ವಿಭಾಗಗಳು

ಸುದ್ದಿಪತ್ರ


 

Archive for December, 2018

ಹೆದರಬೇಕಿಲ್ಲ; ಬಲಾಢ್ಯ ಕೈಗಳಲ್ಲಿದೆ ಭಾರತ!

Monday, December 31st, 2018

ದೋವಲ್ರನ್ನು ಸುಮ್ಮಸುಮ್ಮನೆ ಜೇಮ್ಸ್ಬಾಂಡ್ ಅನ್ನೋದಲ್ಲ. ಬಹುಶಃ ಹಿಂದೆಂದೂ ಭಾರತದ ಭದ್ರತಾ ಸಲಹೆಗಾರರು ಇಷ್ಟು ವ್ಯಾಪಕವಾದ ಚಚರ್ೆಗೆ ಒಳಗಾಗಿರಲಿಲ್ಲ. ಇಂದು ಜಾಗತಿಕ ಮಟ್ಟದಲ್ಲಿ ದೋವಲ್ರ ಚಾಣಾಕ್ಷತನದ ಕುರಿತಂತೆ ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ದೆಹಲಿ ಆಗ್ರಾಗಳಲ್ಲಿ ಐಸಿಸ್ನ ಸ್ಲೀಪರ್ ಸೆಲ್ಗಳನ್ನು ಗುರುತಿಸಿ ತರುಣರೊಂದಷ್ಟು ಜನರನ್ನು ಒಳಗಿಂದ ಎಳೆದೆಳೆದು ಬಿಸಾಡುತ್ತಿದ್ದಂತೆ ದೇಶದಲ್ಲಿ ಅಲ್ಲೋಲ-ಕಲ್ಲೋಲವೆದ್ದಿದೆ. ನರೇಂದ್ರಮೋದಿಯವರಾದಿಯಾಗಿ ರಾಷ್ಟ್ರದ ಪ್ರಮುಖ ನಾಯಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಸಿದ್ಧರಾಗಿದ್ದ ಮಾನವ ಬಾಂಬರ್ಗಳು ದೇಶದೆಲ್ಲರ ಎದೆ ನಡುಗುವಂತೆ ಮಾಡಿಬಿಟ್ಟಿದ್ದಾರೆ. ಒಂದೆಡೆ ಗೂಢ ಮಾಹಿತಿಯನ್ನೆಲ್ಲಾ ಕಲೆ ಹಾಕಿ ದುಷ್ಟರನ್ನು ಬಂಧಿಸುವ […]

ಪತ್ರಕರ್ತನೇ ಭ್ರಷ್ಟವ್ಯವಸ್ಥೆಯ ಅಡಿಪಾಯವಾದರೆ ಪರಿಹಾರವೇನು?!

Monday, December 31st, 2018

ಶಾಸಕಾಂಗ, ಕಾಯರ್ಾಂಗ, ನ್ಯಾಯಾಂಗಗಳ ನಂತರ ಪ್ರಜಾಪ್ರಭುತ್ವದ ರಕ್ಷಣೆಗೆ ಇರುವ ನಾಲ್ಕನೇ ಸ್ತಂಭವೇ ಮಾಧ್ಯಮ ಎಂದು ಹೇಳಲಾಗುತ್ತಿತ್ತು. ಆದರೆ ಮಾಧ್ಯಮವಿಂದು ಅದೆಷ್ಟು ಭ್ರಷ್ಟವಾಗಿ ಹೋಗಿದೆಯೆಂದರೆ ಉಳಿದ ಮೂರು ಸ್ತಂಭಗಳ ಕುರಿತಂತೆ ದನಿಯೆತ್ತುವ ಯೋಗ್ಯತೆಯಾದರೂ ಇದೆಯಾ ಎಂಬುವ ಪ್ರಶ್ನೆ ಖಂಡಿತ ಕಾಡುತ್ತದೆ. ನಮ್ಮ ಕಾಲದಲ್ಲಿ ನಾವು ಕೇಳಬಹುದಾದ ಅತ್ಯಂತ ಕೆಟ್ಟ ಸುದ್ದಿಯೊಂದು ಬಂಗಾಳದಿಂದ ಹೊರಗೆ ಬಂದಿದೆ. ಬಂಗಾಳದ ಖ್ಯಾತ ಪತ್ರಕರ್ತ ಸುಮನ್ ಚಟ್ಟೋಪಾಧ್ಯಾಯ ಶಾರದಾ ಚಿಟ್ಫಂಡ್ನ ಹಗರಣದಲ್ಲಿ ಸಾಕ್ಷಿ ಸಮೇತ ಸಿಕ್ಕುಬಿದ್ದು ಜೈಲುಪಾಲಾಗಿದ್ದಾರೆ. ಸಿಬಿಐನ ನಿದರ್ೇಶನದಂತೆ ಆತನಿಗೆ ಜಾಮೀನು ಕೂಡಾ […]

ಭಾರತದಲ್ಲಿರೋಕೆ ಭಯ ಎಂದವರಿಗೆ ಪಾಕಿಸ್ತಾನಕ್ಕೆ ಎಕ್ಸ್ ಪೋರ್ಟ್ ಮಾಡೋದು ಒಳ್ಳೇದು!!

Monday, December 31st, 2018

ನಾಜೀರುದ್ದೀನ್ ಶಾ ಖಾಸಗಿ ಚಾನೆಲ್ ಒಂದಕ್ಕೆ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಪ್ರತಿಯೊಬ್ಬ ಭಾರತೀಯನ ಬೆನ್ನಿಗೂ ಚೂರಿ ಹಾಕುವಂತಹ ಮಾತುಗಳನ್ನಾಡಿದ್ದಾರೆ. ಭಾರತದಲ್ಲಿ ಅಸಹನೆ ಹೆಚ್ಚುತ್ತಿದ್ದು ಮುಸಲ್ಮಾನರು ಬದುಕುವುದೇ ಕಷ್ಟವಾಗುತ್ತಿದೆ ಎಂದಿದ್ದಾರಲ್ಲದೇ ನನ್ನ ಮಕ್ಕಳೆಲ್ಲಾ ಈ ದೇಶದಲ್ಲಿ ಹೇಗೆ ಬದುಕು ನಡೆಸಬಲ್ಲರು ಎಂಬುದು ಆತಂಕದ ವಸ್ತುವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದು ಇಂಟಾಲರೆನ್ಸ್ ಭಾಗ 2! ಬಹುಶಃ ಅಸಹಿಷ್ಣುತೆಯ ಈ ಚಚರ್ೆ ನಿಮಗೆ ಮತ್ತೊಮ್ಮೆ ನೆನಪಿಗೆ ಬಂದಿರಬಹುದು. ಬಿಹಾರದ ಚುನಾವಣೆಗಳು ನಡೆಯುವಾಗ ಅಖಲಾಖ್ನ ಸಾವನ್ನು ಜಗದ್ವ್ಯಾಪಿಯಾಗಿ ಬಿಂಬಿಸುವ ಪ್ರಯತ್ನ ನಡೆದಿತ್ತು. ಮನೆಯಲ್ಲಿ […]

ಜನಪ್ರಿಯ ಘೋಷಣೆಗಳು ವರ್ಸಸ್ ಪ್ರಗತಿಯ ಹೆಜ್ಜೆಗಳು!

Monday, December 31st, 2018

ನರೇಂದ್ರಮೋದಿಯವರು ಈಗ ಇದ್ದಕ್ಕಿದ್ದಂತೆ ಮಧ್ಯಮವರ್ಗದವರ ವಿರೋಧಿಯಾಗಿದ್ದಾರೆ, ಮುಸಲ್ಮಾನರ ವಿರೋಧಿಯಾಗಿದ್ದಾರೆ, ದಲಿತರ ವಿರೋಧಿಯಾಗಿದ್ದಾರೆ, ಬ್ರಾಹ್ಮಣರ ವಿರೋಧಿಯಾಗಿದ್ದಾರೆ. ಒಟ್ಟಾರೆ ಅವರು ದೇಶದ ಪರವಾಗಿ ಮಾತ್ರ ಇರೊದು. ದುರಂತವೆಂದರೆ ಅವರನ್ನು ಬೆಂಬಲಿಸಿಕೊಂಡು ಬಂದಿದ್ದವರೆಲ್ಲಾ ಅವರ ಸೋಲಿಗೆ ಕಾರಣವನ್ನು ವಿಶ್ಲೇಷಿಸುವ ಭರದಲ್ಲಿ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಐದು ರಾಜ್ಯಗಳ ಚುನಾವಣೆ ಮತ್ತು ಆನಂತರದ ಬೆಳಣಿಗೆಗಳ ಚಚರ್ೆ ಇನ್ನೂ ನಿಂತೇ ಇಲ್ಲ. ಏಕೆಂದರೆ ಅದು ಬರಲಿರುವ ಲೋಕಸಭಾ ಚುನಾವಣೆಗೆ ಬಲು ಹತ್ತಿರದ ಪೂರ್ವಭಾವಿ ಚುನಾವಣೆ. ಬಹುಶಃ ಹರಿಯಾಣಾದಲ್ಲಿ ಮುನ್ಸಿಪಾಲಿಟಿ ಚುನಾವಣೆಗಳಲ್ಲಿ ಭಾಜಪ ಎದುರಾಳಿಗಳನ್ನು ಕ್ಲೀನ್ […]

ರಾ(ಗಾ)ಫೇಲ್, ದೇಶ ಪಾಸ್!

Tuesday, December 18th, 2018

ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಭಾರತ ತನ್ನ ಸುತ್ತಲೂ ಇರುವ ಸಮುದ್ರವನ್ನು ಸಾಗಾಣಿಕೆಗೆ ಎಂದೂ ಬಳಸಿಕೊಂಡೇ ಇರಲಿಲ್ಲ. ನದಿಗಳು ಕೊಳಕು ಚೆಲ್ಲುವ ಚರಂಡಿಯಾಗಷ್ಟೇ ಬಳಕೆಯಾಗುತ್ತಿದ್ದವು. ನೆನಪಿಡಿ. ಯಾವಾಗ ವಸ್ತುವೊಂದನ್ನು ನಾವು ಭಿನ್ನ-ಭಿನ್ನ ರೂಪಗಳಲ್ಲಿ ಬಳಸಿಕೊಳ್ಳುವುದಿಲ್ಲವೋ ಆಗ ಅದರ ಅಗತ್ಯ ಕಡಿಮೆಯಾಗುತ್ತಲೇ ಹೋಗುತ್ತದೆ. ಸಹಜವಾಗಿಯೇ ಅದು ಹಾಳಾಗುತ್ತದೆ. ಕಾಂಗ್ರೆಸ್ಸಿಗೆ ಭಾರೀ ಮುಖಭಂಗ. ಹೆಚ್ಚು-ಕಡಿಮೆ ಕಳೆದ ಒಂದು ವರ್ಷದಿಂದ ರಫೆಲ್ನ ಕುರಿತಂತೆ ಅವರು ಜನರಿಗೆ ಹೇಳುತ್ತಾ ಬಂದಿದ್ದ ಸುಳ್ಳುಗಳೆಲ್ಲಾ ಈಗ ಸುಪ್ರೀಂಕೋಟರ್ಿನಲ್ಲೇ ಕಸದ ಬುಟ್ಟಿಗೆ ಎಸೆಯಲ್ಪಟ್ಟಿದೆ. ಸಂಸತ್ತಿನಲ್ಲಿ ಫ್ರಾನ್ಸಿನ […]

2019 ರ ಕದನ ಏನಾಗಬಹುದೆಂಬ ಕುತೂಹಲ!

Tuesday, December 18th, 2018

2014ರಲ್ಲಿಯೇ ರಾಜ್ದೀಪ್ ಸರ್ದೇಸಾಯಿ, ಸಾಗರಿಕಾಳಂತಹ ಪತ್ರಕರ್ತರು ಮೋದಿಗಿಂತ ಚೌಹಾಣ್ ಪರವಾಗಿಲ್ಲ ಎಂದು ಜನರ ಮುಂದೆ ಮಂಡಿಸಲು ಶುರುಮಾಡಿದ್ದರು. ಆದರೆ ಈ ಬಾರಿ ಮೋದಿಯನ್ನುಳಿದರೆ ಅಂತಹ ಯಾವ ಆಯ್ಕೆಗಳೂ ಬಾಕಿ ಉಳಿದಿಲ್ಲ. ಹೀಗಾಗಿ ಗೆಲುವಿಗೆ ಮೋದಿ ಇನ್ನೊಂದು ಹೆಜ್ಜೆ ಹತ್ತಿರ ಹೋದಂತೆಯೇ ಆಯ್ತು. ಐದು ರಾಜ್ಯಗಳ ಚುನಾವಣೆಯಲ್ಲಿ ಭಾಜಪದ ಸೋಲನ್ನು ನರೇಂದ್ರಮೋದಿಯವರ ಸೋಲೆಂದು ಬಿಂಬಿಸಲು ಕಾಂಗ್ರೆಸ್ಸು ಯತ್ನಿಸುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಮೋದಿಯವರ ಅಭಿಮಾನಿಗಳಂತೂ ಅದನ್ನು ಹಾಗೆಯೇ ಭಾವಿಸಿಬಿಟ್ಟಿದ್ದಾರೆ. ಎಲ್ಲಾ ಮೋದಿ ಪರ ಸಾಮಾಜಿಕ ಜಾಲತಾಣಗಳಲ್ಲಿ ಇದೇ ಚಚರ್ೆ. […]

ಮಿಶೆಲ್ ಬಂದಾಯ್ತು ಇನ್ನೀಗ ವಿಜಯಮಲ್ಯ!

Tuesday, December 18th, 2018

ಈ ಲೇಖನ ಓದುವ ವೇಳೆಗಾಗಲೇ ವಿಜಯಮಲ್ಯ ಪ್ರಕರಣ ಏನಾಯಿತೆಂಬುದು ಒಂದು ಹಂತಕ್ಕೆ ನಿಮಗೆಲ್ಲರಿಗೂ ಗೊತ್ತಾಗಿರುತ್ತದೆ. ಲಂಡನ್ನಿನಲ್ಲಿ ಅಡಗಿರುವ ವಿಜಯಮಲ್ಯ ಬ್ಯಾಂಕುಗಳಿಗೆ ದುಡ್ಡು ಕಟ್ಟದೇ ಅಲೆದಾಡುತ್ತಿದ್ದಾನೆ. ಅವನನ್ನು ಮೋದಿಯೇ ಓಡಿಸಿದ್ದಾರೆಂಬುದು ಕಾಂಗ್ರೆಸ್ಸಿಗರ ವಾದ. ಆದರೆ ಅಚ್ಚರಿಯ ಸಂಗತಿ ಏನೆಂದರೆ, ಮಲ್ಯನಿಗೆ ಸಾಲ ಕೊಟ್ಟಿದ್ದೇ ಕಾಂಗ್ರೆಸ್ಸು ಸಕರ್ಾರ. ಆತನನ್ನು ಹಿಡಿದು ತರಲೆಂದು ಇಂಗ್ಲೆಂಡಿನ ಪ್ರಧಾನಿ ತೆರೆಸಾಮೇಯೊಂದಿಗೆ ಕಿತ್ತಾಡುತ್ತಿರುವುದು ಈಗಿನ ಸಕರ್ಾರ! ಹೇಗಾದರೂ ಮಾಡಿ ವಿಜಯಮಲ್ಯನಿಂದ ಲೂಟಿಗೈದ ಹಣವನ್ನು ಕಕ್ಕಿಸಿ ಭ್ರಷ್ಟಾಚಾರಕ್ಕೆ ತಮ್ಮದು ಜೀರೋ ಟಾಲರೆನ್ಸ್ ಎಂದು ತೋರಿಸುವ ಹಠಕ್ಕೆ ಮೋದಿ […]

ನಿಜಕ್ಕೂ ಈಗ ಭಾರತ ಗೆಲ್ಲುತ್ತಿದೆ!

Friday, December 14th, 2018

ನರೇಂದ್ರಮೋದಿ ಪ್ರಧಾನಿಯಾದಾಗಿನಿಂದಲೂ ಚೀನಾದ ದೆಸೆ ಕೆಟ್ಟಿದೆ ಎಂದೇ ಹೇಳಬೇಕು. ಇಷ್ಟೂ ದಿನಗಳ ಕಾಲ ಜಗತ್ತಿನಲ್ಲಿ ತಮ್ಮ ಪ್ರಭಾವವನ್ನು ಮಂಡಿಸಲಾಗದೇ ಹೆಣಗಾಡುತ್ತಿದ್ದ ಭಾರತೀಯ ನಾಯಕರು 5 ವರ್ಷಗಳ ಕಾಲ ತಳ್ಳಿದರೆ ಸಾಕೆಂದು ಏದುಸಿರು ಬಿಟ್ಟು ಕುಳಿತಿರುತ್ತಿದ್ದರು. ಮೋದಿ ಹಾಗಲ್ಲ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಏಷಿಯಾದಲ್ಲಿ ಚೀನಾಕ್ಕೆ ಪ್ರಬಲ ಶಕ್ತಿ ತಾವೆಂದು ಜಗತ್ತಿಗೆ ನಂಬಿಕೆ ಬರುವಂತೆ ಮಾಡಿಬಿಟ್ಟಿದ್ದಾರೆ. ಒಂದು ಬಲು ಸಂತೋಷದ ಸುದ್ದಿ. ಆಸ್ಟ್ರೇಲಿಯಾಕ್ಕೆ ನೀವು ಹೋಗಿ ಸಿಡ್ನಿಯಲ್ಲಿ ಮೆಟ್ರೊ ಹತ್ತಿದರೆ ನೀವು ಹೆಮ್ಮೆ ಪಡುವ ಸಂಗತಿಯೊಂದು ಅನುಭವಕ್ಕೆ […]

ಭಾರತ ಅಭಿವೃದ್ಧಿಯಾದರೆ ಇವರಿಗೇಕೆ ಉರಿ?!

Thursday, December 13th, 2018

ನರೇಂದ್ರಮೋದಿಯನ್ನು ವಿರೋಧಿಸೋದು ಎಂದರೆ ಈ ದೇಶವನ್ನೇ ವಿರೋಧಿಸೋದು ಎಂದು ಹಲವರು ತಿಳಿದುಕೊಂಡುಬಿಟ್ಟಿದ್ದಾರೆ. ಅಥವಾ ವಿಚಾರವಾದಿ ಬುದ್ಧಿಜೀವಿಗಳ ರೂಪದಲ್ಲಿದ್ದ ಇವರೊಳಗಿನ ದೇಶದ್ರೋಹದ ಭಾವನೆಯನ್ನು ನರೇಂದ್ರಮೋದಿಯವರು ಕುಲುಕಾಡಿಸಿ ಹೊರತೆಗೆಯುತ್ತಿದ್ದಾರೆ. ಕೆಲವಾರು ಘಟನೆಗಳು ಈ ವಿಚಾರಕ್ಕೆ ಪುಷ್ಟಿ ಕೊಡುವಂತೆ ನಡೆಯುತ್ತಿರುವುದು ನಿಜಕ್ಕೂ ಹುಬ್ಬೇರಿಸುವಂತೆ ಮಾಡುತ್ತಿದೆ. ತೀರಾ ಇತ್ತೀಚೆಗೆ ಕತರ್ಾರ್ಪುರ ಘಟನೆಗೆ ಸಂಬಂಧಿಸಿದಂತೆ ಒಮ್ಮೆ ಅವಲೋಕನ ಮಾಡಿನೋಡಿ. ನವಜೋತ್ ಸಿಂಗ್ ಸಿದ್ದು ಪಾಕಿಸ್ತಾನಕ್ಕೆ ಹೋಗಿದ್ದಲ್ಲದೇ ಅಲ್ಲಿ ನಡೆದ ಘಟನಾವಳಿಗಳನ್ನು ಅದೆಷ್ಟು ಕೆಟ್ಟದಾಗಿ ಸಮಥರ್ಿಸಿಕೊಳ್ಳುತ್ತಿದ್ದಾರೆಂದರೆ ಪಂಜಾಬು ಮತ್ತೊಂದು ತುಂಡಾಗಿ ಪಾಕಿಸ್ತಾನಕ್ಕೆ ಸೇರ್ಪಡೆಯಾಗಿಬಿಟ್ಟರೂ ಸಿದ್ಧು ಠೋಕೊ […]

ಮೋದಿ ಹೇಳಿದ್ದು ಕೊನೆಗೂ ಸುಳ್ಳಾಯ್ತಾ?!

Thursday, December 13th, 2018

ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ ಶೇಕಡಾ 60 ರಷ್ಟು ಜನ ಶೌಚಾಲಯವನ್ನೇ ಕಂಡಿರಲಿಲ್ಲ. ಇಂದು ಹೆಚ್ಚು-ಕಡಿಮೆ ಶೇಕಡಾ 90 ರಷ್ಟು ಜನಕ್ಕೆ ಮನೆಗಳಲ್ಲಿ ಶೌಚಾಲಯದ ವ್ಯವಸ್ಥೆಯಿದೆ. ಹಳ್ಳಿಗಳ ಈ ಮನೆಗಳಿಗೆ ಕರೆಂಟು ಬಂದಿದ್ದು ಮೋದಿಯ ಅವಧಿಯಲ್ಲೇ. ಮೋದಿಯವರು ಅಧಿಕಾರ ಸ್ವೀಕರಿಸುವ ಮುನ್ನ ಒಂದು ಅಂದಾಜಿನ ಪ್ರಕಾರ ಶೇಕಡಾ 70 ರಷ್ಟು ಜನಕ್ಕೆ ವಿದ್ಯುತ್ ಲಭ್ಯವಿತ್ತು. ಇಂದು ಈ ದೇಶದ ಪ್ರತಿ ಹಳ್ಳಿಗೂ ವಿದ್ಯುತ್ ತಂತಿಗಳನ್ನು ಎಳೆಯಲು ನಾವು ಸಕ್ಷಮರಾಗಿದ್ದೇವೆ. ಪ್ರಧಾನಮಂತ್ರಿ ನರೇಂದ್ರಮೋದಿ ಆಯುಷ್ಮಾನ್ ಭಾರತದ ಯೋಜನೆಯನ್ನು […]