ವಿಭಾಗಗಳು

ಸುದ್ದಿಪತ್ರ


 

ಪುರಾಣಗಳೆಂದು ಜರಿಯದಿರಿ! ~ ವಿಶ್ವಗುರು 12

Monday, June 8th, 2015

‘ಶಿವ’ ಯಾವಾಗಲೂ ಕಾಡುವ ದೇವರೇ. ಅವನ ಆಕಾರ, ಬಣ್ಣ, ವೇಷ, ವಾಸ ಸ್ಥಳ, ಆಭರಣ ಇವ್ಯಾವುವೂ ಸರಳವಾದುದಲ್ಲ. ಅತ್ಯಂತ ಗೂಢವಾದುದೇನನ್ನೋ ವಿವರಿಸುವ ಪ್ರಯತ್ನ ಅದರ ಹಿಂದಿದೆ. ಕೊರಳಲ್ಲಿ ಹಾವು, ಮೈ ಪೂರಾ ಭಸ್ಮ, ಸೊಂಟಕ್ಕೆ ವ್ಯಾಘ್ರ ಚರ್ಮ, ಕತ್ತಲ್ಲಿ ರುಂಡ ಮಾಲೆ. ತಲೆಯ ಮೇಲೆ ಗಂಗೆ, ಹಣೆಯಲ್ಲಿ ಉರಿವ ಕಣ್ಣು. ಸ್ಮಶಾನ ವಾಸಿ, ಹಿಮಾಲಯದ ಒಡೆಯ. ಉಫ್.. ಎಲ್ಲವೂ ವಿಚಿತ್ರ. ಆತನ ಲಿಂಗ ರೂಪವಂತೂ ಅನೇಕ ವೈಜ್ಞಾನಿಕ ಸತ್ಯಗಳ ಮೂರ್ತ ರೂಪ. ಅಲ್ಲದೆ ಮತ್ತೇನು? ಪ್ರಳಯ ಕಾಲದಲ್ಲಿ […]

ನಟರಾಜ ನರ್ತನದ ಚಿದಂಬರ ರಹಸ್ಯ!

Monday, June 1st, 2015

‘ಕಣ್ಣಿನಿಂದ ನೋಡಿದ್ದು ಮಾತ್ರ ಸತ್ಯ’ – ಹಾಗಂತ ಅನೇಕರು ವಾದಿಸುತ್ತಾರೆ. ಅಚ್ಚರಿ ಏನು ಗೊತ್ತೆ? ಕಣ್ಣು ತನ್ನನ್ನು  ತಾನು ನೋಡಿಯೇ ಇಲ್ಲ! ಚರ್ಮಕ್ಕೆ ಸ್ಪರ್ಶಾನುಭೂತಿ ಬೇಕೆಂದರೆ ಮತ್ತೊಂದರ ಸಂಪರ್ಕ ಬೇಕೇಬೇಕು. ನಾಲಗೆಯ ರುಚಿ ಸ್ವತಃ ನಾಲಗೆಗೆ ಗೊತ್ತಿಲ್ಲ. ಹೀಗೆ ಐದು ಇಂದ್ರಿಯಗಳೂ ಒಟ್ಟಿಗೆ ಗ್ರಹಿಸಲಾಗದ ಅನೇಕ ಸಂಗತಿಗಳಿವೆ. ಅದರ ಹುಡುಕಾಟವೇ ಭಾರತದ ಶ್ರೇಷ್ಠತೆಯ ಮೂಲ ವಸ್ತು. ಕೇನೋಪನಿಷತ್ತಿನಲ್ಲಿ ಋಷಿಗಳು ಸ್ಪಷ್ಟಪಡಿಸುತ್ತಾರೆ – “ಅಲ್ಲಿಗೆ ಕಣ್ಣು ಹೋಗಲಾರದು, ಮಾತೂ ಇಲ್ಲ. ಮನಸ್ಸೂ ಹೋಗುವುದಿಲ್ಲವಾದ್ದರಿಂದ ಇದನ್ನು ಹೇಗೆ ತಿಳಿಸಿಕೊಡಬೇಕೋ ಗೊತ್ತಾಗುತ್ತಿಲ್ಲ” […]

ವೇದ ಪುರಾಣಗಳಲ್ಲಿ ಸೃಷ್ಟಿ ಕಥನದ ಅನಾವರಣ ~ ವಿಶ್ವಗುರು 9

Monday, May 25th, 2015

‘ಭಾರತ್ ಏಕ್ ಖೋಜ್’ ಧಾರಾವಾಹಿ ನೋಡಿದ್ದು ನೆನಪಿದೆಯಾ? ಆವಾಹರ್ ಲಾಲ್‍ರ ಡಿಸ್ಕವರಿ ಆಫ್ ಇಂಡಿಯಾವನ್ನು ತೆರೆಗೆ ತರುವ ದೂರದರ್ಶನದ ಪ್ರಯತ್ನ ಅದು, ನನಗೆ ಧಾರಾವಾಹಿಯಲ್ಲಿ ನೋಡಿದ ಕಥಾನಕಗಳೆಲ್ಲ ಮರೆತುಹೋಗಿವೆ. ಆದರೆ ಅದರ ಶೀರ್ಷಿಕೆ ಗೀತೆ ಮಾತ್ರ ಕಿವಿಯಲ್ಲಿ ಮತ್ತೆಮತ್ತೆ ಗುಂಯ್‍ಗುಡುತ್ತದೆ. “ವಹಾ ಸತ್ ಭೀ ನಹೀ ಥಾ, ಅಸತ್ ಭೀ ನಹೀ.. ಅಂತರಿಕ್ಷ್ ಭೀ ನಹೀ, ಆಕಾಶ್ ಭೀ ನಹೀ ಥಾ” (ಅಲ್ಲಿ ಸತ್ಯವೂ ಇರಲಿಲ್ಲ, ಅಸತ್ಯವೂ ಇರಲಿಲ್ಲ. ಅಂತರಿಕ್ಷವೂ ಇಲ್ಲ, ಆಕಾಶವೂ ಇರಲಿಲ್ಲ) ಎನ್ನುವ ಈ […]

ಸರಸ್ವತಿಯನ್ನು ಹರಾಕಿತಿ ಎಂದವರ ಕಿತಾಪತಿ : ವಿಶ್ವಗುರು ಅಂಕಣ ~ 8

Monday, May 18th, 2015

ಯಾವಾಗಲಾದರೂ ಬದರೀನಾಥಕ್ಕೆ ಹೋಗಿದ್ದೀರಾ? ದೇವರ ದರ್ಶನ ಮಾಡಿಕೊಂಡು ಸ್ವಲ್ಪ ಗುಡ್ಡದೆಡೆಗೆ ಹೋದರೆ ನೂರು – ನೂರಿಪ್ಪತ್ತು ಅಡಿ ಅಂತರದಲ್ಲಿ ಎರಡು ಪುಟ್ಟ ಗುಹೆಗಳು. ಒಂದರಲ್ಲಿ ವ್ಯಾಸರು, ಮತ್ತೊಂದರಲ್ಲಿ ಗಣೇಶ ಕುಳಿತಿರುತ್ತಿದ್ದರಂತೆ. ವ್ಯಾಸರು ಹೇಳುವ ಮಹಾಭಾರತ ಕಥನವನ್ನು ಗಣೇಶ ಬರೆದುಕೊಳ್ಳುತ್ತಿದ್ದನಂತೆ. ಇವೆರಡರ ಜೊತೆಗೇ ಅಲ್ಲಿ ಹುಟ್ಟಿ, ಭೋರ್ಗರೆದು ಕಾಣೆಯಾಗಿಬಿಡುವ ನೀರಿನ ಸ್ರೋತವೊಂದಿದೆ. ಅದನ್ನು ಸರಸ್ವತಿ ಅಂತಾರೆ. ಆಕೆಗೆ ಹರಿವಿನ ಸದ್ದು ಕಡಿಮೆ ಮಾಡಿಕೊಳ್ಳುವಂತೆ ಕೇಳಿಕೊಂಡರೂ ಆಕೆ ಮನ್ನಿಸದೆ ಹೋದಾಗ ಲುಪ್ತವಾಗಿ ಹೋಗೆಂದು ಶಾಪ ಕೊಟ್ಟಿದ್ದನಂತೆ ಗಣಪ. ಅಂದಿನಿಂದ ಆಕೆ […]

ವಾಸ್ತವ ಇತಿಹಾಸವನ್ನು ಒಪ್ಪಿಕೊಳ್ಳಲೇಕೆ ಹಿಂಜರಿಕೆ!?

Sunday, May 10th, 2015

ಆನೆಗೆ ಮೂರೇ ಕಾಲು ಎಂದು ನಂಬೋದು, ಅನಂತರ ಕಾಡಿನಲ್ಲಿ ಆನೆಯ ಜಾಡನ್ನು ಹಿಡಿದು ಪ್ರಯತ್ನಪೂರ್ವಕವಾಗಿ ಮೂರು ಮೂರೇ ಕಾಲುಗಳನ್ನು ಗುರುತಿಸೋದು. ಕೊನೆಗೊಮ್ಮೆ ಯಾರಾದರೂ ನಾಲ್ಕನೇ ಕಾಲನ್ನು ತೋರಿಸಿದರೆ ಒಂದೋ ಆ ವಾದವನ್ನೆ ತಳ್ಳಿ ಹಾಕುವುದು ಅಥವಾ ಅದೊಂದು ರೋಗಿಷ್ಠ ಆನೆ ಎಂದುಬಿಡೋದು. ಏಕೆಂದರೆ ಆನೆಗೆ ಮೂರೇ ಕಾಲು ಎಂಬ ನಂಬಿಕೆ ಅಷ್ಟರೊಳಗೆ ಸತ್ಯವೆಂದು ಒಪ್ಪಿಗೆಯಾಘಿಬಿಟ್ಟಿರುತ್ತದೆ! ಭಾರತದ ಇತಿಹಾಸ ಕುರಿತಂತೆಯೂ ಇದೇ ರೀತಿಯ ಅಪದ್ಧಗಳು ನಡೆದುಹೋಗಿವೆ. ಆರ್ಯರು ಆಕ್ರಮಣಕಾರರೆಂದು ನಂಬಿದರು. ಸಿಕ್ಕ ಸಾಕ್ಷ್ಯಗಳನ್ನು ಈ ನಂಬಿಕೆಗೆ ಹೊಂದಿಸಲು ಹರ […]

ಸ್ವಂತ ಮನೆಯೊಳಗೆ ನಾವೇ ಪರಕೀಯರಾ? ~ ವಿಶ್ವಗುರು – ೬

Monday, May 4th, 2015

ಆರ್ಯರ ಆಕ್ರಮಣ ಸಿದ್ಧಾಂತವನ್ನು ಇಂದಿನ ಜನಜೀವನ ಎಳ್ಳಷ್ಟೂ ಸಮರ್ಥಿಸುವುದಿಲ್ಲ. ದ್ರವಿಡ ವಾದದ ಆಧಾರದ ಮೇಲೆ ಪ್ರತ್ಯೇಕತೆಯ ಸೌಧ ಕಟ್ಟಿ, ರಾಜಕಾರಣದ ಬೇಳೆ ಬೇಯಿಸಿಕೊಂಡ ಕೆಲವರು ಅನಿವಾರ್ಯಕ್ಕೆ ಬಸುರಾಗುತ್ತಿದ್ದಾರೆ ಬಿಟ್ಟರೆ, ಇದು ಸಹಜ ಪ್ರಕ್ರಿಯೆಯಲ್ಲ. ಜಗತ್ತು ಕ್ರಿ.ಪೂ.4004ರ ಅಕ್ಟೋಬರ್ 23 ಬೆಳಗ್ಗೆ ಒಂಭತ್ತು ಗಮಟೆಗೆ ಸರಿಯಾಗಿ ಹುಟ್ಟಿತು. ಹೀಗೆ ಹೇಳಿದ್ದು ಯಾವುದೇ ವಿಜ್ಞಾನಿಯೂ ಅಲ್ಲ, ಭಾರತದ ಜ್ಯೋತಿಷಿಯೂ ಅಲ್ಲ. ಇದು ಬೈಬಲ್ ನೊಳಗಿರುವ ನಂಬಿಕೆ. ಜಗತ್ತಿನ ಇತಿಹಾಸವೆಲ್ಲ ಇದಕ್ಕೆ ಅನುಗುಣವಾಗಿಯೇ ಇರಬೇಕೆಂದು ಪಶ್ಚಿಮದ ಸಾಹಿತಿಗಳೂ ಕೆಲವು ವಿಜ್ಞಾನಿಗಳೂ ನಂಬುತ್ತಾರೆ. […]

ವಿಶ್ವ ಗುರು ~ 5; ಸ್ವಾರ್ಥಕ್ಕಾಗಿ ಸ್ವಾಭಿಮಾನವನ್ನೆ ಅಡವಿಟ್ಟ ಮಹಾಶಯ

Monday, April 27th, 2015

ಬ್ರಿಟೀಷರು ಬಲು ಬುದ್ದಿವಂತರು. ಅವರು ಪಕ್ಕಾ ವ್ಯಾಪಾರಿಗಳು ಕೂಡ. ಹೀಗಾಗಿ ಯಾವುದನ್ನು, ಯಾರನ್ನು, ಯಾವಾಗ ಎಷ್ಟೆಷ್ಟು ಬಳಸಿಕೊಳ್ಳಬೇಕೆಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು; ಗೊತ್ತಿದೆ. ಮ್ಯಾಕ್ಸ್ ಮುಲ್ಲರ್ ಅನುವಾದಕನಾಗಿ ಬಂದೊಡನೆ ಅವನ ಹೆಸರನ್ನು ಖ್ಯಾತಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಿದರು. ಅನೇಕ ಮತಪ್ರಚಾರಕರು ಬಿಡಿ, ಸಾಮಾನ್ಯ ಜನರೂ ಕೂಡ ಆನಂದ ತುಂದಿಲರಾದರು. ಹಿಂದೂಗಳನ್ನು ಕ್ರಿಸ್ತನ ಬಾಹುಗಳಿಗೆಳೆದುತರುವ ದೇವದೂತನೇ ಬಂದಿದ್ದಾನೆಂದುಕೊಂಡರು. ಮಿಶನರಿಗಳ ಪ್ರಚಾರದ ಭರಾಟೆ ಹಾಗಿತ್ತು. ಹೀಗಾಗಿ ಈ ವ್ಯಕ್ತಿಗೆ ಸಾಧ್ಯವಾದಷ್ಟೂ ಗೌರವ-ಪ್ರೋತ್ಸಾಹಗಳನ್ನು ಕೊಡುವುದು ಕರ್ತವ್ಯವೆಂದು ಯೂರೋಪ್ ಭಾವಿಸಿಬಿಟ್ಟಿತ್ತು. ಮ್ಯಾಕ್ಸ್ ಮುಲ್ಲರ್ […]

ಭಾರತ – ಜರ್ಮನಿಯ ಅಂತಸ್ಸಂಬಂಧ ~ ವಿಶ್ವಗುರು ೪

Monday, April 20th, 2015

ಮೆಕಾಲೆ ಭಾರತಕ್ಕೆ ಬಂದಿದ್ದೇ ಇಲ್ಲಿನ ಜನರ ನಂಬುಗೆಗಳನ್ನು ಅಳ್ಳಕಗೊಳಿಸಿ, ಧರ್ಮ ವಿಮುಖರನ್ನಾಗಿ ಮಾಡಿ ಶಾಶ್ವತವಾಗಿ ಕ್ರಿಸ್ತಾನುಯಾಐಇಗಳಾಗುವಂತೆ ಮಾಡಲು. ಆ ಮೂಲಕ ಬ್ರಿಟಿಷರ ಚಿರ ದಾಸ್ಯದಲ್ಲಿ ಬಂಧಿಯಾಗಿಸಲು. ಅವನ ಈ ಕೆಲಸ ಸುಗಮವಾಗಬೇಕೆಂದರೆ ಭಾರತೀಯರ ಚಿಂತನೆಯ ಮೂಲಾಧಾರವಾದ ವೇದೋಪನಿಷತ್ತುಗಳ ವ್ಯಾಖ್ಯಾನವನ್ನೆ ಬದಲಿಸುವ ಅಗತ್ಯವಿತ್ತು. ಈ ಕೆಲಸಕ್ಕೆ ಸಾಥ್ ನೀಡಿದ್ದು ಮ್ಯಾಕ್ಸ್ ಮುಲ್ಲರ್. ಕಳೆದ ಸಂಚಿಕೆಗಳಲ್ಲಿ ಈ ಬಗ್ಗೆ ಓದಿದ್ದೀರಿ. ಮ್ಯಾಕ್ಸ್ ಮುಲ್ಲರನ ತವರು ಜರ್ಮನಿ ಭಾರತದೊಂದಿಗೆ ಯಾವ ಸಂಬಂಧ ಇಟ್ಟುಕೊಂಡಿತ್ತು, ಈಗಲೂ ಇಟ್ಟುಕೊಂಡಿದೆ ಎನ್ನುವುದು ಈ ಬಾರಿಯ ತಿರುಳು… ಅಂದೂ […]

ವಿವೇಕಾನಂದರು ಗೋಮಾಂಸ ತಿನ್ತಿದ್ದರಾ? ಸತ್ಯವೆಷ್ಟು, ಸುಳ್ಳೆಷ್ಟು?

Sunday, April 19th, 2015

ಗೋಮಾಂಸ ಭಕ್ಷಣೆಯನ್ನು ಸಮರ್ಥಿಸಿಕೊಳ್ಳಲಿಕ್ಕಾಗಿ ವಿವೇಕಾನಂದರು ಗೋಮಾಂಸ ತಿನ್ನುತ್ತಿದ್ದರು ಎಂದು ನೇರ ಕಂಡವರ ಹಾಗೆ ಮಾತನಾಡುವ ಮಂದಿ ಅದಕ್ಕೆ ಪುರಾವೆಗಳನ್ನು ಕೊಡಬಲ್ಲರೆ? ವಿವೇಕಾನಂದರು ಗೋಮಾಂಸದ ಬಗ್ಗೆ ತಳೆದಿದ್ದ ನಿಲುವು ಎಂಥದಿತ್ತು ಅನ್ನುವುದಕ್ಕೆ ಅವರ ಕೃತಿಶ್ರೇಣಿ ಹಾಗೂ ಅವರ ಶಿಷ್ಯರ ಪುಸ್ತಕಗಳಲ್ಲಿ ಬರುವ ವಿವರಗಳ ದಾಖಲೆಸಹಿತ ಲೇಖನ ಈ   govu final – ಕೊಂಡಿಯಲ್ಲಿದೆ…

ವಿವೇಕಾನಂದರು ಗೋಮಾಂಸ ತಿನ್ತಿದ್ದರಾ? ಸತ್ಯವೆಷ್ಟು, ಸುಳ್ಳೆಷ್ಟು?

Sunday, April 19th, 2015

ಗೋಮಾಂಸ ಭಕ್ಷಣೆಯನ್ನು ಸಮರ್ಥಿಸಿಕೊಳ್ಳಲಿಕ್ಕಾಗಿ ವಿವೇಕಾನಂದರು ಗೋಮಾಂಸ ತಿನ್ನುತ್ತಿದ್ದರು ಎಂದು ನೇರ ಕಂಡವರ ಹಾಗೆ ಮಾತನಾಡುವ ಮಂದಿ ಅದಕ್ಕೆ ಪುರಾವೆಗಳನ್ನು ಕೊಡಬಲ್ಲರೆ? ವಿವೇಕಾನಂದರು ಗೋಮಾಂಸದ ಬಗ್ಗೆ ತಳೆದಿದ್ದ ನಿಲುವು ಎಂಥದಿತ್ತು ಅನ್ನುವುದಕ್ಕೆ ಅವರ ಕೃತಿಶ್ರೇಣಿ ಹಾಗೂ ಅವರ ಶಿಷ್ಯರ ಪುಸ್ತಕಗಳಲ್ಲಿ ಬರುವ ವಿವರಗಳ ದಾಖಲೆಸಹಿತ ಲೇಖನ ಈ   govu final – ಕೊಂಡಿಯಲ್ಲಿದೆ…