ವಿಭಾಗಗಳು

ಸುದ್ದಿಪತ್ರ

ವಿಶ್ವಕಪ್ ಹೊತ್ತಲ್ಲಿ, ವಿಶ್ವ ಕ್ರೀಡಾ ಕೂಟದ ಬಗ್ಗೆ

Tuesday, March 15th, 2011

ವಿಶ್ವಕಪ್ ಜ್ವರ ಕಾವೇರುತ್ತಿದ್ದಂತೆ ಭಾರತದ ಕಪ್ ಗೆಲ್ಲುವ ಕನಸು ಕ್ಷೀಣಿಸುತ್ತಲೇ ಸಾಗುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಂತೂ ಎಚ್ಚರಿಕೆಯ ಕರೆಗಂಟೆ.ಅದೇನು ಗೆಲ್ಲಲೇಬೇಕಿದ್ದ ಮ್ಯಾಚ್ ಆಗಿರಲಿಲ್ಲ ನಿಜ. ಆದರೂ ಆತ್ಮವಿಶ್ವಾಸದ ದೃಷ್ಟಿಯಿಂದ ನೋಡಿದರೆ ಅದು ಗೆಲುವು ಅಗತ್ಯವಾಗಿದ್ದ ಪಂದ್ಯವೇ. ಕೊನೆಯ ಓವರ್ರು ನೆಹ್ರಾಗೆ ಕೊಟ್ಟಿದ್ದು ಸರಿಯಾ?ಎಂಬುದರಿಂದ ಹಿಡಿದು ಪೀಯೂಷ್ ಚಾವ್ಲಾ ಮೇಲೆ ಧೋನಿಗೆ ಯಾಕಿಷ್ಟು ಪ್ರೀತಿ ಎನ್ನುವವರೆಗೂ ಪ್ರಶ್ನೆಗಳು ಧೋನಿಯ ಸುತ್ತ ತಿರುಗಾಡುತ್ತಿವೆ. ನನಗೆ ಗೊತ್ತು. ದೇಶವಾಸಿಗಳ ಪಾಲಿಗೆ ಸದ್ಯದ ಸುದ್ದಿ ಇದೇ. ಆದರೆ ಒಂದು ವಾರದ ಹಿಂದೆ […]

ಅಂಜಲಿ ಮೋಡಿಗೆ ಕ್ಲೀನ್ ಬೋಲ್ಡ್!

Sunday, March 13th, 2011

ಸಚಿನ್ ಲೈಫ್ ಸ್ಕ್ಯಾನ್ ಮುಂದುವರೆದ ಭಾಗ. ಹಿಂದಿನ ಬರಹಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ. ಉಳಿದ ಕೊಂಡಿಗಳೂ ದೊರಕುತ್ತವೆ. ಆ ಆಟ ಮರೆಯಲಿಕ್ಕೆ ಸಾಧ್ಯವೇ ಇಲ್ಲ. ೧೯೯೮ರಲ್ಲಿ ಭಾರತಕ್ಕೆ ಆಸ್ಟ್ರೇಲಿಯನ್ನರು ಬಂದಾಗ ಆಟ ನೋಡಲಿಕ್ಕೆ ಜಗತ್ತು ಕಾತುರದಿಂದ ಕಾದಿತ್ತು. ಒಂದೆದೆ ಸಚಿನ್ ನ ಭಯಾನಕ ಹೊಡೆತಗಳು ಮತ್ತೊಂದೆಡೆ ಅದನ್ನು ತಡೆಯಬಲ್ಲ ತಾಕತ್ತುಳ್ಳ ಜಗತ್ತಿನ ಏಕೈಕ ಬೌಲರ್ ಶೇನ್‌ವಾರ್ನ್! ಅದಾಗಲೇ ಆಫ್ರಿಕನ್ನರ ಮೇಲೆ ಮಾಂತ್ರಿಕ ಚೆಂಡುಗಳನ್ನೆಸೆದು ಶೇನ್‌ವಾರ್ನ್ ಜಗತ್ತಿನ ಕಣ್ಣುಕುಕ್ಕಿದ್ದ. ಹೀಗಾಗಿ ಈ ಸೀರೀಸನ್ನು ತೆಂಡೂಲ್ಕರ್ ಮತ್ತು ವಾರ್ನ್‌ರ ನಡುವಿನ ಕಾಳಗ […]

ಜನಪ್ರಿಯತೆಯ ಮೊದಲ ರುಚಿ

Thursday, March 10th, 2011

ಸಚಿನ್ ಲೈಫ್ ಸ್ಕ್ಯಾನ್ ನ ಮೊದಲನೇ ಮತ್ತು ಎರಡನೇ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ….   ಸಚಿನ್ ಇಂದು ಈ ಮಟ್ಟಕ್ಕೆ ಬೆಳೆದಿದ್ದಾನೆಂದರೆ, ಅದು ಒಂದೆರಡು ದಿನಗಳ ಸಾಧನೆಯಲ್ಲ, ಪ್ರತಿಕ್ಷಣದ ಧ್ಯಾನದ ಫಲ. ಆತನ ಶ್ರದ್ಧೆ, ಏಕಾಗ್ರತೆ, ಪ್ರತಿಯೊಂದು ಹಂತದಲ್ಲಿಯೂ ಕಲಿಯುವ ಗುಣ ಇವೆಲ್ಲವೂ ನಿಜಕ್ಕೂ ಮಹತ್ವದ್ದು. ಎಲ್ಲಾ ಕ್ಷೇತ್ರಗಳಲ್ಲಿನ ಜನರು ತಿಳಿಯಲೇಬೇಕಾದಂಥದ್ದು. ಹೈದರಾಬಾದಿನೊಂದಿಗೆ ರಣಜಿ ಪಂದ್ಯ ಆಡುತ್ತಿದ್ದಾಗ ಅರ್ಷದ್ ಅಯೂಬ್ ಚೆಂಡೆಸೆಯುತ್ತಿದ್ದರು. ಸಚಿನ್ ತನ್ನ ಎಂದಿನ ಮನಮೋಹಕ ಹೊಡೆತಗಳಿಂದ ಜನರ ಮನಸೂರೆಗೊಂಡಾಗಿತ್ತು. ವೆಂಕಟಪತಿ ರಾಜುವನ್ನು ಸಚಿನ್ […]

ಹದಿನೈದರ ಪೋರ, ಶತಕಗಳ ಸರದಾರ!

Sunday, March 6th, 2011

ಸಚಿನ್ ಲೈಫ್‌ಸ್ಕ್ಯಾನ್ ಭಾಗ 3. 2ನೆಯದು ಇಲ್ಲಿದೆ. ಇದು 6 ವರ್ಷಗಳ ಹಿಂದೆ ಕರ್ಮವೀರದಲ್ಲಿ ಪ್ರಕಟವಾಗಿದ್ದ ಚಕ್ರವರ್ತಿಯ ಸರಣಿ ಬರಹ. ಇನ್ನೂ 4 ಕಂತುಗಳಲ್ಲಿ ಮುಂದುವರೆಯಲಿದೆ. ಬದುಕಿನ ಕೆಲವೊಂದು ತಿರುವುಗಳು ಅದೆಷ್ಟು ನಾಟಕೀಯ ಎನ್ನುವುದು ನಂಬಲಸಾಧ್ಯ. ಕ್ರಿಕೆಟ್ ಆಟವನ್ನೇ ಬದುಕಾಗಿಸಿಕೊಂಡ ಸಚಿನ್ ಎತ್ತರಕ್ಕೆ ಬೆಳೆಯುವ ಲಕ್ಷಣಗಳನ್ನು ಬಾಲ್ಯದಲ್ಲಿಯೇ ತೋರಿಸಿದ್ದ. ಶಾಲಾ ದಿನಗಳಲ್ಲಿ ಸೆಂಚುರಿಗಳನ್ನು ನೀರು ಕುಡಿದಷ್ಟು ಸಲೀಸಾಗಿ ಬಾರಿಸುತ್ತಿದ್ದ. ಹದಿನೈದು ವರ್ಷದೊಳಗಿನವರ, ಹತ್ತೊಂಭತ್ತು ವರ್ಷದೊಳಗಿನವರ ತಂಡದಲ್ಲಿ ಮಿಂಚಿದ. ಆಡಿದ ಆಟಗಳಲ್ಲಿ ಅದೆಷ್ಟು ಚೆಂಡುಗಳನ್ನು ಕಳೆದೇಹೋಗುವಂತೆ ಬಾರಿಸಿದ್ದನೋ ದೇವರೇ ಬಲ್ಲ! […]

ಕ್ರಿಕೆಟ್ ದೇವತೆಯ ಮೊದಲ ಹೆಜ್ಜೆಗಳು

Wednesday, March 2nd, 2011

ಸಚಿನ್ ಸುಮ್ಮನೆ ಆದವನಲ್ಲ. ಬಾಲ್ಯ ಕಾಲದಿಂದಲೂ ಬೆಳೆಸಿಕೊಂಡಿದ್ದ ಶ್ರದ್ಧೆ, ಆತ್ಮವಿಶ್ವಾಸ ಮತ್ತು ಸಾಧನೆಯ ಛಲಗಳು ಅವನನ್ನು ರೂಪಿಸಿದವು. ಜೊತೆಗೆ ಅಚ್ರೇಕರ್‌ರಂತಹ ಮಾರ್ಗದರ್ಶಕ ದೊರಕಿದ್ದು ಸಚಿನ್ ಪಾಲಿಗೆ ವರದಾನವಾಯ್ತು. ಇದು ಸಚಿನ್ ಲೈಫ್ ಸ್ಕ್ಯಾನ್ ನ ಎರಡನೆ ಭಾಗ. … ಚಿಕ್ಕಂದಿನಿಂದ್ಲೂ ಅಷ್ಟೇ. ಸಚಿನ್‌ಗೆ ಟೆನಿಸ್ ಮೇಲೆ ಕ್ರಿಕೆಟ್‌‌ನಷ್ಟೇ ಪ್ರಾಣ. ಟೆನಿಸ್ ಮ್ಯಾಚ್‌ಗಳು ಶುರುವಾದರೆ ಸಚಿನ್ ಟೀವಿ ಮುಂದೆ ಬಿಡುವಿಲ್ಲದಂತೆ ಕುಳಿತಿರುತ್ತಿದ್ದ. 1981ರ ಆಸುಪಾಸಿನಲ್ಲಿ ಸಚಿನ್ ಆರಾಧ್ಯ ತಾರೆ ಜಾನ್ ಮೆಕೆನ್ರೋಗೂ ಜಾನ್ ಬೋರ್ಗ್‌ಗೂ ಟೆನಿಸ್ ಯುದ್ಧ ಶುರುವಾಗಿಬಿಟ್ಟಿತು. […]

ಮಾರ್ಚ್ ತಿಂಗಳ ಕಾರ್ಯಕ್ರಮಗಳು

Monday, February 28th, 2011

4:  ಜನಪದ ಜಾತ್ರೆ;  ಹೊಸಕೋಟೆ 5 : ರಾಮಕೃಷ್ಣಾಶ್ರಮ ಮಂಗಳೂರು 6: ‘ವಿಶ್ವಮಾನವ’ ಏಕವ್ಯಕ್ತಿ ಪ್ರದರ್ಶನ, ರಾಮಕೃಷ್ಣಾಶ್ರಮ ಮಂಗಳೂರು 7: ಗೋವಾ 8: ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಹೊನ್ನಾವರ 13: ಬೈಠಕ್- ಬಿಜಾಪುರ; ಜಾಗೋಭಾರತ್- ಬಾಗಲಕೋಟೆ 14: ಕೃಷಿ ವಿಶ್ವವಿದ್ಯಾಲಯ, ರಾಯಚೂರು 19: ಸ್ವಾಮಿ ರಾಮತೀರ್ಥ ಸೇವಾ ಫೌಂಡೇಶನ್, ಬೆಂಗಳೂರು 20: ವೃದ್ಧಾಶ್ರಮ, ಬೆಂಗಳೂರು 21ರಿಂದ 23: ಮಲ್ಲಾಪುರ 24ರಿಂದ 31: ಸೂಲಿಬೆಲೆ (ಪುಸ್ತಕದ ಕೆಲಸ!)  

ಅಸ್ಪೃಶ್ಯತೆ- ವರದಿಯಲ್ಲೂ ತಾರತಮ್ಯ!

Sunday, February 27th, 2011

ಇದು ಜನವರಿ ಕೊನೆಯ ವಾರದಲ್ಲಿ ನಡೆದ ಘಟನೆ.ತಮಿಳುನಾಡಿನ ಕಾಂಚೀಪುರಮ್ ಜಿಲ್ಲೆಯ ಥಚೂರ್ ಗ್ರಾಮದಲ್ಲಿ ದಲಿತ ಕ್ರಿಶ್ಚಿಯನ್ನರ ಶವ ಸಂಸ್ಕಾರ ಕುರಿತಂತೆ ದೊಡ್ಡ ಕೋಲಾಹಲವೆದ್ದಿತ್ತು. ಅಲ್ಲಿನ ಸರ್ಕಾರ ಅದನ್ನೊಂದು ಸುದ್ದಿಯಾಗಲು ಬಿಡದೆ, ಘಟನೆಯಿಂದ ನೊಂದ ದಲಿತ ಕ್ರಿಶ್ಚಿಯನ್ನರಿಗೆ ಸಾಂತ್ವನವನ್ನೂ ಹೇಳದೆ ಪ್ರಕರಣವನ್ನು ಒರೆಸಿ ಹಾಕಿತು. ಈ ಕೆಲಸ ಎಷ್ಟು ಚಾಕಚಕ್ಯತೆಯಿಂದ ನಡೆಯಿತೆಂದರೆ, ದೇಶದ ನಾನಾ ಭಾಗಗಳಲ್ಲಿ ದಲಿತರ ಮೇಲಿನ ದೌರ್ಜನ್ಯಗಳ ಅಸಹ್ಯಕರ ಸುದ್ದಿಯನ್ನು ಓದುತ್ತಲೇ ಇರುವ ನಮಗೆ ಈ ದಲಿತ ಕ್ರಿಶ್ಚಿಯನ್ನರ ಮೇಲಿನ ದೌರ್ಜನ್ಯದ ಸುದ್ದಿ ಓದಲು ದೊರೆಯಲೇ […]

ಫೆಬ್ರವರಿ ಕಾರ್ಯಕ್ರಮಗಳು (ಈವರೆಗಿನಂತೆ)

Tuesday, January 25th, 2011

ಫೆಬ್ರವರಿ 2                 ಹುಬ್ಬಳ್ಳಿ ಫೆಬ್ರವರಿ 3                 ಕೊಪ್ಪಳ ಫೆಬ್ರವರಿ 4- 5            ಬೆಳಗಾಮ್ ರಾಮಕೃಷ್ಣ ಆಶ್ರಮ ಫೆಬ್ರವರಿ 6                 ಕಾಸರವಳ್ಳಿ ಫೆಬ್ರವರಿ 7                 ಬೆಳಗಾಮ್ […]