ವಿಭಾಗಗಳು

ಸುದ್ದಿಪತ್ರ


 

ಹಾದಿ ತಪ್ಪಾದರೆ ಎದ್ದ ಕುಂಡಲಿನಿಯೇ ಬೀಳಿಸಬಹುದು!!

Monday, August 3rd, 2015

1996 ರ ವಿಶ್ವಕಪ್ ಕ್ರಿಕೆಟ್ ನೆನಪಿದೆಯಾ? ಕ್ವಾರ್ಟ್‍ರ್ ಫೈನಲ್ ಪಂದ್ಯ. ಪಾಕಿಸ್ತಾನದೊಂದಿಗೆ ಭಾರತದ್ದು. ಬೆಂಗಳೂರಿನಲ್ಲಿ ನಡೆದಿತ್ತು. ಅಮೀರ್ ಸೋಹೈಲ್ ವೆಂಕಟೇಶ್ ಪ್ರಸಾದರ ಚೆಂಡನ್ನು ಬೌಂಡರಿಗಟ್ಟಿ ‘ ಹೇಗಿದೆ?’ ಎಂದು ವಿಕೃತ ನಗೆ ನಕ್ಕಿದ್ದರು. ಅದು ವೆಂಕಟೇಶ ಪ್ರಸಾದರನ್ನು ಅದ್ಯಾವ ಪರಿ ಕೆಣಕಿತ್ತೆಂದರೆ, ಇದ್ದ ಬದ್ದ ಶಕ್ತಿಯನ್ನೆಲ್ಲಾ ಕ್ರೋಢೀಕರಿಸಿ ಆತ ಎಸೆದ ಮರು ಚೆಂಡು ವಿಕೇಟನ್ನು ಉರುಳಿಸಿ ಅಮೀರ್ ಸೋಹೈಲ್‍ರನ್ನು ಪೆವಿಲಿಯನ್‍ಗಟ್ಟಿತ್ತು. ಎಲ್ಲಾ ಕ್ರಿಕೆಟ್ ಪ್ರೇಮಿಗಳಲ್ಲೂ ಮಿಂಚು ಹರಿದಿತ್ತು. ಅದು ವೆಂಕಿ ಜೀವನದ ‘ಬೆಸ್ಟ್ ಬಾಲ್’. ಈ ರೀತಿಯ […]

ಕುಂಡಲಿನಿ, ನಮ್ಮೊಳಗಿನ ಸುಪ್ತ ಶಕ್ತಿ ಸಂಜೀವಿನಿ

Monday, July 27th, 2015

ಶಿವನಿಗೆ ಮೂರನೇ ಕಣ್ಣು ಇರೋದು ಕಲಾವಿದನ ಕಲ್ಪನೆಯಾ ಅಥವಾ ಹಾಗೊಂದು ಸಾದ್ಯತೆ ಇದೆಯಾ? ಹೌದು, ಪುರಾಣದ ಕಥೆಗಳು ನಮ್ಮನ್ನು ಪ್ರಗತಿಂದ ದೂರ ತಳ್ಳಿಬಿಡುವ ಭಯ ಯಾವಾಗಲೂ ಇದ್ದದ್ದೇ. ಆದರೆ ಪ್ರಾಮಾಣಿಕವಾಗಿ ಹೇಳಿ, ಅನೇಕ ಬಗೆಯ ಅತೀಂದ್ರಿಯ ಶಕ್ತಿಗಳು ನಮಗೂ ಇಲ್ಲವೇ? ಉದಾಹರಣೆಗೆ ಕೆಲವು ಅಪರೂಪದ ಘಟನೆಗಳು ಆಗಾಗ ನಮ್ಮ ಅನುಭವಕ್ಕೆ ಬರುತ್ತಲೇ ಇರುತ್ತವೆ. ಯಾರನ್ನೋ ಉತ್ಕಟವಾಗಿ ನೆನಪಿಸಿಕೊಳ್ಳುತ್ತಿರುತ್ತೇವೆ, ಅವರ ಫೋನ್ ಕಾಲ್ ಬರುತ್ತೆ ಅಥವಾ ಅವರೇ ಹಾಜರಾಗಿಬಿಡ್ತಾರೆ. ಆಗೆಲ್ಲ ನಿಮಗೆ ನೂರು ವರ್ಷ ಆಯಸ್ಸು ಅಂತೀವಿ. ದೂರದೂರಿನಲ್ಲಿ […]

ಇದು ಬೌದ್ಧಿಕ ಕ್ಷತ್ರಿಯರ ಯುದ್ಧ

Tuesday, July 21st, 2015

ಅಮೇರಿಕಾದ ಪ್ರಿಸ್ನಟನ್ ನ ಶಾಲೆ. ಅಲ್ಲಿನ ಶಿಕ್ಷರರೊಬ್ಬರು ದೆಹಲಿ ಮೂಲದ ಹಿಂದೂವೊಬ್ಬರನ್ನು ವಿವೇಕಾನಂದರು ಮತ್ತು ರಾಮಕೃಷ್ಣರ ಕುರಿತಂತೆ ಮಕ್ಕಳಿಗೆ ಪಾಠ ಮಾಡಬಾರದೆಂದು ನುಡಿದರು.ಆಶ್ಚರ್ಯಚಕಿತರಾದ ಆತ ಹುಬ್ಬೇರಿಸಿ ಏಕೆಂದು ಕೇಳಿದರೆ ಅವರು ಸಲಿಂಗಕಾಮಿಗಳಾಗಿದ್ದರಂತೆ ಎಂಬ ಉತ್ತರ ಬಂತು.ಬೆಚ್ಚಿ ಬಿದ್ದ ಭಾರತೀಯ ಮೂಲದ ವ್ಯಕ್ತಿ ಹಾಗೆ ಹೇಳಿದ್ದು ಯಾರೆಂದು ಕೇಳಿದ್ದಕ್ಕೆ ಅವರು ಆತನ ಕೈಗೊಂದು ಪುಸ್ತಕವಿತ್ತರು.ಅದು ಜೆಫ್ರಿ ಕೃಪಾಲ್ ಬರೆದಿದ್ದ ‘ಕಾಳಿಯ ಮಕ್ಕಳು’. ಕೃತಿಯುದ್ದಕ್ಕೂ ವಿಕೃತಿಗಳೇ ತುಂಬಿದ್ದುದನ್ನು ಕಂಡು ಅಸಹ್ಯದಿಂದ ಬೆಂದು ಹೋದ ಆತ ಅಮೇರಿಕಾದ ಬುದ್ಧಿವಂತರ ನಡುವೆ ತಿರುಗಾಡುತ್ತಿರುವ […]

ಭಾರತೀಯ ಚಿಂತನೆಗಳು ಜಗವನ್ನೆ ಆಳಲಾರಂಭಿಸಿವೆ…!

Monday, July 20th, 2015

ರಮಣ ಮಹರ್ಷಿಗಳ ಬದುಕಿನ ಈ ಘಟನೆ ಬಲು ಜನಜನಿತ. ಅದೊಮ್ಮೆ ಅವರು ಭಕ್ತರೊಂದಿಗೆ ಮಾತಾಡುತ್ತ ಕುಳಿತಿದ್ದರು. ಅವರ ತೋಳಿನ ಹುಣ್ಣಿಗೆ ಚಿಕಿತ್ಸೆ ನೀಡಲೆಂದು ಅದೇ ಹೊತ್ತಿಗೆ ವೈದ್ಯರು ಬಂದರು. ಚಿಕಿತ್ಸೆ ಸಮಯದಲ್ಲಿ ತೀವ್ರ ನೋವು ಉಂಟಾಗುತ್ತದೆಯಾದ್ದರಿಂದ ಅರೆವಳಿಕೆ ಮದ್ದು ಕೊಡುವುದು ಒಳ್ಳೆಯದೆಂದು ವೈದ್ಯರ ಅಭಿಮತ. ರಮಣರು ನಿರಾಕರಿಸಿದರು. “ತೋಳಿನಿಂದ ಮನಸ್ಸನ್ನು ತೆಗೆದುಬಿಡುತ್ತೇನೆ. ಆಮೇಲೆ ಏನು ಬೇಕಾದರೂ ಮಾಡಿಕೊಳ್ಳಿ” ಎಂದು ಒಂದು ನಿಮಿಷ ಕಣ್ಮುಚ್ಚಿ ತೆರೆದರು. ಭಕ್ತರೊಂದಿಗೆ ಮಾತುಕತೆ ಮುಂದುವರೆಯಿತು. ಅತ್ತ ವೈದ್ಯರು ತಮ್ಮ ಉಪಚಾರ ಶುರು ಮಾಡಿದರು. […]

ಆಲೋಚನೆಗಳ ಹಿಂದಿನ ಚಿತ್ತ ವಿಚಿತ್ರ

Wednesday, July 15th, 2015

ನಾನು ಖಂಡಿತವಾಗಿ ವಿಜ್ಞಾನದ ವಿರೋಧಿಯಲ್ಲ. ಆದರೆ ಎಲ್ಲ ಪ್ರಶ್ನೆಗೂ ಭೌತಿಕ ವಿಜ್ಞಾನ ಉತ್ತರಿಸಬಲ್ಲದು ಎಂಬುದನ್ನು ಒಪ್ಪಲಾರೆ ಅಷ್ಟೇ. ಮತ್ತೆ ಮತ್ತೆ ಒತ್ತಿ ಹೇಳುತ್ತೇನೆ; ಯಾವ ಪ್ರಶ್ನೆಗೆ ವಿಜ್ಞಾನ ಉತ್ತರಿಸುವುದನ್ನು ನಿಲ್ಲಿಸುವುದೋ, ಅಲ್ಲಿಂದಾಚೆಗೆ ಅಧ್ಯಾತ್ಮ ಶುರುವಾಗುತ್ತದೆ. ಸುಮ್ಮನೆ ಚರ್ಚೆ ಯಾಕೆ? ಸೈನಿಕರಾಗಿದ್ದ ಹಜಾರೆ, ಜೀವನದಲ್ಲಿ ನೊಂದು ಬೆಂದು ಆತ್ಮಹತ್ಯೆಯ ತಯಾರಿಯಲ್ಲಿದ್ದಾಗ ವಿವೇಕಾನಂದರ ಮಾತಿನ ಸಾಲುಗಳಿಂದ ಪ್ರಭಾವಿತರಾಗಿ ಬದುಕು ಬದಲಿಸಿಕೊಂಡರು – ಹಾಗಂತೆ ಓದಿದ್ದೇವೆ, ಅಣ್ಣಾ ಬಾಯಿಂದಲೂ ಕೇಳಿದ್ದೇವೆ. ಈಗ ಹೇಳಿ. ಅಣ್ಣಾ ವಿವೇಕಾನಂದರಿಂದ ಪ್ರಭಾವಿತರಾದ ದಿನ ವೈಜ್ಞಾನಿಕವಾಗಿ ಆದದ್ದೇನು? ಅಣ್ಣಾ ದೇಹದಲ್ಲಿ ಆಮ್ಲಜನಕ ಹೆಚ್ಚಾಯ್ತೆ? ಜಲಜನಕವೋ? ಪ್ರಭಾವವಾಗಿದ್ದು ಇಂದ್ರಿಯಗಳ ಮೇಲೋ, […]

ಒಮ್ಮೆ ಸತ್ತ ಮೇಲೆ ಮತ್ತೆ ಹುಟ್ಟುತ್ತೇವಾ?

Monday, June 29th, 2015

‘ಅಧ್ಯಾತ್ಮ ಚರ್ಚೆ’ ಅಂತೇನಾದರೂ ಅಂದರೆ ಅನೇಕರು ಆಗಿಂದಾಗ್ಯೆ ಕಿವಿ ಕಣ್ಣುಗಳನ್ನು ಮುಚ್ಚಿಕೊಂಡು ಜಾಗ ಖಾಲಿ ಮಾಡಿಬಿಡುತ್ತಾರೆ. ಆದರೆ ಚರ್ಚೆ ಮಾಡಲಿ, ಬಿಡಲಿ.. ಆತ್ಮದಿಂದಲೇ ಜಗತ್ತು ವ್ಯಾಪ್ತಗೊಂಡಿರುವುದನ್ನು ಮರೆತೇಬಿಡುತ್ತಾರೆ. ಒಂದೇ ಒಂದು ನಿಮಿಷ ಸುಮ್ಮನೆ ಕಣ್ಮುಚ್ಚಿ ಕುಳಿತುಕೊಂಡು ನಾನು ಹೇಳುವ ವಿಚಾರಗಳ ಕುರಿತಂತೆ ಆಲೋಚಿಸಿ. ನೀವು ಖಂಡಿತ ಅಚ್ಚರಿಗೊಳಗಾಗುವಿರಿ. ನಮ್ಮ ಸುತ್ತಲೂ ನಡೆಯುವ ಅನೇಕ ಸಂಗತಿಗಳನ್ನು ವಿಜ್ಞಾನ ಆಕಸ್ಮಿಕವೆಂದು ಕರೆದು ಬದಿಗಿಟ್ಟುಬಿಟ್ಟಿದೆ. ಉದಾಹರಣೆಗೆ, ಭೂಮಿಯೇ ಮೊದಲಾದ ಗ್ರಹಗಳು ಸೂರ್ಯನ ಸುತ್ತ ಸುತ್ತುವುದಲ್ಲ ಹಾಗೆ ಎಲ್ಲ ಗ್ರಹಗಳನ್ನು ಅಧೀನದಲ್ಲಿ ಇಟ್ಟುಕೊಂಡು […]

ಧೀಶಕ್ತಿ ಪ್ರಚೋದಕನಿಗೆ ಕೋಟಿ ನಮಸ್ಕಾರ…

Monday, June 22nd, 2015

“ಬೆಳಗ್ಗೆ ಎಷ್ಟು ಗಂಟೆಗೆ ಏಳಬೇಕು?” ಹಾಗಂತರಾಮಕೃಷ್ಣಆಶ್ರಮದ ಸ್ವಾಮಿ ಪುರುಷೋತ್ತಮಾನಂದರನ್ನು ಭಕ್ತರೊಬ್ಬರು ಕೇಳಿದರಂತೆ. ಸ್ವಾಮೀಜಿತಮ್ಮ ಎಂದಿನ ಧಾಟಿಯಲ್ಲಿ, “ಎಷ್ಟು ಗಂಟೆಗಾದರೂ ಎದ್ದೇಳಿ, ಎದ್ದ ಮೇಲೆ ಪೂರ್ಣವಾಗಿಎದ್ದಿರಿ”ಎಂದಿದ್ದರಂತೆ. ಅದೂ ಸತ್ಯವೇ. ಏಳುವುದು ಅಂದರೆ ಹಾಸಿಗೆ ಬಿಟ್ಟು ಏಳುವುದು ಅಂತಲ್ಲ. ದೇಹದ ಪ್ರತಿಯೊಂದುಜೀವಕೋಶವೂ ಚೈತನ್ಯಶೀಲಗೊಳ್ಳುವುದು ಎಂದರ್ಥ. ಮಲಗುವ ಕೋಣೆಯನ್ನುಕತ್ತಲ ಕೂಪವಾಗಿಸಿ, ಕೆಲಸದಕಚೇರಿಯನ್ನು ಸದಾ ಬೆಳಕಿನ ಗೋಳವಾಗಿಸಿ ಹಗಲು ರಾತ್ರಿಗಳ ಕಲ್ಪನೆಯನ್ನೇ ಕಳೆದುಕೊಂಡಿರುವ ನಮಗೆ ಋಷಿ ಮುನಿಗಳು ಉಲ್ಲೇಖ ಮಾಡಿರುವ ಅನೇಕ ಸಂಗತಿಗಳನ್ನು ಅರ್ಥೈಸಿಕೊಳ್ಳುವುದು ಬಿಡಿ, ಕಲ್ಪಿಸಿಕೊಳ್ಳುವುದೂ ಅಸಾಧ್ಯ. ಧ ನಾವು ಬ್ರಾಹ್ಮೀ […]

ನಾಶದೊಳಗೇ ಮರುಹುಟ್ಟಿನ ಬೀಜ ಅಡಗಿದೆ!

Wednesday, June 17th, 2015

ಕೊಲ್ಲುವವನಿಗೆ ಅದೊಂದು ಚಟ. ಮೊದಮೊದಲು ಶತ್ರುಗಳನ್ನು ಹುಡುಹುಡುಕಿ ಕೊಲ್ಲುತ್ತಾನೆ. ಹಾಗೆ ಗುರುತಿಸಬಲ್ಲವರು ಖಾಲಿಯಾದ ಮೇಲೆ ಎದುರಿಗಿರುವವರನ್ನೆ ಶತ್ರುಗಳೆಂದು ಭಾವಿಸುತ್ತಾನೆ. ಈಗ ಅವರ ಮಾರಣ ಹೋಮ. ತಾನು ಮಾಡುವ ಕೊಲೆಗೆ ಕಾರಣ ಹೇಳಿದರಾಯ್ತು. ಹೌದು. ನೀವು ಸರಿಯಾಗಿಯೇ ಊಹಿಸಿದಿರಿ. ಜಾಗತಿಕವಾಗಿ ಇಸ್ಲಾಮ್ ಈಗ ಎರಡನೆ ಹಂತ ತಲುಪಿಬಿಟ್ಟಿದೆ. ಮೊದಲೆಲ್ಲ ಅವರಿಗೆ ಸಂಖ್ಯೆ ವೃದ್ಧಿಸಿಕೊಳ್ಳುವ ಹಠವಿತ್ತು. ಅದಕ್ಕಾಗಿ ತಮ್ಮೊಡನೆ ಸೇರದವರನ್ನು ಕೊಂದರು. ಕೊಲ್ಲುವುದು ಚಟವಾದ ಮೇಲೆ ಈಗ ತಮ್ಮವರದೇ ಸಾವಿನ ದಾಹ ಶುರುವಾಯ್ತು. ಅಲ್ ಕೈದಾ, ಒಸಾಮ ಬಿನ್ ಲಾದೆನ್‍ನ […]

ಸರ್ವಾಂತರ್ಯಾಮಿ, ಸರ್ವಪ್ರೇರಕ ಸೂರ್ಯ

Monday, June 15th, 2015

ಕಾಲ ಗಣನೆಯ ಚರ್ಚೆ ಬಂದಾಗ ಜಗತ್ತಿನ ಯಾವ ವಿಜ್ಞಾನಿಯೂ ಭಾರತವನ್ನು ಕಡೆಗಣಿಸುವುದು ಸಾಧ್ಯವೇ ಇಲ್ಲ. ಈ ವಿಚಾರದಲ್ಲಿ ಜಗತ್ತಿನ ಆಧುನಿಕ ಮತಗಳೂ, ಮತ ಗ್ರಂಥಗಳೂ ಹಿಂದೂ ಚಿಂತನೆಗಳಿಗಿಂತ ಬಲು ಹಿಂದು! ಅನುಮಾನವೇ ಇಲ್ಲ. ‘ವಿಶ್ವದ ಕೇಂದ್ರ ಭೂಮಿ. ಸೂರ್ಯನೂ ಇದೇ ಭೂಮಿಯನ್ನು ಸುತ್ತುತ್ತಾನೆ’ ಹಾಗಂತ ಸೆಮೆಟಿಕ್ ಮತಗಳು ನಂಬಿದ್ದವು.  ದೇವರ ಮಕ್ಕಳು, ಪ್ರವಾದಿಗಳು ಇಲ್ಲಿ ಹುಟ್ಟುತ್ತಾರೆಂದರೆ ಇದೇ ಸರ್ವಶ್ರೇಷ್ಠವಾಗಿರಬೇಕೆಂಬ ಸಹಜ ಸಿದ್ಧಾಂತ ಅದು. ಜೊತೆಗೆ ಬೆಳಗಾಗಿ ಎದ್ದಾಗ ಪೂರ್ವಕ್ಕೆ ಕಾಣುವ ಸೂರ್ಯ ಸಂಜೆಯಾಗುವಾಗ ಪಶ್ಚಿಮದಲ್ಲಿ ಅಸ್ತಂಗತನಾಗುತ್ತಾನೆ. ಸಾಮಾನ್ಯನಾದ […]

ನಮೋ ಬ್ರಿಗೇಡಿನ ಆ ಒಂದು ವರ್ಷದ ನೆನಪು

Wednesday, June 10th, 2015

ನರೇಂದ್ರ ಮೋದಿ ಪ್ರಧಾನಿ ಗದ್ದುಗೆಯಲ್ಲಿ ಕೂತು ಬರೋಬ್ಬರಿ ಒಂದು ವರ್ಷವಾಯ್ತು. ಎಲ್ಲರೂ ಒಂದು ವರ್ಷದ ಅವರ ಸಾಧನೆ, ತಿರುಗಾಟ, ಕೊರತೆ, ಗೆದ್ದಿದ್ದು – ಎಡವಿದ್ದು ಎಲ್ಲವನ್ನೂ ವಿಶ್ಲೇಷಿಸುತ್ತಿದ್ದಾರೆ. ವರ್ಷ ಏಕ, ಸಾಧನೆ ಅನೇಕ ಎನ್ನುವ ಹೆಸರಲ್ಲಿ ಕೇಂದ್ರ ಸರ್ಕಾರದ ಜಾಹೀರಾತುಗಳು ಎಲ್ಲಡೆ ರಾರಾಜಿಸುತ್ತಿವೆ. ನಾನು ಅವುಗಳನ್ನೆ ಮತ್ತೆ ನಿಮ್ಮ ಮುಂದಿರಿಸಲು ಬಯಸುವುದಿಲ್ಲ. ನನ್ನ ಮನಸ್ಸು ಸುಮಾರು ಎರಡು ವರ್ಷಗಳ ಹಿಂದೋಡುತ್ತದೆ. ಆಗಿನ್ನೂ ಮನಮೋಹನ ಸಿಂಗರು ಅಧಿಕಾರದಲ್ಲಿದ್ದರು. ಹತ್ತು ವರ್ಷಗಳಲ್ಲಿ ಹತ್ತಾರು ಹಗರಣಗಳ ಮೂಲಕ ಈ ಹಿಂದಿನ ಕಾಂಗ್ರೆಸ್ […]