ವಿಭಾಗಗಳು

ಸುದ್ದಿಪತ್ರ


 

Archive for March, 2017

ಡ್ರ್ಯಾಗನ್ ಮುಸುಡಿಗೇ ಬಿದ್ದಿದೆ ಗುದ್ದು!

Friday, March 31st, 2017

ಗಿಲ್ಗಿಟ್ ಪ್ರದೇಶದ ಬಹು ಸಂಖ್ಯಾತರು ಷಿಯಾಗಳು. ಆದರೆ ಇಡಿಯ ಪಾಕೀಸ್ತಾನದ ಬಹುಪಾಲು ಜನ ಸುನ್ನಿಗಳು. ಸದಾ ಷಿಯಾಗಳನ್ನು ದ್ವೇಷಿಸುವ ಈ ಸುನ್ನಿಗಳು ಭಾರತದ ವಿರುದ್ಧ ಎತ್ತಿಕಟ್ಟಲು ಮಾತ್ರ ಗಿಲ್ಗಿಟ್ ಬಾಲ್ಟಿಸ್ತಾನವನ್ನು ಬಳಸಿಕೊಂಡರು. ಧರ್ಮದ ಅಫೀಮಿನ ನಶೆಯಿಂದ ಹೊರಬಂದ ಗಿಲ್ಗಿಟ್ ಭಾಗದಲ್ಲಿ ಪ್ರತ್ಯೇಕತೆಯ ಕೂಗು ಮೊಳಗಲಾರಂಭಿಸಿತು. ಜನ ಪಾಕೀಸ್ತಾನದ ಕಪಿಮುಷ್ಟಿಯಿಂದ ಹೊರಬರಬೇಕೆಂದು ಆಂದೋಲನ ಆರಂಭಿಸಿದರು. ಪಾಕೀಸ್ತಾನ ಯಾವುದಕ್ಕೂ ಜಗ್ಗಲಿಲ್ಲ. ಆಗಲೇ ಚೀನಾ ಪಾಕೀಸ್ತಾನಕ್ಕೆ ತನ್ನ ಕಾರಿಡಾರ್ ಯೋಜನೆಯ ಕನಸು ಕಾಣಿಸಲು ಶುರುಮಾಡಿದ್ದು. ಬ್ರಿಟನ್ನಿನ ಸಂಸತ್ತು ತೆಗೆದುಕೊಂಡ ಐತಿಹಾಸಿಕ ನಿರ್ಣಯ […]

ಮಹಿಳಾವಾದಕ್ಕೊಂದು ಭಾರತೀಯ ಸ್ಪರ್ಶ!

Monday, March 27th, 2017

ಮಹಿಳಾವಾದದ ಭಾರತೀಯ ಚಿಂತನೆಗೆ ನಿವೇದಿತಾ ಕೊಟ್ಟ ವ್ಯಾಖ್ಯೆ ಬಲು ಸುಂದರವಾದುದು. ಅದು ದಾರಿ ತಪ್ಪಿರುವ ರೀತಿ ಅದನ್ನು ಮತ್ತೆ ಹಳಿಗೆ ತರುವ ಮಾರ್ಗ ಎಲ್ಲವನ್ನೂ ಆಕೆ ವಿಷದವಾಗಿ ಹೇಳಿಕೊಟ್ಟಿದ್ದಾಳೆ. ತಿಳಿಯುವ ಸೂಕ್ಷ್ಮಮತಿ ನಮಗೆ ಬೇಕಷ್ಟೇ. ಇದನ್ನರಿತು ಅಂತಹ ಸ್ತ್ರೀವಾದವನ್ನು ಪ್ರತಿಪಾದಿಸುವ ಮಹಿಳೆಯರ ಸಂಖ್ಯೆ ಇಂದು ಹೆಚ್ಚಬೇಕಾಗಿದೆ. ಭಾರತೀಯ ಸಂಸ್ಕೃತಿಯ ಆಳ ವಿಸ್ತಾರಗಳನ್ನು ಸುಲಭದ ಪೆಟ್ಟಿಗೆ ಅರ್ಥ ಮಾಡಿಕೊಳ್ಳುವುದು ಕಷ್ಟ. ಈ ಸಂಸ್ಕೃತಿ ಒಂದೆರಡು ವರ್ಷಗಳ ಚಟುವಟಿಕೆಗಳ ಸಂಗ್ರಹವಲ್ಲ. ಅದು ಸಹಸ್ರಾರು ವರ್ಷಗಳ ಘನೀಭವಿಸಿದ ನವನೀತ. ಈಗಲೂ ಊರ […]

ಇದ್ದಕ್ಕಿದ್ದಂತೆ ಪ್ರೀತಿ ಉಕ್ಕಿದಾಗಲೇ ಅನುಮಾನ ಹುಟ್ಟೋದು!

Tuesday, March 21st, 2017

ಸ್ವತಃ ಎಡಚ ಲೇಖಕ, ಭಾರತದ ಇತಿಹಾಸವನ್ನು ತನಗೆ ಬೇಕಾದಂತೆ ತಿರುಚಿದ ಬಿಪಿನ್ ಚಂದ್ರರೇ ಹೇಳುತ್ತಾರೆ, ‘ಭಗತ್ ಮತ್ತು ಅವನ ಗೆಳೆಯರು ಮಾರ್ಕ್ಸ್ ವಾದದಲ್ಲಿ ಪಂಡಿತರೇನೂ ಆಗಿರಲಿಲ್ಲ. ಹಾಗಂತ ಏನೂ ತಿಳಿದವರಲ್ಲ ಎನ್ನುವಂತೆಯೂ ಇರಲಿಲ್ಲ. ಅವರು ತಾವೇ ಎಲ್ಲೆಡೆ ಅಡ್ಡಾಡಿ ಭಾರತದ ಕ್ರಾಂತಿಯ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುತ್ತಿದ್ದರು’ ಅಂತ. ಅರ್ಥವಾಯಿತಲ್ಲ! ಭಗತ್ರಿಗೆ ಭಾರತೀಯ ಕ್ರಾಂತಿಕಾರ್ಯದ ಸಮಸ್ಯೆಗಳನ್ನು ಅರಿಯಲ್ಲು ಕಮ್ಯುನಿಸಂನ ಪಾಂಡಿತ್ಯ ಬೇಕಿರಲಿಲ್ಲ. ಬಿಪಿನ್ ಚಂದ್ರರು ಮುಂದುವರಿಸಿ ಹೇಳುತ್ತಾರೆ, ‘ಅವರ ಸಮಾಜವಾದದ ಅರ್ಥೈಸಿಕೊಳ್ಳುವಿಕೆಯಲ್ಲಿ ಮತ್ತು ಆಚರಣೆಯಲ್ಲಿ ವಿರೋಧಾಭಾಸಗಳಿತ್ತು. ಅವರು […]

ಭಗತ್ ಸಿಂಗನ ಹೋರಾಟದಲ್ಲೂ ಕಮ್ಯುನಿಸಂನ ವಾಸನೆ ಹಿಡಿದ ಕಾಮ್ರೇಡುಗಳು

Monday, March 20th, 2017

ಭಗತ್ಸಿಂಗ್ ನಾನೇಕೆ ನಾಸ್ತಿಕ ಎಂಬ ಕೃತಿಯಲ್ಲಿ ದೇವರನ್ನು ನಂಬದಿರಲು ಕಾರಣಗಳನ್ನು ಪಟ್ಟಿ ಮಾಡುತ್ತಾನೆ. ಅದನ್ನು ಹಿಡುಕೊಂಡೇ ಎಡಚರೆಲ್ಲ ಭಗತ್ನನ್ನು ತಮ್ಮವನೆನ್ನೋದು. ವಿವೇಕಾನಂದರೂ 33 ಕೋಟಿ ದೇವತೆಗಳನ್ನು ಗಂಟು ಕಟ್ಟಿ ಸಮುದ್ರಕ್ಕೆಸೆಯಿರಿ ಅಂದಿದ್ದರು. ಗೀತೆ ಓದುವುದಕ್ಕಿಂತ ಫುಟ್ಬಾಲ್ ಆಡುವುದು ಭಗವಂತನಿಗೆ ಹತ್ತಿರ ಹೋಗುವ ಮಾರ್ಗ ಎಂದಿದ್ದರು. ಹಾಗಂತ ಅವರು ದೇವರು, ಧರ್ಮದ ವಿರುದ್ಧವೆಂದೇನಲ್ಲ. ಕಾರ್ಯಕರ್ತರನ್ನು ಆಲಸ್ಯದಿಂದ ಅಥವಾ ತೋರಿಕೆಯ ನಿಷ್ಕ್ರಿಯತೆಯಿಂದ ಸಕ್ರಿಯ ಹೋರಾಟದೆಡೆಗೆ ಸೆಳೆದು ತರಲು ಉಪಯುಕ್ತ ಮಾರ್ಗ ಅದು. ಸ್ವತಃ ಭಗತ್ ಈ ಕೃತಿ ಬರೆದ ನಂತರವೂ, […]

ನಿವೇದಿತೆಯ ಋಣ ತೀರಿಸಲು ಜನ್ಮ ಸಾಲದು!

Monday, March 20th, 2017

ಬೋಸರಿಗೆ ಆರ್ಥಿಕ ಸಹಾಯ ಮಾಡಿದ್ದಷ್ಟೇ ಅಲ್ಲ. ಅವರ ಎಲ್ಲಾ ಸಂಶೋಧನಾ ಪ್ರಬಂಧಗಳನ್ನೂ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಅದನ್ನು ಪ್ರಕಟಿಸಲು ಆಕೆ ಬೆನ್ನೆಲುಬಾಗಿ ನಿಂತಳು. ಬೋಸರೊಂದಿಗೆ ಸ್ವತಃ ತಾನೇ ಕೂತು ಅವರ ಪ್ರಬಂಧಗಳನ್ನು ಕರಾರುವಾಕ್ಕಾಗಿ ಮತ್ತು ಆಸಕ್ತಿಕರವಾಗಿ ದಾಖಲಿಸಿ ವಿಷಯದ ಮೇಲೆ ಆಸಕ್ತಿ ಇಲ್ಲದವರೂ ಅರ್ಥೈಸಿಕೊಳ್ಳುವಂತೆ ಪ್ರಭಾವಿಯಾಗಿ ಬರೆದದ್ದು ನಿವೇದಿತೆಯೇ. ಬ್ರಿಟೀಷ್ ವಿಜ್ಞಾನಿಗಳ ಮೇಲೆ ನಿರಂತರ ಒತ್ತಡ ಹೇರಿ ಬೋಸರ ಸಾಧನೆಯನ್ನು ಗೌರವಿಸುವಂತೆ ನಿವೇದಿತೆ ಮಾಡಿದ ಅವಿರತ ಪ್ರಯತ್ನದಿಂದಾಗಿಯೇ ಅವರಿಗೆ ಮುಂದೆ ನೈಟ್ಹುಡ್ ಪದವಿ ದಕ್ಕಿದ್ದು. 1901 ರಲ್ಲೊಮ್ಮೆ […]

ನಿದ್ದೆಯಲ್ಲಿ ನಡೆದಾಡುವ ಪುರುಷತ್ವಹೀನ ಜನಾಂಗ!

Saturday, March 18th, 2017

ನಿವೇದಿತಾ ಇಷ್ಟೊಂದು ಭಾರತಪ್ರೇಮಿಯಾಗಿದ್ದು ಯಾವಾಗಿನಿಂದ? ಬರಿ ಸ್ವಾಮಿ ವಿವೇಕಾನಂದರೆಡೆಗಿನ ಗೌರವದಿಂದಾಗಿಯೇ ಆಕೆ ಭಾರತವನ್ನು ಪ್ರೀತಿಸಿದ್ದಾ? ಹಾಗಿದ್ದರೆ ಅದು ಇಷ್ಟು ಕಠೋರವಾದ ಮತ್ತು ದೀರ್ಘಕಾಲದ ಭಾರತ ಭಕ್ತಿಯಾಗಿ ಪರಿವರ್ತನೆಯಾಗಲು ಸಾಧ್ಯವೇ ಆಗುತ್ತಿರಲಿಲ್ಲ. ತಾನೇ ಶುರು ಮಾಡಿದ ಹೆಣ್ಣುಮಕ್ಕಳ ಶಾಲೆಯಲ್ಲಿ ಭಾರತದ ರಾಣಿ ಯಾರು? ಎಂಬ ಪ್ರಶ್ನೆಗೆ ಪುಟ್ಟ ಮಕ್ಕಳು ‘ಕ್ವೀನ್ ವಿಕ್ಟೋರಿಯಾ’ ಎಂದಾಗ ಕೆಂಡವಾದ ನಿವೇದಿತಾ ‘ಅಲ್ಲಲ್ಲ ಭಾರತದ ರಾಣಿ ಸೀತೆ, ಸಾವಿತ್ರಿ’ ಎಂದಳಲ್ಲ. ಅವಳಿಗೆ ಈ ದೇಶದ ಅಂತರಂಗ ಅರಿವಾದದ್ದು ಹೇಗೆ? ಗುರ್ಮೆಹೆರ್ ಕೌರ್. 1999ರಲ್ಲಿ ಜಮ್ಮು […]

ದೇಶಭಕ್ತಿಯ ಸೂರ್ಯೋದಯವನ್ನು ತಡೆಯಬಲ್ಲವರು ಯಾರಿದ್ದಾರೆ?

Monday, March 13th, 2017

6 ಸಾವಿರಕ್ಕೂ ಹೆಚ್ಚ್ಚು ಕಾಲೇಜು ಆವರಣಗಳಲ್ಲಿ ಕಾರ್ಯಕರ್ತರು ಸೇರಿ ಹೊಸ ಮತದಾರರ ಸೇರ್ಪಡೆಗೊಳಿಸುವ ಕೆಲಸ ಆರಂಭಿಸಿದ್ದರು. ಒಟ್ಟಾರೆ ಒಂಭತ್ತು ಲಕ್ಷಕ್ಕೂ ಮಿಕ್ಕಿ ಹೊಸಬರನ್ನು ಮತದಾರರನ್ನಾಗಿಸುವ ಕಾರ್ಯ ಯಶಸ್ವಿಯಾಗಿತ್ತು. ನವೆಂಬರ್ನಲ್ಲಿ ಶುರುವಾದ ಪರಿವರ್ತನಾ ರ್ಯಾಲಿಗಳು 4 ದಿಕ್ಕಿನಿಂದ ಉತ್ತರ ಪ್ರದೇಶವನ್ನು ಆವರಿಸಿಕೊಂಡವು. ಡಿಸೆಂಬರ್ನಲ್ಲಿ ಇದು ಮುಗಿದಾಗ ಒಟ್ಟು 403 ವಿಧಾನಸಭಾ ಕ್ಷೇತ್ರದ 50 ಲಕ್ಷಕ್ಕೂ ಹೆಚ್ಚು ಜನರನ್ನು ನೇರವಾಗಿ ಭೇಟಿ ಮಾಡಿತ್ತು. 2 ಸಾವಿರ ಕಾಲೇಜು ರಾಯಭಾರಿಗಳು ಕಾಲೇಜು ಸಭೆಗಳನ್ನು ನಡೆಸಿ ಮೋದಿಯ ಗುಣಗಾನ ಮಾಡತೊಡಗಿದ್ದರು. ಈ ವಿದ್ಯಾರ್ಥಿಗಳೊಂದಿಗೆ […]