ವಿಭಾಗಗಳು

ಸುದ್ದಿಪತ್ರ


 

ಪಟೇಲರ ಪ್ರತಿಮೆ ನೋಡಿ ಮೈ ಪರಚಿಕೊಳ್ಳುವ ಸರದಿ ಈಗ ಇಂಗ್ಲೆಂಡಿನದ್ದು!

Saturday, November 10th, 2018

ಭಾರತ ಇಂದು ಸಹಾಯಧನ ಪಡೆಯುವ ರಾಷ್ಟ್ರವಾಗಿ ಉಳಿದಿಲ್ಲ. ಬದಲಿಗೆ ಒಟ್ಟಾರೆ ಲೆಕ್ಕ ಹಾಕಿದರೆ ಸಹಾಯ ಕೊಡುವ ರಾಷ್ಟ್ರವಾಗಿ ಬೆಳೆದು ನಿಂತಿದೆ. ಇಂಗ್ಲೆಂಡಿನಿಂದ ಭಾರತ ಸಕರ್ಾರ ಯಾವುದೇ ಹಣವನ್ನು ಸಹಾಯವಾಗಿ ಸ್ವೀಕರಿಸುತ್ತಿಲ್ಲ. ಬದಲಿಗೆ ಸ್ವತಃ ಇಂಗ್ಲೆಂಡು ಭಾರತದ ಸಕರ್ಾರೇತರ ಸಂಸ್ಥೆಗಳಿಗೆ ಹಣಕೊಟ್ಟು ಇಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತದೆ. ಉರಿಯೋದು ಅಂದರೆ ಹೀಗೇ. ಸ್ವಾತಂತ್ರ್ಯದ ಹೊತ್ತಲ್ಲಿ ಬ್ರಿಟನ್ ಅಮೇರಿಕದ ಒತ್ತಡಕ್ಕೆ ಮಣಿದು ಒಲ್ಲದ ಮನಸ್ಸಿನಿಂದಲೇ ನಮ್ಮನ್ನು ಬಿಟ್ಟು ಹೋಗಿತ್ತು. ಆ ಹೊತ್ತಿನಲ್ಲಿ ಇಂಗ್ಲೆಂಡಿನ ಪ್ರಧಾನಿ ಕ್ಲೆಮೆಂಟ್ ಆಟ್ಲಿಯನ್ನು […]

ಸಮಾಜಕ್ಕಾಗಿಯೇ ಬದುಕಿದವರ ಸಾವು ಅದೆಷ್ಟು ರೋಚಕ!

Saturday, November 10th, 2018

ಮೊನ್ನೆ ತಾನೆ ಮಂಗಳೂರಿನಲ್ಲಿ ತಪಸ್ವಿಯೋರ್ವನ ಅಂತ್ಯವಾಯ್ತು. ತ್ಯಾಗ ಮತ್ತು ಸೇವೆಗಳನ್ನೇ ಉಸಿರಾಡುತ್ತಿದ್ದ ಅಪ್ರತಿಮವಾದ ವ್ಯಕ್ತಿ ಆತ. ತನ್ನದೆನ್ನುವುದೇನೂ ಇಲ್ಲ, ಎಲ್ಲವೂ ಸಮಾಜಕ್ಕೇ ಸೇರಿದ್ದು ಎಂಬ ಭಾವನೆಯಿಂದಲೇ ಬದುಕಿನ 8 ದಶಕಗಳನ್ನು ಕಳೆದ ವಾಸುದೇವ್ ಶಣೈ, ಎಲ್ಲರ ಪ್ರೀತಿಯ ವಾಸಣ್ಣ ಕೊನೆಯುಸಿರೆಳೆದರು. ತೀರಿಕೊಳ್ಳುವುದಕ್ಕೂ ಕೆಲವು ವರ್ಷಗಳ ಮುನ್ನ ಅಪಘಾತಕ್ಕೊಳಗಾಗಿ ಕೋಮಾಕ್ಕೆ ಹೋಗಿ ತನ್ನ ಪತ್ನಿಯನ್ನೂ ಗುರುತಿಸಲಾಗದ ಸ್ಥಿತಿಯಲ್ಲಿ ಒಂದು ವರ್ಷಗಳ ಕಾಲ ಇದ್ದರು. ಆನಂತರ ತನ್ನನ್ನು ತಾಯಿಯಂತೆ ನೋಡಿಕೊಂಡ ಪತ್ನಿ ಸುಮತಿ ಅಕ್ಕಳನ್ನು ಗುರುತಿಸಲಾರಂಭಿಸಿದರಲ್ಲದೇ ಆಕೆಯ ಆಜ್ಞೆಗೆ ಪ್ರತಿಸ್ಪಂದಿಸಲಾರಂಭಿಸಿದರು. […]

ಪಟೇಲರ ಪ್ರತಿಮೆಯೆದುರು ನಿಂತು ಬಾಯಿ ಬಡಕೊಂಡವರ ಕಥೆ!

Saturday, November 10th, 2018

ಗುಜರಾತಿನ ಕೇವಡಿಯಾದಲ್ಲಿ 3000 ಕೋಟಿ ರೂಪಾಯಿ ವೆಚ್ಚದಲ್ಲಿ ಅನಾವರಣಗೊಂಡಿರುವ 182 ಮೀಟರ್ ಉದ್ದದ ಸರದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆ ಜಾಗತಿಕ ಮಟ್ಟದಲ್ಲಿ ಗೌರವವನ್ನು ಗಳಿಸಿರುವುದು ಸತ್ಯವಾದರೆ ಇತ್ತ ದೇಶದೊಳಗೆ ಏಳು ದಶಕಗಳಷ್ಟು ಹಳೆಯ ಭಾರತೀಯ ರಾಜಕಾರಣವನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿದೆ. ‘ಸರದಾರ್ ಪಟೇಲರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಅಖಂಡ ಮತ್ತು ಜಾತ್ಯತೀತ ಭಾರತಕ್ಕೋಸ್ಕರ ಬಡಿದಾಡಿದ ದೇಶಭಕ್ತರಾಗಿದ್ದರು. ಅವರಿಗೊಂದು ಪ್ರಬಲ ಇಚ್ಛಾಶಕ್ತಿ ಇತ್ತು. ಅವರಿಗೆ ಕೋಮುವಾದವನ್ನು ಕಂಡರಾಗುತ್ತಿರಲಿಲ್ಲ. ಅವರು ಪ್ರಖರ ಕಾಂಗ್ರೆಸ್ವಾದಿಯಾಗಿದ್ದರು’ ಎಂದು ಟ್ವೀಟ್ ಮಾಡಿದ್ದು ಬೇರೆ ಯಾರೂ […]

ಕಡಿಸಿಕೊಂಡವರಿಗೆ ಮಾತ್ರವೇ ಅದರ ಅನುಭವ!

Saturday, November 10th, 2018

ರಾಷ್ಟ್ರೀಯವಾದಿಗಳು ಮತ್ತೆ ಮುನ್ನೆಲೆಗೆ ಬರುತ್ತಿದ್ದಾರೆ. ರಾಷ್ಟ್ರ ನಾಯಕರುಗಳಿಗೆ ಭಾರತ ಗೌರವ ಕೊಡುವುದಿಲ್ಲವೆಂಬ ಕೂಗು ಅನೇಕ ವರ್ಷಗಳಿಂದ ಕೇಳಿ ಬರುತ್ತಿತ್ತು. ಈಗ ಸದ್ದಡಗುತ್ತಿದೆ. ವಾಸ್ತವವಾಗಿ ಗೌರವ ಕೊಡದೇ ಸತಾಯಿಸುತ್ತಿದ್ದುದು ಭಾರತೀಯರಲ್ಲ, ಕಾಂಗ್ರೆಸ್ಸಿನ ಆಡಳಿತ. ಒಂದು ಪರಿವಾರವನ್ನು ರಕ್ಷಿಸಲೋಸುಗ ಕಾಂಗ್ರೆಸ್ಸು ಉಳಿದೆಲ್ಲ ರಾಷ್ಟ್ರ ಪುರುಷರನ್ನು ನೇಪಥ್ಯಕ್ಕೆ ಸರಿಸಿಬಿಟ್ಟಿತು. ಸುಭಾಷ್ ಚಂದ್ರ ಬೋಸರ ಸಾವನ್ನು ಮರೆಮಾಚಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ಸಾವಿಗೆ ಕಾರಣವಾದರು. ಸರದಾರ್ ಪಟೇಲರನ್ನು ಕುಚರ್ಿಯಿಂದ ದೂರವಿಟ್ಟಿದ್ದಲ್ಲದೇ ಅವರು ತೀರಿಕೊಂಡ ನಂತರ ಗೌರವದಿಂದ ಕಾಣಲಿಲ್ಲ. ಆಥರ್ಿಕ ಸಂಕಷ್ಟದಿಂದ ಭಾರತವನ್ನು ಪಾರು […]

ಇನ್ನೆಷ್ಟು ದಿನ ಹಿಂದುಗಳು ಸಹಿಸಬೇಕು ಹೇಳಿ?!

Saturday, November 10th, 2018

ಕಳೆದ ತಿಂಗಳು ದೆಹಲಿಯಲ್ಲಿ ಸಭೆ ಸೇರಿದ ಹಿಂದೂ ಸಮಾಜದ ಪ್ರಮುಖರೆಲ್ಲ ಸಕರ್ಾರದ ಮುಂದೆ ಹಿಂದೂ ಬೇಡಿಕೆಗಳನ್ನು ಮಂಡಿಸಿದ್ದಾರೆ. ಹಿಂದೂಸ್ತಾನದ ಜೀವನಾಡಿಯೇ ಹಿಂದೂ ಸಂಸ್ಕೃತಿಯಾದ್ದರಿಂದ ಹಿಂದೂಸ್ತಾನವನ್ನು ರಕ್ಷಿಸಲು ಈ ಸಂಸ್ಕೃತಿಯನ್ನು ಪೋಷಿಸಿ ಬೆಳೆಸುವುದು ಅತ್ಯವಶ್ಯಕ. ಹಾಗೆಂದೇ ಈ ತಂಡ ಬಲುವಿಶಿಷ್ಟವಾದ ಬೇಡಿಕೆಗಳನ್ನು ರಾಷ್ಟ್ರದ ಮುಂದಿರಿಸಿದೆ. ಶಬರಿಮಲೆಯ ಕುರಿತಂತೆ ಸುಪ್ರೀಂಕೋಟರ್ಿನ ತೀಪರ್ು ಹಿಂದೂಗಳಲ್ಲಿ ಅಸಮಾಧಾನ ಉಂಟು ಮಾಡಿರುವುದಂತೂ ಸತ್ಯ. ದೇವಸ್ಥಾನಕ್ಕೆ ಮಹಿಳೆಯರು ಹೋಗಬೇಕೋ ಬೇಡವೋ? ಎಂಬುದು ಚಚರ್ಾಸ್ಪದ ವಿಷಯ. ಅದನ್ನು ಈ ಧರ್ಮದ ಅಧ್ವಯರ್ುಗಳಾದ ಸಂತ ಮಹಂತರುಗಳೇ ಸೇರಿ ಚಚರ್ಿಸಿ […]

ಬಲವಾಯ್ತು ಹಿಂದೂಸ್ತಾನ, ದಿವಾಳಿಯಾಯ್ತು ಪಾಕಿಸ್ತಾನ!

Saturday, November 10th, 2018

ಇದುವರೆಗೂ ಆಳಿದ ನವಾಜ್ ಶರೀಫ್ ಚೀನಾಕ್ಕೆ ಆತುಕೊಂಡು ಅಲ್ಲಿಂದ ಸಿಗುತ್ತಿದ್ದ ಸಾಲಕ್ಕೆ ಪ್ರತಿಯಾಗಿ ಪಾಕಿಸ್ತಾನದ ಅನೇಕ ಪ್ರದೇಶಗಳನ್ನೇ ಮಾರಿಕೊಂಡುಬಿಟ್ಟಿದ್ದರು. ಜನ-ಮನ ಗೆಲ್ಲುವ ಯೋಜನೆಯನ್ನು ತರುವ ಭರದಲ್ಲಿ ಉತ್ಪಾದನೆಯನ್ನು ವೃದ್ಧಿಸಲಾಗದೇ ಹೆಣಗಾಡಿದ ಹಿಂದಿನ ನವಾಜ್ ಶರೀಫ್ ಸಕರ್ಾರದ ಕಾಲದಲ್ಲೇ ರಫ್ತು ಗಣನೀಯವಾಗಿ ಕುಸಿಯಲಾರಂಭಿಸಿತು. ಚೀನಾವನ್ನು ನಂಬಿಕೊಂಡ ಯಾವ ರಾಷ್ಟ್ರವೂ ಕಾಲಕ್ರಮದಲ್ಲಿ ಉದ್ಧಾರವಾದ್ದನ್ನು ಕಂಡವರಿಲ್ಲ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದವು. ಹಿಂದೂಸ್ತಾನ ಮತ್ತು ಪಾಕಿಸ್ತಾನವೆಂಬ ಎರಡು ರಾಷ್ಟ್ರಗಳು ಭೂಪಟದಲ್ಲಿ ಹೊಸ ಗಡಿಯೊಂದಿಗೆ ಅಸ್ತಿತ್ವಕ್ಕೆ ಬಂದಿದ್ದವು. ಸ್ವಾತಂತ್ರ್ಯ ಕೊಡುವಾಗಲೇ ಇಂಗ್ಲೆಂಡಿನ […]

ಎಡಪಕ್ಷಗಳಿಗೆ ಬಂಗಾಳದಲ್ಲಾದ ಗತಿ ಈಗ ಕೇರಳದಲ್ಲಿ!

Saturday, November 10th, 2018

ಕೇರಳ ಮೊದಲಿನಿಂದಲೂ ವಿಚಿತ್ರವಾದ ನಾಡೇ. ಆಚರಣೆಗಳ ವಿಚಾರದಲ್ಲಿ ಅದು ಬಲು ನಿಷ್ಠುರ. ಆಚರಣೆಯ ಹಿಂದಿನ ತತ್ತ್ವಗಳು, ಕಲ್ಪನೆಗಳು ಇವೆಲ್ಲವೂ ಮರೆತೇ ಹೋಗಿ ಬಾಹ್ಯಾಚರಣೆಗಳನ್ನು ಮಾತ್ರ ಬಲು ಜೋರಾಗಿಯೇ ಉಳಿಸಿಕೊಂಡು ಬಿಡುತ್ತದೆ ಅದು. ಮತ್ತಿದು ಈಗಿನ ಕಥೆಯಲ್ಲ. ಶಂಕರಾಚಾರ್ಯರ ಕಾಲದಿಂದಲೂ ನಡೆದು ಬಂದಿದೆ. ಎಡಪಂಥೀಯರು ಹೀಗೆ ತಬ್ಬಿಬ್ಬಾಗಿ ಮುಂದೇನು ಮಾಡಬೇಕೆಂದು ತೋಚದೇ ಕೈಚೆಲ್ಲಿಬಿಡುವುದು ಬಹಳ ಅಪರೂಪ. ಪ್ರತಿ ಚುನಾವಣೆಗೊಮ್ಮೆ ಸುಳ್ಳು-ಸುಳ್ಳು ವಾದಗಳನ್ನು ಜನರ ಮುಂದಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುವುದರಲ್ಲಿ ಅವರು ನಿಸ್ಸೀಮರು. ಹಿಂದೊಮ್ಮೆ ಜೆಎನ್ಯುನಲ್ಲಿ ತುಕಡೆ ಗ್ಯಾಂಗಿನ ಹೋರಾಟ […]

ನೇತಾಜಿಯ ಭಾರತ ಸರ್ಕಾರಕ್ಕೆ ಭರ್ತಿ ಎಪ್ಪತ್ತೈದು!

Saturday, November 10th, 2018

1941 ರ ಆರಂಭದಲ್ಲಿ ಸುಭಾಷ್ಚಂದ್ರ ಬೋಸರು ಗೃಹಬಂಧನದಿಂದ ಕಾಣೆಯಾದ ಸುದ್ದಿ ದೇಶದಾದ್ಯಂತ ಸಂಚಲನವುಂಟುಮಾಡಿತ್ತು. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಪಹರೆ ಕಾಯುತ್ತಿದ್ದ ಬ್ರಿಟೀಷ್ ಪೊಲೀಸರ ನಟ್ಟನಡುವಿನಿಂದಲೇ ಸುಭಾಷ್ಬಾಬು ಮಾಯವಾಗಿಬಿಟ್ಟಿದ್ದರು! ಮನೆಯವರೆಲ್ಲಾ ಸುಭಾಷರ ವೈರಾಗ್ಯದ ತುಡಿತವನ್ನು ವಿವರಿಸಿ ಕೆಲವು ದೂತರನ್ನು ತೀರ್ಥಕ್ಷೇತ್ರಗಳಿಗೆ ಹುಡುಕಾಟಕ್ಕೆಂದೂ ಕಳಿಸಿಬಿಟ್ಟಿದ್ದರು. ಆದರೆ ಈ ಅಡಗೂಲಜ್ಜಿಯ ಕಥೆಗಳನ್ನು ನಂಬುವಷ್ಟು ಬ್ರಿಟೀಷರು ದಡ್ಡರಾಗಿರಲಿಲ್ಲ. 1943 ಅಕ್ಟೋಬರ್ 21. ಸಿಂಗಾಪುರದ ಕ್ಯ್ಯಾಥೆ ಸಿನಿಮಾ ಭವನ. ಜಪಾನ್, ಥಾಯ್ಲ್ಯಾಂಡ್, ಬಮರ್ಾ, ಬೋನರ್ಿಯೊ ಮೊದಲಾದ ದೇಶಗಳ ಪ್ರತಿನಿಧಿಗಳು. ಸ್ವತಂತ್ರ ಭಾರತದ ಹಂಗಾಮಿ ಸಕರ್ಾರದ […]

ಕಾಂಗ್ರೆಸ್ಸಿಗೆ ಪ್ರಯಾಗರಾಜವನ್ನೂ ವಿರೋಧಿಸುವ ಧೈರ್ಯವಿಲ್ಲ!

Tuesday, November 6th, 2018

ಅಲಹಾಬಾದ್ನ ಹೆಸರನ್ನು ಪ್ರಯಾಗರಾಜವೆಂದು ಮರುನಾಮಕರಣ ಮಾಡಿದ್ದರಿಂದ ಗುಲಾಮಿತನದ ಸಂಕೇತವೊಂದು ನಾಶವಾದಂತಾಗಿದೆ. ಪ್ರತಿಯೊಬ್ಬ ಆಕ್ರಮಣಕಾರನೂ ತನ್ನ ಗೆಲುವನ್ನು ಸಾಂಕೇತಿಕವಾಗಿ ದಾಖಲಿಸುವುದು ಹೆಸರು ಬದಲಾಯಿಸುವುದರ ಮೂಲಕ. ಅಲೆಗ್ಸಾಂಡರ್ನ ಆಕ್ರಮಣದ ಕಾಲದಲ್ಲೂ ಆತ ತನ್ನೂರಿಗೆ ಮರಳಿ ಹೋಗುವ ಮುನ್ನ ಇಲ್ಲಿನ ಒಂದಷ್ಟು ನಗರಗಳ ಹೆಸರನ್ನು ಬದಲಾಯಿಸಿದ್ದ. ಹಿಂದೂಗಳ ಪವಿತ್ರ ಕ್ಷೇತ್ರವಾಗಿದ್ದ ಕುಂಭಸ್ಥಾನ ಪ್ರಯಾಗಕ್ಕೆ ಹಳೆಯ ಕಳೆ ಮರಳಿ ಬಂದಿದೆ. ಹೆಸರು ಬದಲಾಗುವುದರಿಂದ ಏನೊಂದೂ ಬದಲಾಗದೆಂಬುದು ಸತ್ಯ. ಆದರೆ ಆ ಹೆಸರಿನೊಂದಿಗೆ ಜೋಡಿಸಿಕೊಂಡಿರುವ ಭಾವನೆಗಳಿರುತ್ತವಲ್ಲಾ ಅವು ಮುಂಚೂಣಿಗೆ ಬರುವುದಂತೂ ನಿಜ. ನಮ್ಮೆಲ್ಲ ಎಡಪಂಥೀಯ […]

ರಾಹುಲ್ ಒಳ್ಳೆಯ ಹಿಂದುವೋ, ಕೆಟ್ಟವನೋ?!

Tuesday, November 6th, 2018

ತರೂರ್ ಹೇಳಿರುವಂತಹ ಒಟ್ಟಾರೆ ಮಾತು ಹಾಸ್ಯಾಸ್ಪದವಾಗಿಯೇ ಇದೆ. ಯಾರೊಬ್ಬರ ಪ್ರಾರ್ಥನಾ ಮಂದಿರವನ್ನು ಧ್ವಂಸಗೊಳಿಸಿ ತನ್ನ ಮಂದಿರ ನಿಮರ್ಿಸುವುದನ್ನು ಹಿಂದೂ ಒಪ್ಪಲಾರ ಎಂದಿದ್ದಾರೆ. ಬಾಬ್ರಿ ಮಸೀದಿ ನಿಮರ್ಾಣವಾಗಿರುವುದು ಹೇಗೆಂಬುದರ ಕಥೆ ಅವರಿಗೆ ಗೊತ್ತಿರಬೇಕಿತ್ತಲ್ಲ. ಬಾಬರ್ನ ಸೇನಾಧಿಪತಿ ಭವ್ಯವಾಗಿದ್ದ ರಾಮಮಂದಿರವನ್ನು ಕೆಡವಿ ಅದರ ಮೇಲೆಯೇ ಮಸೀದಿಯನ್ನು ನಿಮರ್ಿಸಿದ ಎಂಬುದನ್ನು ಪುರಾತತ್ವ ಇಲಾಖೆಯವರ ಉತ್ಖನನದಿಂದ ಸಾಬೀತುಪಡಿಸಲಾಯ್ತಲ್ಲ! ಈ ಪ್ರಶ್ನೆ ಇಂದು ಇಡೀ ದೇಶ ಕೇಳುತ್ತಿದೆ. ಅದಕ್ಕೆ ಕಾರಣ ಕಾಂಗ್ರೆಸ್ಸಿನ ಲೋಕಸಭಾ ಸದಸ್ಯ ಶಶಿತರೂರ್. ತರೂರ್ ಇತ್ತೀಚೆಗೆ ದ ಹಿಂದೂ ಲಿಟರೇಚರ್ ಫಾರ್ […]