಲಿರುವ ಬುದ್ಧಾನುಯಾಯಿಗಳಿಗೂ ಇದೆ. ಈಗ ಚೀನಾಕ್ಕಿದ್ದದ್ದು ಒಂದೇ ದಾರಿ. ‘ಪಾಕಿಸ್ತಾನದ ಗಡಿಯ ಮೇಲೆ ಸರ್ಜಿಕಲ್ ದಾಳಿ ಮತ್ತು ನೋಟ್ ಬಂದಿಯ ನಂತರ ಯಾವ ಹಿಡಿತ ಭಾರತ ಹೊಂದಿದೆಯೋ ಅದನ್ನು ಸಡಿಲಗೊಳಿಸುವಂತಾಗಬೇಕು. ಆಗ ಮಾತ್ರ ಟಿಬೇಟಿನತ್ತ ತಲೆ ಹಾಕುವುದನ್ನು ಭಾರತ ಬಿಡುತ್ತದೆ’. ಆಗಲೇ ಅವರ ತಲೆ ಹೊಕ್ಕಿದ್ದು ಕಾಶ್ಮೀರದಲ್ಲಿ ತೀವ್ರಗೊಳ್ಳಬೇಕಿರುವ ತೀವ್ರಗಾಮಿ ಚಟುವಟಿಕೆ ಮತ್ತು ಭಾರತದ ಗಮನವನ್ನು ಮತ್ತೊಂದೆಡೆ ಸೆಳೆಯಬಲ್ಲ ಯಾವುದಾದರೂ ಯೋಜನೆ. ಪಾಕ್ನ ಹೆಗಲ ಮೇಲೆ ಬಂದೂಕಿಟ್ಟು ಗುಂಡು […]

ಮೋದಿ ಮತ್ತು ಯೋಗಿ ಏಕೆ ಹೀಗೆ?

Sunday, April 9th, 2017

ಪ್ರತಿಯೊಂದು ಸಮಸ್ಯೆಯ ಪರಿಹಾರಕ್ಕೂ ಪಶ್ಚಿಮವನ್ನೇ ನೋಡುತ್ತ ಸ್ವಂತ ಶಕ್ತಿಯನ್ನು ಮರೆತು ಕುಳಿತಿದ್ದೇವೆ. ನಮ್ಮೆಲ್ಲರನ್ನೂ ಬೆಸೆಯಬಲ್ಲ ಪರಿಹಾರ ಸೂತ್ರವನ್ನು ಪ್ರಾಚೀನ ಭಾರತದ ಪರಂಪರೆಯಲ್ಲಿ ಹುಡುಕದೇ ಹೊಸದನ್ನೇನೋ ಸೃಷ್ಟಿಸಿಬಿಡುವ ತವಕದಲ್ಲಿದ್ದೇವೆ. ನೆನಪಿರಲಿ. ಹೊಸದರ ಸೃಷ್ಟಿಯೂ ಹಳೆಯ ಅನುಭವದ ಆಧಾರದ ಮೇಲೆಯೇ ಆಗಿರಬೇಕೇ ಹೊರತು ಸೂತ್ರವಿಲ್ಲದ ಗಾಳಿಪಟವಾದರೆ ಅದರ ಒಡೆತನ ಯಾರಿಗೂ ಇಲ್ಲ. ನರೇಂದ್ರ ಮೋದಿಯಾಗಲಿ, ಯೋಗಿ ಆದಿತ್ಯನಾಥರಾಗಲೀ ಇದ್ದಕ್ಕಿದ್ದಂತೆ ಕೋಟ್ಯಂತರ ಜನರ ಹೃದಯ ತಟ್ಟಿದ್ದು ಏಕೆಂದು ಈಗ ಅರ್ಥವಾಗಿರಬೇಕಲ್ಲ. ಅವರು ರಾಮಮಂದಿರದ ಮಾತನಾಡಿದಾಗ, ಗೋಪ್ರೇಮದ ಚಿಂತನೆ ಮುಂದಿಟ್ಟಾಗ ಸುಪ್ತವಾಗಿದ್ದ ಭಾರತೀಯರ […]

ಹಿಂದೂ ಅಂದರೆ ಜೀವನ ಪದ್ಧತಿ, ಏಕೆ ಗೊತ್ತಾ?

Sunday, April 2nd, 2017

ಇಂದು ಕಾಲೇಜಿಗೆ ಹೋಗುವ ಹುಡುಗಿ ಸ್ನಾನ ಮಾಡದೇ ತಿನ್ನಬಾರದೆಂದು ಸೈನ್ಸ್ ಪುಸ್ತಕದಲ್ಲಿ ಎಲ್ಲಿದೆ ಹೇಳು ಎಂದು ತಂದೆ-ತಾಯಿಯರನ್ನು ಪ್ರಶ್ನಿಸುವಾಗ ಅವರ ಬಳಿ ಉತ್ತರವಿಲ್ಲ. ಇದರ ಹಿಂದೆ ಸಾವಿರಾರು ವರ್ಷಗಳಿಂದ ಹರಿದು ಬಂದ ಘನೀಭವಿತ ಪರಂಪರೆ ಇದೆ ಎಂದರೆ ಆಕೆಗೆ ಅರ್ಥವಾಗೋಲ್ಲ. ನಾವಿಂದು ವಿಜ್ಞಾನದ ಭೂತಗನ್ನಡಿಯ ಮೂಲಕ ಭಾರತದ ಚಿತ್ರ ನೋಡುವಾಗ ಪಶ್ಚಿಮವನ್ನೇ ಕಾಣುತ್ತಿದ್ದರೆ ಅತ್ತ ನಿವೇದಿತಾ ಶ್ರದ್ಧೆಯೆಂಬ ಕನ್ನಡಕ ಹಾಕಿಕೊಂಡು ಇಲ್ಲಿನ ಪ್ರತಿ ಮನೆಯಲ್ಲೂ ಭಾರತವನ್ನೇ ಕಾಣುತ್ತಿದ್ದಳು. ಎಷ್ಟೊಂದು ವ್ಯತ್ಯಾಸ. ಇತ್ತೀಚೆಗೆ ಬೆಳಕಿಗೆ ಬಂದ ಘಟನೆ. ವಹಾಬಿ […]