ವಿಭಾಗಗಳು

ಸುದ್ದಿಪತ್ರ


 

ಆ ಸಾಹಸಕ್ಕಿಂದು ಹದಿನೈದು ವರ್ಷ!

Sunday, May 12th, 2013

ಹದಿನೈದು ವರ್ಷಗಳ ಹಿಂದೆ ಅಟಲ್‌ಜೀ ಅಂತಹದೊಂದು ಎದೆಗಾರಿಕೆಯ ಸಾಹಸಕ್ಕೆ ಮುನ್ನುಡಿ ಬರೆದರು. ಅಬ್ದುಲ್‌ ಕಲಾಮ್‌ ಸೇರಿದಂತೆ ಅತ್ಯುನ್ನತ ವಿಜ್ಞಾನಿಗಳು ಜೊತೆಯಾದರು. ಭಾರತ ಜಗತ್ತಿನ ಅರಿವಿಗೆ ಬಾರದಂತೆ ಯಶಸ್ವಿ ಅಣ್ವಸ್ತ್ರ ಪ್ರಯೋಗ ನಡೆಸಿಯೇಬಿಟ್ಟಿತು. ತನ್ನ ತಾಕತ್ತನ್ನು ಮನವರಿಕೆ ಮಾಡಿಸಿತು. ಆ ಪ್ರಯೋಗಕ್ಕೀಗ ಹದಿನೈದರ ಸಂಭ್ರಮ. ಆದರೆ, ಯಾರಿಗೆಷ್ಟು ನೆನಪಿದೆ!?  ಮೇ ೧೧ರ ಆ ಕತೆಯೇ ರೋಚಕ. ೧೩ ದಿನಗಳ ಅಧಿಕಾರ ದಕ್ಕಿದಾಗ ಅಟಲ್ ಜೀ ಮಾಡಿದ ಮೊದಲ ಕೆಲಸವೇ ವಿಜ್ಞಾನಿಗಳನ್ನು ಕರೆದು ಭಾರತವನ್ನು ಗಂಡು ರಾಷ್ಟ್ರವಾಗಿಸುತ್ತೀರಾ ಎಂದು ಎಂದು […]

ಭಾರತವೇಕೆ ಚೀನಾದೆದುರು ಮಂಡಿಯೂರಬೇಕು!?

Friday, May 10th, 2013

ಈಶಾನ್ಯ ರಾಜ್ಯದತ್ತ ನಮ್ಮ ರಕ್ಷಣಾ ಸಚಿವರು ಕಾಲಿಟ್ಟರೆ ದ್ವಿಪಕ್ಷೀಯ ಸಂಬಂಧದ ಬೆದರಿಕೆ ಹಾಕುವ ಚೀನಾ, ಟಿಬೆಟ್ಟನ್ನು ನುಂಗಿ ನೀರು ಕುಡಿದಿದೆಯಲ್ಲ, ನಾವು ಚಕಾರ ಎತ್ತಿದ್ದೇವಾ? ಒಮ್ಮೆಯಾದರೂ ನಾವು ಪ್ರಕಟಿಸುವ ಚೀನಾ ನಕ್ಷೆಯಲ್ಲಿ ಟಿಬೇಟನ್ನು ಮಾಯಮಾಡಿ ಕಂಕುಳನ್ನು ಚಿವುಟಿದ್ದೇವಾ? ತೈವಾನಿನ ಪರವಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಾತನಾಡುವ ಬೆದರಿಕೆ ಒಡ್ಡಿದ್ದೇವಾ? ಜಪಾನಿನಲ್ಲಿ ಬಲಪಂಥೀಯ ರಾಷ್ಟ್ರವಾದೀ ಸರ್ಕಾರ. ಅಲ್ಲಿನ ನಾಯಕ ’ಆಬೆ’ ಕುದಿಯುವ ದೇಶಭಕ್ತಿಯೊಂದಿಗೇ ದೇಶವಾಳಲು ಬಂದವನು. ದಕ್ಷಿಣ ಕೊರಿಯಾದಲ್ಲಿ ಪಾರ್ಕ್ ತನ್ನ ನೇತೃತ್ವದಲ್ಲಿ ಯುದ್ಧವಾದರೂ ಸೈ, ರಾಷ್ಟ್ರ ಸ್ವಾಭಿಮಾನಿಯಾಗಿರಬೇಕೆಂದು ಭಾವಿಸುವಾಕೆ. […]

ಇವರು ನಮ್ಮ ಸ್ವಾಭಿಮಾನ ವೃದ್ಧಿಸುವ ಕೆಲಸ ಮಾಡಿದ್ದಾರಾ?

Sunday, May 5th, 2013

ಆಗಲೇ ನಾವು ಜಪಾನ್, ಉತ್ತರ ಕೊರಿಯಾ, ವಿಯೆಟ್ನಾಂ, ಮ್ಯಾನ್ಮಾರ್, ರಷ್ಯಾಗಳಲ್ಲಿ ನಮ್ಮ ಕೈ ಚಾಚಿದ್ದರೆ ಚೀನಾ ಬಾಲ ಮುದುರಿಕೊಂಡು ಬಿದ್ದಿರುತ್ತಿತ್ತು. ದುರ್ದೈವ ಕಪಿಲ್ ಸಿಬಲ್, ದಿಗ್ವಿಜಯ ಸಿಂಗ್‌ರೆಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾಣಾಕ್ಷತನ ತೋರೋದು ಬಿಟ್ಟು ಅಣ್ಣಾ, ಬಾಬಾ ಹಾಗೂ ಇಲ್ಲಿನ ರಾಜಕೀಯ ನಾಯಕರುಗಳ ಹಿಂದೆ ಬಿದ್ದಿದ್ದರು. ಜನಸಾಮಾನ್ಯರ ನೆನಪು ಅಲ್ಪಕಾಲದ್ದಂತೆ. ಈ ಮಾತನ್ನು ಕಾಂಗ್ರೆಸ್ಸು ಚೆನ್ನಾಗಿ ಅರ್ಥಮಾಡಿಕೊಂಡಿದೆ. ಹೀಗಾಗಿಯೇ ಜನರೆದುರು ಮತ್ತೆ ಬಂದು ನಿಲ್ಲುತ್ತೆ. ತ್ಯಾಗಮಯಿ ಸೋನಿಯಾರಿಂದ ಅಽಕಾರ ಪಡಕೊಂಡಂದಿನಿಂದ ಇಂದಿನವರೆಗೂ ಮನಮೋಹನ್ ಸಿಂಗ್‌ರು ಭಾರತದ ಸ್ವಾಭಿಮಾನ […]

ಒಂದು ಕಣ್ಣಿಗೆ ಸುಣ್ಣ, ಇದ್ಯಾವ ನ್ಯಾಯ!?

Friday, April 26th, 2013

ಯಡ್ಯೂರಪ್ಪನವರಿಗೆ ಅಧಿಕಾರ ಸಿಗದಾದಾಗ ಬೀದಿಗಿಳಿದ ಮಠಾಧೀಶರೊಬ್ಬರ ಬಗ್ಗೆ ವ್ಯಂಗ್ಯವಾಗಿ, ಅಸಹ್ಯಕರವಾಗಿ ಮಾತನಾಡಿದ ದೆಹಲಿಯ ಮಾಧ್ಯಮಗಳು ಈಗೇಕೋ ಇದನ್ನು ಮಾತ್ರ ಬೇರೆಯೇ ದೃಷ್ಟಿಯಿಂದ ನೋಡತೊಡಗಿದವು. ಹೌದು. ಮಠಾಧೀಶರು ವ್ಯಕ್ತಿಯೊಬ್ಬನನ್ನು ಬೆಂಬಲಿಸಿ ಬೀದಿಗಿಳಿಯುವುದು ಸಮ್ಮತವಲ್ಲ ನಿಜ, ಹಾಗಂತ ಬುಖಾರಿ ಬೀದಿಗಿಳಿದಿದ್ದು ಕೂಡ ಅಸಂಬದ್ಧವೇ. ಅದ್ಯಾಕೆ ಆ ಕಣ್ಣಿಗೆ ಮಾತ್ರ ಸುಣ್ಣ? ಗಮನಿಸಬೇಕಾದ ಸುದ್ದಿಯನ್ನ ನಾವು ನೋಡೋದೇ ಇಲ್ಲ. ಅರ್ಥೈಸಿಕೊಳ್ಳಬೇಕಾದ ರೀತಿಯಲ್ಲಿ ಸ್ವೀಕರಿಸೋದಿಲ್ಲ. ಉತ್ತರ ಪ್ರದೇಶದ ಮುಖ್ಯ ಮಂತ್ರಿ ಅಖಿಲೇಶ್ ಯಾದವ್‌ಗೆ ಗಂಭೀರ ಸಮಸ್ಯೆಯೊಂದು ತಗುಲಿಕೊಂಡಿದೆ. ಎಂದಿನಂತೆ ಮುಸಲ್ಮಾನರದ್ದೇ. ಹೌದು, ಉತ್ತರ […]

ತಬಸ್ಸುಮ್ ಮೊದಲು ಹೆಣ್ಣು, ಆಮೇಲೆ ಮುಸ್ಲಿಮ್…

Friday, April 19th, 2013

ಈಗ ಸಜ್ಜನ ಮುಸಲ್ಮಾನರು ಜಾಗೃತಗೊಳ್ಳಬೇಕಿದೆ. ಬೀದಿಗೆ ಬರಬೇಕಿರೋದು ವಿಶ್ವರೂಪಮ್‌ನ ವಿಚಾರಕ್ಕೋ ದೂರದರ್ಶನದಲ್ಲಿ ಪ್ರಸಾರಗೊಂಡ ಹಂದಿಮಾಂಸದ ಅಡುಗೆಯ ವಿಚಾರಕ್ಕೋ ಅಲ್ಲ. ಹೊರಾಟ ನಡೀಬೇಕಿರೋದು ಇಂತಹ ವಿಚಾರಕ್ಕೆ. ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಭಾರತ ಮತ್ತೆ ಸುದ್ದಿಯಾಗಿದೆ. ಖಂಡಿತವಾಗಿಯೂ ಒಳ್ಳೆಯ ವಿಚಾರಕ್ಕಾಗಿಯಲ್ಲ; ತೀರಾ ಕೆಟ್ಟ ವಿಚಾರಕ್ಕೆ. ಹದರಾಬಾದಿಗೆ ಆಫ್ರಿಕಾದ, ಈಜಿಪ್ಟಿನ ಮುಸ್ಲಿಮ್ ಪ್ರವಾಸಿಗರು ವಿಪರೀತ ಸಂಖ್ಯೆಯಲ್ಲಿ ಬರಲಾರಂಭಿಸಿದ್ದಾರೆ. ದೇಶ ಸುತ್ತಾಡುವ ನೆಪದಲ್ಲಿ ಬಂದು ಬಡ ಮುಸ್ಲಿಮ್ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ ಇದು ದೀರ್ಘಕಾಲದ ಗಟ್ಟಿ ಮದುವೆಯಲ್ಲ; ಒಂದು ತಿಂಗಳ ಅವಧಿಯ […]

ನಮ್ಮ ಅಧ್ಯಕ್ಷ ಪತ್ನಿಯರೇಕೆ ಹಾಗಿಲ್ಲ!?

Friday, April 12th, 2013

ನಮ್ಮ ಪ್ರಧಾನ ಮಂತ್ರಿಗಳ ಮನೆಗೆ ಯಾರಾದರೂ ಹೋಗುತ್ತಾರೇನು? ನಮ್ಮೆಲ್ಲ ರಾಜಕಾರಣಿಗಳು ಅಷ್ಟಷ್ಟು ದೊಡ್ಡ ಬಂಗಲೆಗಳಲ್ಲಿ ಇರುತ್ತಾರಲ್ಲ, ಅದನ್ನು ಎಂದಾದರೂ ಸಾಮಾಜಿಕ ಚಟುವಟಿಕೆಗೆ ಬಳಸಿದ್ದಾರ? ನಮ್ಮಲ್ಲಿ ರಾಜಪತ್ನಿಯರೆಂದರೆ ಸಹಿ ಹಾಕಲು ಗಂಡನ ಮೇಲೆ ಪ್ರಭಾವ ಬೀರುವವರು ಅಂತಲಷ್ಟೆ! ಪ್ರಧಾನಿ ಮನಮೋಹನ ಸಿಂಗರ ಪತ್ನಿಯ ಹೆಸರೇನು? ಎಂದು ಕೇಳಿದರೆ ಈ ದೇಶದ ಅದೆಷ್ಟು ಮಂದಿ ಸರಿಯಾದ ಉತ್ತರ ಕೊಡಬಲ್ಲರು ಹೇಳಿ? ರಾಜ್ಯದಲ್ಲಿ ಜಗದೀಶ್ ಶೆಟ್ಟರ್ ಹಲವಾರು ತಿಂಗಳಿಂದ ಮುಖ್ಯಮಂತ್ರಿಯಾಗಿದ್ದಾರಲ್ಲ, ಅವರ ಶ್ರೀಮತಿಯವರ ಬಗ್ಗೆ ಯಾರಿಗಾದರೂ ಗೊತ್ತಿದೆಯಾ? ಸಿ.ಎಮ್, ಪಿ.ಎಮ್‌ಗಳ ಹೆಂಡತಿಯರ […]

ಏಪ್ರಿಲ್ ತಿಂಗಳ ಕಾರ್ಯಕ್ರಮಗಳು

Saturday, April 6th, 2013

೯: ಬೆಂಗಳೂರು ಯೂನಿವರ್ಸಿಟಿಯಲ್ಲಿ ವಿವೇಕಾನಂದ ಜಯಂತಿ ಕಾರ್ಯಕ್ರಮ ೧೩: ರಾಷ್ಟ್ರಶಕ್ತಿ ಕೇಂದ್ರ ವಿದ್ಯಾರ್ಥಿ ಶಿಬಿರ ಉದ್ಘಾಟನೆ ೧೬: ಜಾಗೋ ಭಾರತ್, ಬಾಗಲಕೋಟೆ ೧೯: ಸಿಂಡಿಕೇಟ್ ಸಭೆ, ಹಂಪಿ ೨೧: ತರುಣ ಸಮಾವೇಶ, ರಾಷ್ಟ್ರಶಕ್ತಿ ಕೇಂದ್ರ ವಿದ್ಯಾರ್ಥಿ ಶಿಬಿರ ೨೨: ಭಾಲ್ಕಿ ಮಠದಲ್ಲಿ ಕಾರ್ಯಕ್ರಮ ೨೫: ಜಾಗೋ ಭಾರತ್, ಮಂಗಳೂರು ೨೭: ಶಿಬಿರದಲ್ಲಿ ಉಪನ್ಯಾಸ, ಸುತ್ತೂರು ೨೮: ಭಗವದ್ಗೀತಾ ಶಿಬಿರ, ಯೋಗಶ್ರೀ ೨೯: ಜಾಗೋ ಭಾರತ್, ಶಿರೂರು

ಔಷಧ ಮಾಫಿಯಾಕ್ಕೆ ಸೆಡ್ಡು ಹೊಡೆಯಿತು ಭಾರತ

Friday, April 5th, 2013

’ಭಾರತದ ಪೇಟೆಂಟ್ ಕಾನೂನನ್ನೆ ಜಗತ್ತಿನ ಇತರ ರಾಷ್ಟ್ರಗಳೂ ಒಪ್ಪಿಕೊಳ್ಳುತ್ತಿರುವುದು ಗಾಬರಿಯ ಸಂಗತಿ. ಇದು ಮುಂಬರುವ ದಿನಗಳಲ್ಲಿ ಅಮೆರಿಕಾದ ಔಷಧ ತಯಾರಿಕಾ ಮಾರುಕಟ್ಟೆಗಷ್ಟೇ ಅಲ್ಲ, ಅಮೆರಿಕಾದ ಆರ್ಥಿಕತೆಗೂ ಸಾಕಷ್ಟು ಸಂಕಷ್ಟ ತಂದೊಡ್ಡಲಿದೆ’ ಎಂದು ಅಮೆರಿಕನ್ ವಕೀಲ ವಾಲ್ಡ್ರನ್ ಅಲವತ್ತುಕೊಂಡಿದ್ದ. ಭಾರತದ ಶಕ್ತಿ ಮತ್ತೆ ಸಾಬೀತಾಗಿದೆ. ನೊವಾರ್ಟಿಸ್ ಎನ್ನುವ ಕ್ಯಾನ್ಸರ್ ಔಷಧ ತಯಾರಿಕಾ ಕಂಪನಿಗೆ ಸುಪ್ರೀಮ್ ಕೋರ್ಟ್ ಪೇಟೆಂಟ್ ಮುಂದುವರಿಸಲು ನಿರಾಕರಿಸಿದ ನಂತರ ಜಗತ್ತಿನಲ್ಲಿ ಸಂಚಲನವೇ ಶುರುವಾಗಿಬಿಟ್ಟಿದೆ. ಅರ್ಜೆಂಟೈನಾ, ಬ್ರೆಜಿಲ್ ಥರದ ಥರದ ರಾಷ್ಟ್ರಗಳನ್ನು ಬಿಡಿ, ಆಸ್ಟ್ರೇಲಿಯಾ, ಯುರೋಪಿಯನ್ ಯೂನಿಯನ್‌ಗಳು […]

ಪ್ರಶ್ನೆಗಳೇನೋ ಸಾಕಷ್ಟಿವೆ.. ಕೇಳುವುದು ಯಾರನ್ನು?

Friday, March 29th, 2013

ಮಠಕ್ಕೆ ಹಣ ಕೊಟ್ಟಾಗ ವಿಷಾದಿಸುವ ಅಗತ್ಯವಿಲ್ಲ. ಬದಲಿಗೆ ಭಕ್ತ ಸಮೂಹ ಅದು ಮಠದವರೆಗೂ ಬಂದು, ಸದ್ವಿನಿಯೋಗವಾಗುವಂತೆ ನೋಡಿಕೊಂಡರೆ ಅದು ಬಹು ಮುಖ್ಯ ಕೆಲಸವಾದೀತು. ಕೆಲವಾದರೂ ಮಠಾಧೀಶರು ಒಟ್ಟಿಗೆ ಕುಳಿತು ಸರ್ಕಾರದ ಹಣವನ್ನು ಬಳಸಿಕೊಳ್ಳುವ ಕುರಿತು ಒಂದು ನೀತಿ ಸಂಹಿತೆ ರಚಿಸಿಕೊಂಡರೆ ಮತ್ತೂ ಒಳಿತೇ. – ಚಕ್ರವರ್ತಿ ಸೂಲಿಬೆಲೆ ಬೇಲಿ ಮಠಾಧೀಶರು ಮಠಕ್ಕೆಂದು ಕೊಟ್ಟಅನುದಾನ ಮರಳಿಸಿಬಿಟ್ಟಿದ್ದಾರಂತೆ. ಹಾಗಂತ ಸುದ್ದಿ ನೋಡಿದಾಗ ಅಚ್ಚರಿಯಾಯ್ತು. ಇನ್ನೂ ಅನೇಕ ಮಠಾಧೀಶರಿಗೆ ಅದು ಮೇಲ್ಪಂಕ್ತಿಯಾಗಲೆಂಬ ಆಸೆಯನ್ನು ಹಲವರು ವ್ಯಕ್ತಪಡಿಸಿದರು. ಸ್ವಾಮೀಜಿ ರಾಜ್ಯದಲ್ಲಿ ಬರ ಪರಿಸ್ಥಿತಿ […]

ರೀಲ್‌ನವರು ಇನ್ನು ಸಾಕು, ರಿಯಲ್ ಹೀರೋಗಳು ಬೇಕು

Saturday, March 23rd, 2013

ತರುಣ ಪೀಳಿಗೆ ದಿಕ್ಕು ತಪ್ಪುತ್ತಿರೋದೇ ಇಲ್ಲಿ. ಸ್ವಾರ್ಥದ ಅಧೀನರಾಗಿ, ದುಷ್ಟ ಚಟಗಳ ದಾಸರಾಗಿ ಯಾವಕಾರಣಕ್ಕೂ ಮಾದರಿಯಾಗಲು ಯೋಗ್ಯರಲ್ಲದವರನ್ನು ಅನುಸರಿಸುವಂತೆ ಯುವಕರನ್ನು ಪ್ರೇರೇಪಿಸುತ್ತಿದ್ದೇವಲ್ಲ ಅದೇ ದೊಡ್ಡ ಸಮಸ್ಯೆ. ಸಂಜಯ್ ದತ್‌ಗೆ ಜೈಲು! ಸುದ್ದಿ ಕೇಳಿದಾಗ ನೆಮ್ಮದಿಯಾಯ್ತು. ದೇಶಕ್ಕೆ ಕಂಟಕವಾದವನನ್ನು ಯಾವ ಕಾಲಕ್ಕೂ ಕ್ಷಮಿಸಬಾರದೆನ್ನುವ ಸುಪ್ರೀಮ್ ಕೋರ್ಟಿನ ನಿರ್ಣಯ ಸಮಾಧಾನಕರವೇ. ಆದರೆ ನೋವೇನು ಗೊತ್ತೆ? ’ಇದಕ್ಕಿಂತ ಕಡಿಮೆ ಶಿಕ್ಷೆ ಕೊಡಲಾಗುತ್ತಿರಲಿಲ್ಲ’ ಎಂದು ಸುಪ್ರೀಮ್ ಕೋರ್ಟ್ ಗೋಳು ಹೇಳಿಕೊಂಡಿರುವುದು. ಜಗತ್ತಿನಲ್ಲೆಲ್ಲ ದೇಶದ್ರೋಹಕ್ಕೆ ಅತ್ಯುಗ್ರ ಶಿಕ್ಷೆ ವಿಧಿಸುವ ರೂಢಿ ಇದ್ದರೆ, ಭಾರತದಲ್ಲಿ ಅದನ್ನು […]