ವಿಭಾಗಗಳು

ಸುದ್ದಿಪತ್ರ


 

ನರೇಂದ್ರ ಭಾರತಕ್ಕಿದೋ ಭದ್ರ ಹೆಜ್ಜೆ!

Monday, January 30th, 2017

20 ನೇ ಶತಮಾನದ ಆಲೋಚನೆಗಳ ಮೇಲೆ ಸ್ವಾಮೀಜಿಯವರ ಪ್ರಭಾವ ಅಗಾಧವಾದುದು. ಪಶ್ಚಿಮದ ಖ್ಯಾತ ವಿಜ್ಞಾನಿ ನಿಕೋಲಾ ಟೆಸ್ಲಾ ವಿದ್ಯುತ್ ವಿಜ್ಞಾನದಲ್ಲಿ ಮಹತ್ವದ ಸಂಶೋಧನೆಯ ಹುಚ್ಚು ಹತ್ತಿಸಿಕೊಂಡಿದ್ದನಲ್ಲ ಅವನಿಗೆ ಸಾಂಖ್ಯ ದರ್ಶನದ ಕಲ್ಪನೆ ಕೊಟ್ಟದ್ದೇ ಸ್ವಾಮಿ ವಿವೇಕಾನಂದರು. ಆನಂತರವೇ ಆತ ಬೇಕಾದ್ದೆಲ್ಲವೂ ಆಕಾಶದಲ್ಲಿದೆ ಎಂಬ ಚಿಂತನೆಯ ಜಾಡು ಹಿಡಿದು ಹೆಜ್ಜೆ ಹಾಕಿದ್ದು. ಸ್ವಾಮೀಜಿಯ ರಾಜಯೋಗದಲ್ಲಿ ಅಡಗಿದ್ದ ವಿಜ್ಞಾನದ ಅಧ್ಯಯನದಿಂದಲೇ ಪಶ್ಚಿಮದ ಚಿಂತಕರು ಹೊಸ ಲೋಕದೆಡೆಗೆ ಹೊರಳಿದ್ದು. ಹಾರ್ವಡರ್್ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರಜ್ಞ ವಿಲಿಯಂ ಜೋನ್ಸ್ ತನ್ನ ಕೃತಿಗಳ ಹಿಂದಿನ ಸ್ಫೂತರ್ಿ […]

ದೀದಿಯ ಎಲ್ಲ ಅಸ್ತ್ರಗಳೂ ಖಾಲಿಯಾಗಿವೆ!

Sunday, January 8th, 2017

ಬಂಗಾಳದೊಳಗೆ ಉರಿಯುತ್ತಿರುವ ಬೆಂಕಿಗೆ ದೀದಿ ತುಪ್ಪ ಹಾಕುತ್ತಲೇ ಇದ್ದರು. ಮೊನ್ನೆ ಡಿಸೆಂಬರ್ 12 ಕ್ಕೆ ಧುಲಾಘರ್ನಲ್ಲಿ ಮಿಲಾಡ್ ಲಲ್ ನಬಿಯ ಮೆರವಣಿಗೆಯ ಹೊತ್ತಲ್ಲಿ ಮುಸಲ್ಮಾನರು ಬೀದಿಗಿಳಿದು ನೂರಾರು ಹಿಂದೂ ಮನೆಗಳನ್ನು ಲೂಟಿ ಗೈದರು. ಹೆಣ್ಣು ಮಕ್ಕಳ ಮಾನಭಂಗವಾಯಿತು. ಅಪಹರಣವಾಯ್ತು. ಹತ್ತಾರು ಜನ ಕೊಲ್ಲಲ್ಪಟ್ಟರು. ವರದಿ ಮಾಡಲೆಂದು ಹೋದ ಪತ್ರಕರ್ತರನ್ನು ಒಳಗೇ ಬಿಡಲಿಲ್ಲ. ಜೀ ನ್ಯೂಸ್ನ ಸುಧೀರ್ ಚೌಧರಿಯ ಮೇಲೆ ಕೇಸು ಜಡಿಯಲಾಯ್ತು. ಹಿಂದೂಗಳನ್ನು ಬೀದಿ ನಾಯಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಯಿತು. ಇಷ್ಟಕ್ಕೂ ಒಂದೇ ಕಾರಣ ದೀದಿಯದ್ದು. ಮುಸಲ್ಮಾನರು ತನ್ನ […]

ಕ್ಯಾಶ್ಲೆಸ್ನತ್ತ ಭಾರತದ ‘ಭೀಮ’ ನಡಿಗೆ!

Monday, January 2nd, 2017

128 ಕೋಟಿ ಜನರಿರುವ, ವಿಭಿನ್ನ ಸಂಸ್ಕೃತಿಗಳ, ಭಾಷೆಗಳ, ಆಚಾರ-ವಿಚಾರಗಳ ನೆಲೆವೀಡಾಗಿರುವ ಭಾರತದಂತಹ ನಾಡಿನಲ್ಲಿ ಇದು ಕಷ್ಟ, ಆದರೆ ಅಸಾಧ್ಯವಲ್ಲ. ಹಿಮಾಲಯದ ತಪ್ಪಲು, ಮರುಭೂಮಿಗೆ ಹೊಂದಿಕೊಂಡ ಹಳ್ಳಿಗಳು, ಮುಟ್ಟಲೂ ಕಷ್ಟವೆನಿಸುವ ಈಶಾನ್ಯದ ಗ್ರಾಮಗಳು, ದಕ್ಷಿಣದ ಸಮುದ್ರಕ್ಕೆ ಹೊಂದಿಕೊಂಡ ಊರುಗಳು. ಓಹ್ ಇವೆಲ್ಲವನ್ನೂ ಕ್ಯಾಶ್ಲೆಸ್ ಮಾಡಿಸುವುದು ಸಾಹಸವೇ ಸರಿ. ಒಂದೆಡೆ ಹೈನುಗಾರಿಕೆ ಮತ್ತೊಂದೆಡೆ ಮೀನುಗಾರರು, ಅತ್ತ ರೈತರು ಇತ್ತ ಸಣ್ಣ ವ್ಯಾಪಾರಿಗಳು ಇವರೆಲ್ಲರನ್ನೂ ಒಪ್ಪಿಸುವುದೂ ಸುಲಭವಲ್ಲ. ಹುಟ್ಟಿದಾಗಿನಿಂದಲೂ ದುಡ್ಡು ನೋಡಿಯೇ ಬೆಳೆದ ಇವರೆಲ್ಲರಿಗೂ ಪ್ಲಾಸ್ಟಿಕ್ ಕಾರ್ಡ್ಡ ಬಳಸಿ ವ್ಯವಹಾರ ಮಾಡಿರೆಂದು […]

ಮೋದಿಯವರದ್ದು ಆರ್ಥಿಕ ಪೋಖ್ರಾನ್!!

Sunday, December 25th, 2016

ಎರಡೂವರೆ ವರ್ಷಗಳ ಹಿಂದೆ ಬಡ, ಹಳ್ಳಿಗರ ಅಕೌಂಟು ಮಾಡಿಸುವ ಈ ಯೋಜನೆ ಅವರು ರೂಪಿಸಿರದಿದ್ದರೆ ಈ ಇಪ್ಪತ್ತೈದು ಕೋಟಿ ಅಕೌಂಟು ಹೊಂದಿರುವವರು ನೋಟು ಅಮಾನ್ಯೀಕರಣದ ನಂತರ ತಮ್ಮ ದುಡ್ಡನ್ನು ಎಲ್ಲಿಗೊಯ್ಯಬೇಕಿತ್ತು? ಅವರು ಮೊದಲು ಅಕೌಂಟು ತೆಗೆಯಲು ಸಾಲು ನಿಲ್ಲಬೇಕಿತ್ತು, ಆಮೇಲೆ ಅದಕ್ಕೆ ದುಡ್ಡು ಹಾಕಲು ಮತ್ತೊಂದು ಸಾಲು. ಇನ್ನು ಖಾತೆ ತೆರೆವಾಗ ಆಧಾರ್ ಕಾಡರ್್ ಬೇಕೆಂದು ಕೇಳಿದರಂತೂ ಅತ್ತ ಧಾವಿಸಿ ಅಲ್ಲೊಂದು ಸಾಲು ನಿಂತು ಕಾಡರ್ು ಬರುವವರೆಗೆ ಕಾಯಬೇಕಿತ್ತು. ಒಟ್ಟಾರೆ ಎಲ್ಲವೂ ಅಯೋಮಯ. ವೆನಿಜುವೆಲಾದಲ್ಲಾದ ಗತಿಯೇ ಭಾರತದಲ್ಲೂ […]

ಪಶ್ಚಿಮಕ್ಕೆ ಬೆಳಕು ಕೊಟ್ಟ ಪೂರ್ವದ ಸೂರ್ಯ!

Sunday, December 25th, 2016

ಅಸೀಮ ಸ್ಥೈರ್ಯದಿಂದಲೇ ಭಾರತದೆಡೆಗೆ ನಡೆದ ಬಿರು ಮನಸಿನ ಸನ್ಯಾಸಿ ಪ್ರಚಂಡ ಸಿಡಿ ಗುಂಡಾಗಿಯೇ ಭಾರತದ ಮೇಲೆರಗಿದ. ದಾಸ್ಯದ ಅಮಲೇರಿದ ಮದ್ಯ ಕುಡಿದು ಅಂಗಾತ ಬಿದ್ದುಕೊಂಡಿದ್ದ ತರುಣ ಜನಾಂಗವನ್ನು ಝಾಡಿಸಿ ಒದ್ದ. ಅವನ ಮಾತುಗಳಲ್ಲಿನ ಕೆಚ್ಚು ತಣ್ಣಗಾಗಿದ್ದ ಹೃದಯಗಳನ್ನು ಬೆಚ್ಚಗಾಗಿಸಿತ್ತು. ಭಾರತವೇ ಮತ್ತೆ ಯೌವ್ವನದತ್ತ ಮರಳಲಾರಂಭಿಸಿತು. ಹೊಸ ಜಾಗೃತಿಯ ಅಲೆ ಭಾರತದ ಬಂಡೆಗಳನ್ನು ಬಡಿಯಲಾರಂಭಿಸಿತು. ಅಗೋ! ಈ ಅಲೆಯ ರಭಸಕ್ಕೆ ಒಂದೊಂದೇ ಬಂಡೆ ಕದಲಿತು. ಎದೆ ಸೆಟಿಸಿ ನಿಂತಿತು. ದಾಸ್ಯದ ಧೂಳನ್ನು ಕೆಡವಿಕೊಂಡು ಯುದ್ಧಕ್ಕೆ ಸಜ್ಜಾಯ್ತು. ‘ಮೊರೆಯುವ ಕಡಲಿಗೆ […]

ಮುನಿಸು ತರವೇ? ಐನೂರು ಸಾವಿರದ ಮೇಲೆ!

Monday, December 19th, 2016

ಐನೂರು ಮತ್ತು ಸಾವಿರ ರೂಗಳ ನೋಟನ್ನು ಏಕಾಕಿ ನಿಷೇಧ ಮಾಡಿ ಅವರು ಹೊರಡಿಸಿದ ಘೋಷಣೆಗೆ ಕಳ್ಳ ಸಂಪತ್ತಿನ ಒಡೆಯರೆಲ್ಲ ಒಮ್ಮೆಗೇ ಎದೆ ಒಡೆದುಕೊಂಡರು. ಬಡಜನರ ಮಧ್ಯಮವರ್ಗದವರ ಮೇಲೆ ಕಾಳಜಿ ಇಲ್ಲದಿದ್ದರೆ ನಾಲ್ಕಾರು ದಿನದ ಗಡುವಷ್ಟೇ ಕೊಟ್ಟು ಎಲ್ಲರೂ ಹಣ ತಂದು ಕಟ್ಟಿರೆಂದು ಆದೇಶಿಸಬೇಕಿತ್ತು. ಆದರೆ ಪ್ರಧಾನಮಂತ್ರಿಗಳು ಈ ದೇಶದ ವಾಸ್ತವ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಐವತ್ತು ದಿನಗಳ ಸಮಯ ಕೊಟ್ಟರು. ದಿನಕ್ಕಿಷ್ಟು ಬದಲಾಯಿಸಿಕೊಳ್ಳಬೇಕೆಂಬ ಮಿತಿ ಹಾಕಿದರು. ಸಾಮಾನ್ಯರಲ್ಲಿ ಒಂದಷ್ಟು ಗೊಂದಲವಾಯಿತು ನಿಜ, ಕಪ್ಪು ಕುಳಗಳಲ್ಲಿ ಅದು ಮತ್ತೂ ಹೆಚ್ಚಾಗಿತ್ತು. […]

ಮೂಗು ಹಿಡಿದರೆ ಬಾಯಿ ಬಿಡಲೇಬೇಕು!

Monday, December 19th, 2016

ಕೂಡಿಟ್ಟ ಕಪ್ಪುಹಣದ ಬಲುದೊಡ್ಡ ಸಮಸ್ಯೆ ಇದು. ಈ ಹಣವನ್ನು ಯಾರಿಗೂ ತೋರುವಂತಿಲ್ಲ, ಹಾಗೆಂದು ಬಳಸದೇ ಇರುವಂತೆಯೂ ಇಲ್ಲ. ಅದಕ್ಕೇ ದೊಡ್ಡ ಮನೆ ಕಟ್ಟಲು, ಐಷಾರಾಮಿ ಕಾರು ಕೊಳ್ಳಲು, ಅತ್ಯಾಕರ್ಷಕ ಸೋಫಾ-ಟೀವಿಗಳ ಖರೀದಿಗೆಲ್ಲ ಇದನ್ನು ಬಳಸಿ ಆನಂದಿಸಿಬಿಡುತ್ತಾರೆ. ಯಾವುದಾದರೂ ಉದ್ದಿಮೆಯಲ್ಲಿ ತೊಡಗಿಸಿದರೆ ಸಕರ್ಾರಕ್ಕೆ ಲೆಕ್ಕ ಕೊಡಬೇಕಾದೀತೆಂದು ಈ ಹಣವನ್ನು ಆಥರ್ಿಕ ಚಟುವಟಿಕೆಯಲ್ಲಿ ಹೂಡದೇ ಅದಕ್ಕೆ ಮತ್ತೆ ಬ್ಯಾಂಕುಗಳ ಬಳಿ ಸಾಲ ಕೇಳುತ್ತಾರೆ ಮನೆಯೊಳಗೆ ಕೊಳೆತು ನಾರುವಷ್ಟು ಹಣವಿದ್ದರೂ ಕೊನೆಗೊಂದು ದಿನ ಬ್ಯಾಂಕಿನೆದುರು ಸಾಲ ಕಟ್ಟಲಾಗದೆಂದು ಸಾಲ ಮನ್ನಾಕ್ಕೆ ಬೇಡಿಕೆ […]

ವಿತ್ತೀಯ ಕೊರತೆಯೆಂಬ ಗೂಳಿಯ ಸವಾರಿ

Monday, December 19th, 2016

ವಿದೇಶದಿಂದ ತಂದ ಸಾಲಕ್ಕೆ ಬಡ್ಡಿ ತೀರಿಸುವಲ್ಲಿ ಪ್ರತಿ ವರ್ಷದ ಆದಾಯದ ಬಹುಪಾಲನ್ನು ಎತ್ತಿಡಬೇಕು. ಉಳಿದ ಹಣದಲ್ಲಿ ಆಡಳಿತಾತ್ಮಕ ಖರ್ಚನ್ನು ಸಂಭಾಳಿಸಬೇಕು. ಆನಂತರ ಸೈನ್ಯದ ಆಧುನೀಕರಣಕ್ಕೆ ಪ್ರತೀ ವರ್ಷ ಆಥರ್ಿಕ ವ್ಯಯ ಇದ್ದದ್ದೇ. ಇವೆಲ್ಲವೂ ಕಳೆದು ಹಣ ಉಳಿದರೆ ಕೃಷಿಯ ಅಭಿವೃದ್ಧಿಗೆ, ರಸ್ತೆ ನಿಮರ್ಾಣಕ್ಕೆ, ಶಿಕ್ಷಣಕ್ಕೆ ಮುಂತಾದ ಜನೋಪಯೋಗಿ ಚಟುವಟಿಕೆಗಳಿಗೆ ವ್ಯಯಿಸಬೇಕು. ಹೀಗಾಗಿಯೇ ಪ್ರತೀ ವರ್ಷ ಅಭಿವೃದ್ಧಿಯ ನಿದರ್ಿಷ್ಟ ಗುರಿ ಮುಟ್ಟಲು ಈ ರಾಷ್ಟ್ರಕ್ಕೆ ಸಾಧ್ಯವೇ ಆಗಿಲ್ಲ. ಪ್ರತಿಯೊಂದು ಸಕರ್ಾರವೂ ಪ್ರತಿ ವರ್ಷ ಘೋಷಣೆ ಮತ್ತು ಅನುಷ್ಠಾನದ ವಿಚಾರದಲ್ಲಿ […]

ಅರ್ಥಶಾಸ್ತ್ರದ ಪುಟ ತಿರುವಿ ಹಾಕುವ ಹೊತ್ತು!

Tuesday, November 29th, 2016

ನೋಟುಗಳ ಡೀಮಾನಿಟೈಸೇಷನ್ ಸರಿ. ಆದರೆ ಭಾರತದ ಸದೃಢ ಆಥರ್ಿಕತೆಗೆ ಇಡಬೇಕಾದ ಮೊದಲ ಹೆಜ್ಜೆಯೇ ತೆರಿಗೆ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ. ಸದ್ಯದ ಮಟ್ಟಿಗೆ ಭಾರತದಲ್ಲಿ ಜನರ ಜೀವ ಹಿಂಡುತ್ತಿರುವ ವ್ಯವಸ್ಥೆ ಇದು. ನೇರ-ಪರೋಕ್ಷ ತೆರಿಗೆಗಳ ನೆಪದಲ್ಲಿ ಜನರ ಹಿಂಡಿ ಸಕರ್ಾರದ ಬೊಕ್ಕಸ ತುಂಬುವ ಕೆಲಸ ಮಾಡಲಾಗುತ್ತಿದೆ. 50ಕ್ಕೂ ಹೆಚ್ಚು ಬಗೆಯ ತೆರಿಗೆಗಳು ನಮ್ಮನ್ನು ಹೈರಾಣು ಮಾಡಿಬಿಟ್ಟಿವೆ. ಬೊಕ್ಕಸ ತುಂಬಿಸಲು ಜನಸಾಮಾನ್ಯರನ್ನು ಹೀಗೆ ಹಿಂಡುವ ದೊರೆಗಳು ತಾವು ಮಾತ್ರ ಐಷಾರಾಮಿ ಬದುಕನ್ನು ಸವೆಸುತ್ತ ದೊಡ್ಡ ಮೊತ್ತದ ಲೂಟಿ ಮಾಡುತ್ತ ವಿಶ್ವಾಸವನ್ನೇ […]

ವರ್ಣ ಜಾತಿಯಾಯ್ತು, ಜಾತಿ ದ್ವೀಪವಾಯ್ತು..

Monday, November 14th, 2016

ಸಕರ್ಾರದ ಸವಲತ್ತುಗಳನ್ನು ಅನುಭವಿಸುವ, ಇತರರನ್ನು ಆಳುವ ನಿಯಮಗಳನ್ನು ರೂಪಿಸುವ ಹೊಣೆ ಹೊತ್ತ ಜನಾಂಗ ಸಹಜವಾಗಿಯೇ ಕಾಲಕ್ರಮದಲ್ಲಿ ತನ್ನಿಚ್ಛೆಗೆ ತಕ್ಕಂತಹ ನಿಯಮಗಳನ್ನು ರೂಪಿಸುತ್ತದೆ. ಅದರಲ್ಲೂ ಯೋಗ್ಯತೆ-ಅಧ್ಯಯನಗಳಿಲ್ಲದ ಮಗ, ಅಪ್ಪನ ಜಾಗಕ್ಕೆ ಬಂದು ರಾಜನಿಗೆ ಸಲಹೆಗಾರನಾಗಿ ತನ್ನಿಚ್ಛೆಗೆ ತಕ್ಕಂತೆ ಸಕರ್ಾರವನ್ನೇ ಕುಣಿಸುವುದು ನಡೆಯಲಾರಂಭಿಸಿದರೆ ನಾಡಿನ ಹಿತ, ರಕ್ಷಣೆ ಎಲ್ಲವೂ ಮಣ್ಣುಗೂಡಿಬಿಡುತ್ತದೆ. ಆಗಲೇ ಜಾತಿಗಳ ನಡುವೆ, ಭಾಷೆಗಳ ನಡುವೆ ಸಂಘರ್ಷ ಶುರುವಾಗೋದು. ಜತನದಿಂದ ಕಟ್ಟಿದ ಸೌಧ ಕುಸಿದು ಬೀಳುವುದು. ವರ್ಣಪದ್ಧತಿ ಹೀಗೆಯೇ ಆಯಿತೆನ್ನುತ್ತಾರೆ ಅಂಬೇಡ್ಕರ್. ಬಹಳ ಹಿಂದೆ ಸ್ವದೇಶೀ ಆಂದೋಲನದ ನೇಕಾರ […]