ವಿಭಾಗಗಳು

ಸುದ್ದಿಪತ್ರ


 

Archive for May, 2020

ಪರಿತಪಿಸುತ್ತಿದ್ದಾಳೆ ಮೇನಕೆ..

Saturday, May 2nd, 2020

ತಪೋಭಂಗಕ್ಕೆ ತನ್ನ ತಳ್ಳಿದ ದೇವೇಂದ್ರನಿಗಿಂತಲೂ, ತನ್ನನ್ನೇ ತಪವೆಂದು ಅಪ್ಪಿದ ವಿಶ್ವಾಮಿತ್ರ ನಿಜ ಗಂಡಸು. ಮರಳಿ ಸ್ವರ್ಗಕ್ಕೆ ಹೋಗಬೇಕಾದ ಕ್ಷಣ ಹತ್ತಿರ ಬಂದಂತೆಲ್ಲ ಪರಿತಪಿಸುತ್ತಿದ್ದಾಳೆ ಮೇನಕೆ..

ಹೋಯ್ತು ಪಿಶಾಚಿ ಅಂದ್ರೆ ಬಂತು ಗವಾಕ್ಷೀಲಿ!

Saturday, May 2nd, 2020

ಅಮೇರಿಕಾದಲ್ಲಿ ಅದಾಗಲೇ ಎಲ್ಲಾ ಲೆಕ್ಕಾಚಾರವನ್ನೂ ಮೀರಿದ ಭಯಾನಕ ಸಾವು-ನೋವುಗಳಾಗಿವೆ. ಅಮೇರಿಕಾದಲ್ಲಿ 2017-18ರಲ್ಲಿ ನ್ಯುಮೋನಿಯಾ ಕಾರಣಕ್ಕೆ 10ಲಕ್ಷ ಜನರಿಗೆ 20 ರಿಂದ 25 ಜನ ಸಾವನ್ನಪ್ಪಿದರೆ ಕೊರೊನಾ ಅವೆಲ್ಲದರ ದಾಖಲೆಯನ್ನು ಮೀರಿಸಿ, ಅದಾಗಲೇ ಸರಾಸರಿ 40ರ ಬಲಿಯನ್ನು ಪಡೆಯುತ್ತಿದೆ. ಇದು ಅದಾಗಲೇ ಅಲ್ಲಿ ಹೃದ್ರೋಗಕ್ಕೆ ಸಾಯುವವರ ಸಂಖ್ಯೆಯನ್ನು ದಾಟಿ ದಾಪುಗಾಲಿಡುತ್ತಿದೆ. ಇದು ಯಾವುದೇ ಮುನ್ಸೂಚನೆಯನ್ನು ಗಣಿಸದಿದ್ದುದರ ಪರಿಣಾಮ. ಕೊರೋನಾ, ಕೊರೋನಾ, ಕೊರೋನಾ.. ಇನ್ನು ಎಷ್ಟು ದಿನ ಇದರ ಬಗ್ಗೆನೇ ಮಾತಾಡ್ಬೇಕು, ಕೇಳ್ಬೇಕು, ನೋಡ್ಬೇಕು, ಬರಿಬೇಕು! ನನಗೆ ಗೊತ್ತು, ಪ್ರತಿಯೊಬ್ಬರಿಗೂ […]

ಕೊರೋನಾ: ಭಾರತದಿಂದ ಜಗತ್ತು ಕಲಿತ ಪಾಠ!

Saturday, May 2nd, 2020

ಚೀನಾ ವೈರಸ್ಸನ್ನು ಸೃಷ್ಟಿಸಿದೆ ಎಂಬ ವಾದವನ್ನು ಒಪ್ಪುವುದೇ ಆದರೆ ಜಗತ್ತೆಲ್ಲವನ್ನೂ ಬಯಸಿದಾಗ ಬಾಯಿ ಮುಚ್ಚುವಂತೆ ಮಾಡಬಲ್ಲ ತಾಕತ್ತು ಅದಕ್ಕಿದೆ ಎಂಬುದು ನಿಸ್ಸಂಶಯವಾಗಿ ಸಿದ್ಧವಾಗುತ್ತದೆ. ಅಂದರೆ ಮೂರನೇ ಜಾಗತಿಕ ಯುದ್ಧವನ್ನು ಚೀನಾ ಶಾಂತವಾಗಿಯೇ ಗೆದ್ದುಬಿಟ್ಟಿದೆ! ಜಗತ್ತನ್ನು ಎರಡನೇ ಮಹಾಯುದ್ಧದ ನಂತರ ಈ ಪರಿ ಆತಂಕಕ್ಕೆ ದೂಡಿದ ಸಂಗತಿ ಮತ್ತೊಂದಿಲ್ಲ. ಈ ಹೊತ್ತಿನಲ್ಲಿ ಎಲ್ಲರ ಕಣ್ಣು ಚೀನಾದತ್ತ ಇದೆ. ಸ್ವಲ್ಪ ಎಡವಟ್ಟಾದರೂ ಅಮೇರಿಕಾ ತನ್ನ ಸಾರ್ವಭೌಮತೆಯನ್ನು ಕಳೆದುಕೊಂಡು ಚೀನಾದೆದುರು ತಲೆ ಬಾಗಲೇಬೇಕಾದ ಸ್ಥಿತಿಗೆ ಬಂದು ನಿಂತುಕೊಳ್ಳುತ್ತದೆ. ಹಾಗಲ್ಲದೇ ಈ ಯುದ್ಧವನ್ನು […]

ಮತಾಂಧತೆ, ಕೋಮುವಾದ; ನಿಜ ಅರ್ಥ ಅರಿವಾಗುತ್ತಿದೆ!

Saturday, May 2nd, 2020

ಮತಾಂಧತೆ ಇಣುಕಿದ ಕೆಲವು ಜನಾಂಗಗಳ ನಡುವೆ ಹೊಕ್ಕು ನೋಡಿದರೆ ನೀವು ಗಾಬರಿಯಾಗಿಬಿಡುತ್ತೀರಿ. ಇಸ್ರೇಲ್ನಲ್ಲಿ ಪರಮ ಸಂಪ್ರದಾಯಸ್ಥ ಯಹೂದಿಗಳು ಆ ದೇಶದ ಶೇಕಡಾ 12ರಷ್ಟು ಜನಸಂಖ್ಯೆಯನ್ನು ಹೊಂದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೀನಾ ಕೊರೋನಾ ವೈರಸ್ನ ರೋಗಿಗಳಲ್ಲಿ ಶೇಕಡಾ 60ರಷ್ಟು ಅವರೇ ಇದ್ದಾರೆ. ಹೀಗಾಗಿ ಸಕರ್ಾರ ಅವರ ಮೇಲೆ ಕಣ್ಣಿಡಲೇಬೇಕಾದಂತಹ ಪರಿಸ್ಥಿತಿಗೆ ಬಂದಿದೆ. ಮತಾಂಧತೆ, ಕೋಮುವಾದ ಇವೆಲ್ಲವುಗಳ ಅರ್ಥ ಈಗ ತಿಳಿಯುತ್ತಿದೆ. ಈಗಲೂ ಅರ್ಥ ಮಾಡಿಕೊಳ್ಳದವನು ಮೂರ್ಖ ಮಾತ್ರ. ಬಹಳ ಹಿಂದೆಯೇ ಜಾಗತಿಕ ಮಟ್ಟದ ತಜ್ಞರ ತಂಡವೊಂದು […]

ಕರೋನಾ ಹಳೆಯದ್ದನ್ನೆಲ್ಲಾ ನೆನಪಿಸಿತು!

Friday, May 1st, 2020

ಇದಕ್ಕಿಂತಲೂ ದುರಂತವೇನು ಗೊತ್ತೇನು? ಯಾವೊಬ್ಬ ಮುಸಲ್ಮಾನನೂ ನೊಂದುಕೊಂಡು ಇದರ ವಿರುದ್ಧವಾಗಿ ಮಾತನಾಡುತ್ತಿಲ್ಲ. ಹೇಗೆ ಮಾಬ್ಲಿಂಚಿಂಗ್ನ ಕಾಲಘಟ್ಟದಲ್ಲಿ ಹಿಂದುಗಳು ತಮ್ಮವರ ವಿರುದ್ಧವೇ ಕೂಗಾಡುತ್ತಿದ್ದರೋ ಅಂತಹ ದೈರ್ಯವನ್ನು ತೋರುತ್ತಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ದಾರಿ ತಪ್ಪಿದ ಈ ತರುಣರಿಗೆ ಬುದ್ಧಿಮಾತನ್ನು ಹೇಳುವ ಎದೆಗಾರಿಕೆಯೂ ಅವರಲ್ಲಿಲ್ಲ. ಮೋದಿ ಅಧಿಕಾರಕ್ಕೆ ಬಂದ ಹೊಸತು ಅದು. ಒಂದಾದ ಮೇಲೊಂದು ಸಮಸ್ಯೆಗಳ ವೃಷ್ಟಿಯಾಗುತ್ತಿತ್ತು. ಎಲ್ಲಾ ಬುದ್ಧಿಜೀವಿಗಳು, ಮೋದಿವಿರೋಧಿಗಳು ಮೋದಿಯ ಬೆಳವಣಿಗೆಯನ್ನು ಸಹಿಸಲಾಗದೇ ಮಾಡುತ್ತಿದ್ದಂಥವು. ಆ ಹೊತ್ತಲ್ಲೇ ಹಿಂದೆಂದೂ ಇಲ್ಲದಂತೆ ಮಾಬ್ಲಿಂಚಿಂಗ್ನ ಪ್ರಕರಣ ಮುನ್ನೆಲೆಗೆ ಬಂತು. ಫ್ರಿಜ್ಜಿನಲ್ಲಿ ದನದಮಾಂಸ […]

ಕರೋನಾ, ತಬ್ಲೀಘಿ ಮತ್ತು ಹಿಂದೂಧರ್ಮ!

Friday, May 1st, 2020

ತಬ್ಲೀಘಿನ ಸದಸ್ಯನೊಬ್ಬ ವೈದ್ಯರಿಂದ ಪರೀಕ್ಷೆಗೊಳಗಾಗಲು ನಿರಾಕರಿಸಿಬಿಟ್ಟ. ಏಕೆಂದು ಕೇಳಿದ್ದಕ್ಕೆ ‘ನೂರಾರು ದೇಶಗಳಿಗೆ ತಿರುಗಾಡಿದ ಮೋದಿಯನ್ನು ಪರೀಕ್ಷಿಸಿ, ಉಳಿದದ್ದು ಆಮೇಲೆ’ ಎಂದ. ಟಿಕ್ಟಾಕ್ನಲ್ಲಿ ಓಡಾಡಿದ ವಿಡಿಯೊಗಳೇನೂ ಕಡಿಮೆಯವಲ್ಲ. ತಬ್ಬಿಕೊಳ್ಳುವುದು ಇಸ್ಲಾಂನ ಭ್ರಾತೃತ್ವದ ಶ್ರೇಷ್ಠ ಸಂದೇಶ. ಕರೋನಾದಿಂದ ಸತ್ತರೂ ಪರವಾಗಿಲ್ಲ ಇದನ್ನು ಬಿಡಲಾರೆ ಎಂದರು ಕೆಲವರು. ಏನೇ ಹೇಳಿ ತಬ್ಲೀಘಿ ಜಮಾತ್ನವರು ನಿಜಬಣ್ಣವನ್ನು ತೋರಿಸಿ ಉಪಕಾರವನ್ನೇ ಮಾಡಿದ್ದಾರೆ. ನಮ್ಮ ನಡುವೆಯೇ ಇದ್ದ ಕೆಲವು ಬುದ್ಧಿಜೀವಿಗಳು ಮಾತನಾಡಲಾಗದೇ ಬಾಯ್ಮುಚ್ಚಿಕೊಂಡು ಕೂರುವಂತೆ ಮಾಡಿರುವುದು ಜಮಾತ್ನ ಸಾಧನೆಯೇ. ಈ ಜಮಾತ್ನವರ ಆಳ-ವಿಸ್ತಾರಗಳು ನಮ್ಮೆಲ್ಲರ ಊಹೆಗೂ […]

ದೇವರ ಆದೇಶ, ‘ಮನೆಯಲ್ಲಿರಿ’!

Friday, May 1st, 2020

ಲೇಖಕ ಮೋಹಕ್ ಗುಪ್ತಾ ಕರೋನಾದ ಆರ್ನಾಟ್ ಮತ್ತು ಸಾವಿನ ದರವನ್ನು ಮುಂದಿಟ್ಟುಕೊಂಡು ಒಂದು ಸಣ್ಣ ಲೆಕ್ಕಾಚಾರ ಮಾಡಿದ್ದಾರೆ. ಯಾವ ಪ್ರತಿರೋಧವನ್ನೂ ತೋರದೇ ಈ ವೈರಸ್ಸನ್ನು ಮನಸ್ಸಿಗೆ ಬಂದಂತೆ ತಿರುಗಾಡಲು ಬಿಟ್ಟರೆ ಭಾರತದಲ್ಲಿ ಕೆಟ್ಟ ಪರಿಸ್ಥಿತಿ ಎಂದರೆ ದಿನಕ್ಕೆ 11 ಕೋಟಿ ಜನ ಇದಕ್ಕೆ ಬಲಿಯಾಗಬಹುದಂತೆ! ಹೆಚ್ಚು-ಕಡಿಮೆ 115 ಕೋಟಿ ಜನರನ್ನು ಕರೋನಾ ಆವರಿಸಿಕೊಳ್ಳುತ್ತದೆ ಮತ್ತು ನಾಲ್ಕೂವರೆ ಕೋಟಿ ಜನರ ಬಲಿ ತೆಗೆದುಕೊಳ್ಳುತ್ತದೆ. ವೈರಸ್ನಿಂದ ಉಂಟಾಗುವ ಸಾಂಕ್ರಾಮಿಕ ರೋಗಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೇಗ ಸಮಾಂತರವಾದ್ದಲ್ಲ, ಗುಣಾತ್ಮಕವಾದ್ದು. ಅಂದರೆ […]