ಅನುಭಾವ ಬಿಂದುಗಳು (ಹೊಸ ಕಂತು)
Wednesday, July 3rd, 2013ಅನುಭವಿಸಿದರೆ ಒಂಟಿತನವೂ ಹಾಯೆನಿಸುತ್ತದೆ. ~ ಇನ್ನೇಕೆ ದಾರಿ ನನಗೆ… ನಿನ್ನ ಹೆಜ್ಜೆ ಗುರುತು ಸಿಕ್ಕಿತಲ್ಲ. ~ ಅರೆ! ಅರಳಿದ ಪದ್ಮದ ಸೌಂದರ್ಯಕ್ಕೆ ಸೋತ ಕುಂಡಲಿನಿಯ ಹಾವು ಕುಣಿಯುತ್ತ ಸಹಸ್ರಾರ ಸೇರಿದೆ ~ ನೀನು ನನಗಿಷ್ಟ ಅದು ಕನ್ನಡಿಗೂ ಗೊತ್ತು. ಅದಕ್ಕೇ ಅವಕ್ಕೆ ನೀನಂದರೆ ಅಷ್ಟಕ್ಕಷ್ಟೇ. ~ ಕಣ್ಣಿಲ್ಲದವಗೆ ಮಾತ್ರ ಕತ್ತಲಿನ ಅನುಭವ. ~ ಹೃದಯದ ತಂತು ಎಲ್ಲರೂ ಮೀಟಲಲ್ಲ. ಸಂಗೀತ ಆಲಿಸುವ ತಾಳ್ಮೆಯೂ ಬೇಕಲ್ಲ! ~ ಸೂರ್ಯೋದಯದೊಂದಿಗೆ ಶುರುವಾಗೋ ನನ್ನ ಗರತಿತ್ವ ಸೂರ್ಯಾಸ್ತಕ್ಕೆ ಮುಗಿದುಹೋಗುತ್ತೆ! ~ ನಂಬಿಕೆಯೇ […]