ವಿಭಾಗಗಳು

ಸುದ್ದಿಪತ್ರ


 

ದೇಶವನ್ನು ಜರಿಯೋದು ಎಷ್ಟು ಸಲೀಸು!!

Tuesday, December 10th, 2019

ಸ್ವತಃ ಶಶಿತರೂರ್ರಂತಹ ಪತ್ನಿಪೀಡಕನನ್ನು, ಕೊಲೆಯ ಆರೋಪವನ್ನು ಹೊತ್ತಿರುವಂಥವನನ್ನು ಜೊತೆಗಿಟ್ಟುಕೊಂಡು ಸ್ತ್ರೀಯರ ಕುರಿತಂತೆ ಅವರು ಮಾತನಾಡುವುದನ್ನು ಒಪ್ಪುವುದು ಸಾಧ್ಯವೇ? ಎಲ್ಲ ಬಿಡಿ. ಈಗ ನಡೆದಿರುವ ಈ ಪ್ರಕರಣಗಳನ್ನು ಹಿಡಿದುಕೊಂಡು ಭಾರತದ ಸುಮಾರು 65ಕೋಟಿ ಗಂಡಸರನ್ನು ಅತ್ಯಾಚಾರಿಗಳು ಎಂಬರ್ಥದ ಮಾತುಗಳನ್ನು ಆತ ಆಡಿರುವುದು ಸಮರ್ಥನೀಯವೇ? ರಾಹುಲ್ ಭಾರತವನ್ನು ಅತ್ಯಾಚಾರದ ರಾಜಧಾನಿ ಎಂದು ಕರೆದು ಬೀಗುತ್ತಿದ್ದಾನೆ. ಇದು ಹೊಸತೇನೂ ಅಲ್ಲ. ಈ ಹಿಂದೆಯೂ ಜಾಗತಿಕ ಮಟ್ಟದಲ್ಲಿ ಭಾರತದ ಗೌರವಕ್ಕೆ ಮಸಿ ಬಳಿಯುವ ಪ್ರಯತ್ನವನ್ನು ಕಾಂಗ್ರೆಸ್ಸು ಮಾಡಿಯೇ ಇದೆ. ಸ್ವತಃ ಕಾಂಗ್ರೆಸ್ ಆಳುವಾಗ […]

ಚಿದಂಬರಂಗೆ ಸಿಕ್ಕಿದ್ದು ಜಾಮೀನು, ಕ್ಲೀನ್ಚಿಟ್ ಅಲ್ಲ!!

Monday, December 9th, 2019

ಚಿದಂಬರಂ ಮಾಡಿರುವ ಎಲ್ಲ ತಪ್ಪುಗಳನ್ನು ಕೊನೆಗೊಮ್ಮೆ ಕಾನೂನು ಕ್ಷಮಿಸಿಬಿಡಬಹುದೇನೋ. ಈ ದೇಶದ ಹಿಂದೂ-ಮುಸಲ್ಮಾನರು ಕ್ಷಮಿಸಲಾರರು. ಅಧಿಕಾರಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಚಿದು ಮತ್ತವರ ಗೆಳೆಯರು ಸೇರಿ ಹಿಂದೂ ಭಯೋತ್ಪಾದನೆ ಎಂಬ ಹೊಸಪದವನ್ನೇ ಹುಟ್ಟುಹಾಕಿಬಿಟ್ಟಿದ್ದರು. ಪಿ.ಚಿದಂಬರಂ ಕೊನೆಗೂ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಕಾಂಗ್ರೆಸ್ಸಿನ ಪಡಸಾಲೆಗಳಲ್ಲಿ ಸಂಭ್ರಮವೋ ಸಂಭ್ರಮ. ಕಪಿಲ್ ಸಿಬಲ್ ಸತ್ಯಮೇವ ಜಯತೇ ಎಂದು ಟ್ವೀಟ್ ಮಾಡಿದ್ದು ಎಂಥವರಲ್ಲೂ ನಗೆಯುಕ್ಕಿಸಲು ಸಾಕಾಗಿತ್ತು. ನ್ಯಾಯಾಲಯ ಚಿದಂಬರಂಗೆ ಕೊಟ್ಟಿರುವುದು ಜಾಮೀನಷ್ಟೇ, ಕ್ಲೀನ್ ಚಿಟ್ ಅಲ್ಲ! ಆದರೆ ಈ ಹಿಂದೆಯೂ ನಂಬಿಸಿಕೊಂಡು ಬಂದಿರುವಂತೆ […]

ಮಹಾರಾಷ್ಟ್ರದ ಗತಿ ನಮಗೂ ಬರದಿರಲಿ!

Monday, December 9th, 2019

ಅಧಿಕಾರಕ್ಕೆ ಬಂದೊಡನೆ ಶಿವಸೇನೆ ವಂದೇಮಾತರಂ ಅನ್ನು ವಿಧಾನಸಭೆಯಿಂದ ಕೈಬಿಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು. ಅದೂ ಸರಿಯೇ. ವಂದೇಮಾತರಂ ಅನ್ನು ವಿರೋಧಿಸುತ್ತಲೇ ಮುಸಲ್ಮಾನರ ನಡುವೆ ತಮ್ಮ ಬೇಳೆ ಬೇಯಿಸಿಕೊಂಡು ಬಂದ ಕಾಂಗ್ರೆಸ್ಸಿಗರೊಂದಿಗೆ ಸೇರಿ ಸಕರ್ಾರ ರಚಿಸಿದ ಮೇಲೆ ಶಿವಸೇನೆ ಅದಕ್ಕೆ ತಕ್ಕಂತೆ ನಡೆದುಕೊಳ್ಳಲೇಬೇಕಲ್ಲ. ಆರು ವರ್ಷಗಳಲ್ಲಿ ಮೋದಿ ಮಾಡಿದ ಮಹಾಕಾರ್ಯವನ್ನೆಲ್ಲಾ ಆರೇ ತಿಂಗಳಲ್ಲಿ ತೊಳೆದು ಹಾಕಿಬಿಡುವ ಸಾಮಥ್ರ್ಯ ಕೆಲವರಿಗಿದೆ. ಮಹಾರಾಷ್ಟ್ರದಲ್ಲಿ ಎನ್ಸಿಪಿ, ಶಿವಸೇನಾ, ಕಾಂಗ್ರೆಸ್ ಸಕರ್ಾರ ರಚನೆಯಾದೊಡನೆ ನಡೆಯುತ್ತಿರುವ ಬೆಳವಣಿಗೆಗಳು ಇದನ್ನು ಸಾಬೀತುಪಡಿಸಿವೆ. ಶಿವಸೇನೆಯೊಂದಿಗೆ ಬಿಜೆಪಿಯ ಮೈತ್ರಿ ಮುರಿದು ಸಕರ್ಾರ […]

ಕೆರೆ ಮಾರಿದ್ದಾರೆ ಗೊತ್ತಾ?!

Friday, December 6th, 2019

ನೀರು ಸಂಪತ್ತು ಎನ್ನುವುದು ಕಳಕೊಂಡಾಗಲೇ ಗೊತ್ತಾಗೋದು. ಕೋಟಿಗಟ್ಟಲೆ ಹಣವನ್ನು ತಿಜೋರಿಯಲ್ಲಿ ಶೇಖರಿಸಿಡಬಹುದು ನಿಜ. ಆದರೆ ಅಷ್ಟರಿಂದಲೂ ಒಂದು ಹನಿ ನೀರನ್ನು ಉತ್ಪಾದಿಸಲು ಸಾಧ್ಯವಾಗದು. ನಾವು ಇದನ್ನು ಎಷ್ಟು ಬೇಗ ಅರಿತುಕೊಳ್ಳುತ್ತೇವೋ ಅಷ್ಟು ಒಳಿತು. ಈಗಾಗಲೇ ದೇಶದ ಮಹಾನಗರಗಳೆಲ್ಲವೂ ನೀರಿನ ಕೊರತೆಯಿಂದ ಬಳಲುತ್ತಿವೆ. ಕುಂದಾಪುರದ ಸಾಸ್ತಾನದ ಪುಟ್ಟ ಹಳ್ಳಿ ಗುಂಡ್ಮಿ. ಅಲ್ಲಿನ ವಿನಾಯಕ ದೇವಸ್ಥಾನದ ಎದುರಿಗೆ ಅರ್ಧ ಎಕರೆ ಮೀರಿಸುವ ಸುಂದರವಾದ ಪುಷ್ಕರಿಣಿ. ಆದರೆ ರಸ್ತೆ ಅಗಲೀಕರಣದ ನೆಪದಲ್ಲಿ ಅದನ್ನು ಮಣ್ಣು ತುಂಬುವ ಹೊಂಡವನ್ನಾಗಿ ಮಾಡಿಕೊಂಡುಬಿಟ್ಟರು. ನಾಲ್ಕೂ ದಿಕ್ಕುಗಳಲ್ಲಿದ್ದ […]

ವಿಶ್ವವಿದ್ಯಾಲಯದಲ್ಲಿ ಗೂಂಡಾ ಸಂಸ್ಕೃತಿ!

Friday, December 6th, 2019

ಈ ವಿದ್ಯಾಥರ್ಿಗಳನ್ನು ಸಾಮಾನ್ಯದವರೆಂದು ಭಾವಿಸಬೇಡಿ. ಭಾರತ ವಿರೋಧಿ ಶಕ್ತಿಗಳೊಂದಿಗೆ ಅವರಿಗೆ ನೇರ ಸಂಪರ್ಕವಿರುವುದನ್ನು ದೆಹಲಿ ಪೊಲೀಸು ಮತ್ತು ರಾಷ್ಟ್ರೀಯ ತನಿಖಾ ದಳಗಳೇ ಸ್ಪಷ್ಟಪಡಿಸಿವೆ. ಅದರಲ್ಲೂ ವಿಶೇಷವಾಗಿ ಕಾಶ್ಮೀರ ಪ್ರತ್ಯೇಕತಾವಾದಿಗಳ ಅಡ್ಡ ಜೆಎನ್ಯುನ ವಿದ್ಯಾಥರ್ಿ ನಿಲಯ. ಈ ಹಿಂದೆ ಪ್ಯಾಲಿಸ್ತೇನಿನ ಕುರಿತಂತೆ, ಶ್ರೀಲಂಕಾದ ತಮಿಳರ ಕುರಿತಂತೆ ಅಲ್ಲಿ ಕಾರ್ಯಕ್ರಮ ನಡೆಯುವಾಗ ಕಾನೂನಿಗೆ ವಿರೋಧವಾಗಿ ಭಾರತ ಕಾಶ್ಮೀರವನ್ನು ಆಕ್ರಮಿಸಿಕೊಂಡಿದೆ ಎಂಬ ವಿಷಯವನ್ನೂ ಚಚರ್ೆ ಮಾಡಿದ್ದರು. ಕಳೆದ ಕೆಲವು ವಾರಗಳಿಂದ ಎರಡು ವಿಶ್ವವಿದ್ಯಾಲಯಗಳು ದೊಡ್ಡದಾಗಿ ಸದ್ದು ಮಾಡುತ್ತಿವೆ. ಒಂದು ಕುಖ್ಯಾತವಾದ ಜೆಎನ್ಯು, […]

ಮಹಾರಾಷ್ಟ್ರದಲ್ಲಿ ಅಮಿತ್ ‘ಶಾ’ಣಕ್ಯ!

Friday, December 6th, 2019

ಶಿವಸೇನೆಗೆ ಗತಿ ಕಾಣಿಸಲು ಇಷ್ಟು ಸಾಕು. ಏಕೆಂದರೆ ಕಾಂಗ್ರೆಸ್ಸಿನೊಂದಿಗೆ ಸೇರಿಕೊಳ್ಳುವ ಮಾತನ್ನಾಡುತ್ತಿದ್ದಂತೆ ಶಿವಸೇನೆ ತನ್ನ ಹಿಂದುತ್ವದ ಬೆಂಬಲಿಗರನ್ನು ಕಳೆದುಕೊಂಡು ಅಷ್ಟನ್ನೂ ಬಿಜೆಪಿಗೆ ವಗರ್ಾಯಿಸಿಬಿಟ್ಟಿದೆ. ಮತ್ತೊಮ್ಮೆ ಚುನಾವಣೆಯಾದರೆ ಶಿವಸೇನೆಯದ್ದು ಅನಾಥವಾಗುವ ಪರಿಸ್ಥಿತಿ! ಮಹಾರಾಷ್ಟ್ರ ಸಕರ್ಾರ ಯಾರದ್ದೆಂಬ ಕುತೂಹಲ ಇನ್ನೂ ಮುಗಿದಿಲ್ಲ. ಅಮಿತ್ ಶಾ ಮುಖದಲ್ಲಿ ನಿರಾಳತೆಯನ್ನು ಕಂಡಾಗ ಶಿವಸೇನೆಯವರಿಗೆ ಆತಂಕ ಹೆಚ್ಚುವುದಷ್ಟೇ ಅಲ್ಲದೇ ಬಲಪಂಥೀಯರಿಗೂ ಮುಂದೇನೆಂಬ ಕಾತರತೆ ಖಂಡಿತ ಕಾಣುತ್ತದೆ. ಮಹಾರಾಷ್ಟ್ರ ಅಧಿಕಾರದ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ರಾಜ್ಯ. ಖಂಡಿತ ಯಾವ ಪಕ್ಷವೂ ಅದನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಆದರೆ […]

ಉತ್ತರ ಕರ್ನಾಟಕದ ಪ್ರವಾಹ ಮರೆತೇ ಬಿಟ್ಟಿರಾ?!

Friday, December 6th, 2019

ಉತ್ತರ ಕನರ್ಾಟಕದ ಪ್ರವಾಹದ ಹೊತ್ತಲ್ಲಿ ಎಲ್ಲರೂ ಎಷ್ಟು ಬೇಗಬೇಗನೇ ಪರಿಹಾರವನ್ನು ಕಳಿಸಿದ್ದರೆಂದರೆ ಸಿಕ್ಕವರಿಗೆ ಮತ್ತಷ್ಟು ಸಿಕ್ಕಿ, ಕೆಲವೊಂದು ವಸ್ತುಗಳ ಮೇಲೆ ಅವರಿಗೂ ವಾಕರಿಕೆ ಬಂದು, ಕೆಲವೊಮ್ಮೆ ಕೊಟ್ಟದ್ದನ್ನು ಬೇಡವೆನ್ನುತ್ತಾ, ಹೆಚ್ಚಿದ್ದುದನ್ನು ಮಾರಾಟ ಮಾಡುತ್ತಾ ಆರಂಭದ ದಿನಗಳನ್ನು ಕಳೆದುಬಿಟ್ಟರು! ಇವುಗಳ ನಡುವೆಯೇ ಹೀಗೆ ದೂರದಿಂದ ಬಂದ ವಸ್ತುಗಳನ್ನು ಒಂದೆಡೆ ಗುಡ್ಡೆ ಹಾಕಿ ಆನಂತರದ ದಿನಗಳಲ್ಲಿ ಅದನ್ನು ಮಾರಾಟ ಮಾಡಿಕೊಂಡ ಲೂಟಿಕೋರರೂ ನಮ್ಮ ನಡುವೆಯೇ ಇದ್ದಾರೆ. ‘ಉತ್ತರ ಕನರ್ಾಟಕಕ್ಕೆ ಕಂಡು ಕೇಳರಿಯದ ಪ್ರವಾಹ ಬಂದಿತ್ತು’ ಎಂಬುದು ಹೆಚ್ಚು-ಕಡಿಮೆ ಮರೆತೇ ಹೋದ […]

ಯಶಸ್ಸಿಗೆ ರಾಜಮಾರ್ಗ!

Wednesday, October 30th, 2019

ಸಂತ ರಾಮತೀರ್ಥರು ಜಪಾನಿನ ಭಾಷಣವೊಂದರಲ್ಲಿ ಯಶಸ್ಸು ಪಡೆಯುವ ಮಾರ್ಗದ ಕುರಿತಂತೆ ಆಡಿರುವ ಮಾತುಗಳು ನಿಜಕ್ಕೂ ಮನೋಜ್ಞವಾಗಿದೆ. ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಬಲ್ಲಂಥದ್ದು. ದೀಪಾವಳಿಯಂದು ಅವರ ಜನ್ಮದಿನವನ್ನು ನೆನಪಿಸಿಕೊಳ್ಳಲೆಂದೇ ಇಲ್ಲಿ ಆ ಭಾಷಣದ ಸಾರಾಂಶ ಹಂಚಿಕೊಳ್ಳುತ್ತಿದ್ದೇನೆ. ಯಶಸ್ಸು ಯಾರಿಗೆ ಬೇಡ ಹೇಳಿ? ಪ್ರತಿಯೊಬ್ಬರೂ ತಾವು ಮಾಡಿದ ಕೆಲಸ ಯಶಸ್ಸಿನಲ್ಲಿಯೇ ಕೊನೆಗೊಳ್ಳಬೇಕೆಂದು ಆಶಿಸುತ್ತಾರೆ. ಸಾಮಾನ್ಯ ಕೂಲಿ ಕಾಮರ್ಿಕನಿಂದ ಹಿಡಿದು ದೇಶವನ್ನಾಳುವ ಪ್ರಧಾನಮಂತ್ರಿಯವರೆಗೆ ಹಿಡಿದ ಕೆಲಸದಲ್ಲಿ ಗೆಲುವು ಕಾಣಬೇಕೆಂಬ ತವಕ ಇದ್ದದ್ದೇ. ಆದರೆ ನಮ್ಮಲ್ಲನೇಕರು ಗೆಲುವಿನ ಒಂದಿಷ್ಟೂ ರುಚಿ ನೋಡದೇ ಬದುಕನ್ನು ಕಳೆದುಬಿಡುತ್ತಾರೆ. […]

ತಿವಾರಿ ಹತ್ಯೆ ಸಮರ್ಥಕರು ಮನುಷ್ಯರೇ ಅಲ್ಲ!

Wednesday, October 30th, 2019

ಕಮಲೇಶ್ ತಿವಾರಿ ಪ್ರವಾದಿಯ ಕುರಿತಂತೆ ಹೇಳಿಕೆ ಕೊಟ್ಟಿದ್ದರೂ ಎಂಬ ಕಾರಣಕ್ಕೆ ಅವರನ್ನು ವರ್ಷಗಟ್ಟಲೆ ಜೈಲಿನಲ್ಲಿರುವಂತೆ ಮಾಡಲಾಗಿತ್ತು. ಇದು ವಾಕ್ಸ್ವಾತಂತ್ರ್ಯ ಹೊಂದಿರುವಂತಹ ರಾಷ್ಟ್ರದಲ್ಲಿ ಎಂದಿಗೂ ನಡೆಯಬಾರದ ಸಂಗತಿ. ಕೃಷ್ಣ ವ್ಯಭಿಚಾರಿ, ರಾಮ ಹುಟ್ಟಿಯೇ ಇರಲಿಲ್ಲ, ಹಿಂದೂಗಳು ಪೂಜಿಸುವ ಶಿವಲಿಂಗವೆಂದರೆ ಅದು ಪುರುಷನ ಮಮರ್ಾಂಗ ಹೀಗೆಲ್ಲಾ ಅಸಂಬದ್ಧವಾದ ಮಾತುಗಳನ್ನು ಮುಸಲ್ಮಾನರು, ಕ್ರಿಶ್ಚಿಯನ್ನರು ಬೀದಿಗೊಬ್ಬರಂತೆ ಆಡುವಾಗಲೂ ಹಿಂದೂ ತಲೆಕೆಡಿಸಿಕೊಳ್ಳುವುದಿಲ್ಲ. ಕಮಲೇಶ್ ತಿವಾರಿಯ ಹತ್ಯೆ ದೇಶದಲ್ಲಿ ಸಂಚಲನ ಉಂಟುಮಾಡಿಬಿಟ್ಟಿತು. ಪ್ರವಾದಿ ಮೊಹಮ್ಮದ್ ಪೈಗಂಬರರ ಕುರಿತಂತೆ ಹೇಳಿಕೆ ಕೊಟ್ಟು ವರ್ಷಗಟ್ಟಲೆ ಜೈಲಿನಲ್ಲಿದ್ದ ತಿವಾರಿ ಹೊರಬಂದ […]

ಸಾವರ್ಕರ್ ಎಂದರೆ ಕಾಂಗ್ರೆಸ್ಸಿಗರು ಮೈ ಪರಚಿಕೊಳ್ಳುವುದೇಕೆ?!

Wednesday, October 30th, 2019

ಕಾಂಗ್ರೆಸ್ಸಿಗರ ಸಮಸ್ಯೆಯೇ ಅದು. ಅವರ ಖ್ಯಾತನಾಮ ನಾಯಕರು ಎಂದಿಗೂ ಯಾತನೆಯನ್ನು ಅನುಭವಿಸಲೇ ಇಲ್ಲ. ಅವೆಲ್ಲವನ್ನೂ ದೇಶಭಕ್ತರಿಗೆ ಬಿಟ್ಟು ತಾವು ಜೈಲಿನಲ್ಲಿ ಪೆನ್ನು, ಪೇಪರುಗಳನ್ನು ಪಡಕೊಂಡು ತಮ್ಮ-ತಮ್ಮ ಜೀವನಕಥನಗಳನ್ನು ಬರೆದುಕೊಂಡು ಕಾಲ ತಳ್ಳಿಬಿಟ್ಟರು. ಅದನ್ನೇ ಬಲುದೊಡ್ಡ ಸ್ವಾತಂತ್ರ್ಯ ಹೋರಾಟವೆಂದು ಬಿಂಬಿಸಿದರು. ಸಾವರ್ಕರ್ರದು ಹಾಗಲ್ಲ. ಕೋಟರ್ಿನಲ್ಲಿ ವಿಚಾರಣೆ ನಡೆಯುತ್ತಿತ್ತು. ತಾನು ಮಾಡಿದ ತಪ್ಪಿಗೆ ಸಕರ್ಾರಿ ಅಧಿಕಾರಿಗಳಿಂದ ವಿಚಾರಣೆ ಎದುರಿಸುತ್ತಿದ್ದ ರಾಜಕೀಯ ಖೈದಿಯ ಪರವಾಗಿ ಅವನ ವಕೀಲರು ನ್ಯಾಯಾಧೀಶರ ಬಳಿ ಅಲವತ್ತುಕೊಳ್ಳುತ್ತಿದ್ದರು. ತಮ್ಮ ಕಕ್ಷಿದಾರರು ಜೈಲಿನಲ್ಲಿದ್ದು ಐದು ಕೇಜಿಯಷ್ಟು ತೂಕ ಕಡಿಮೆಯಾಗಿಬಿಟ್ಟಿದೆ […]