ವಿಭಾಗಗಳು

ಸುದ್ದಿಪತ್ರ


 

ಮೋದಿಗೆ ಇಷ್ಟೊಂದು ಶಕ್ತಿ ಎಲ್ಲಿಂದ ಬರುತ್ತೇ?!

Thursday, December 13th, 2018

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅವರು ಒಂದೇ ಒಂದು ದಿನ ಕೆಲಸದಿಂದ ರಜೆ ತೆಗೆದುಕೊಂಡಿಲ್ಲ. ಐದು ದಿನಗಳ ಕಾಲ ಆಫೀಸಿನಲ್ಲಿ ದಿನಕ್ಕೆಂಟು ಗಂಟೆ ಕೆಲಸ ಮಾಡುವ ನಾವು ವಾರದ ಕೊನೆಯ ಎರಡು ದಿನದ ರಜೆಗಾಗಿ ಹಾತೊರೆಯುತ್ತಾ ಕುಳಿತಿರುತ್ತೇವಲ್ಲಾ; ಈ ಹೊತ್ತಲ್ಲಿ ಈ ದೇಶದ ಪ್ರಧಾನ ಸೇವಕ ಒಂದು ಕ್ಷಣವೂ ನಮ್ಮಂತೆ ರಜೆಯನ್ನು ಅನುಭವಿಸಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳೋಣ. ನರೇಂದ್ರಮೋದಿಯವರಿಗೆ ಒಂದು ಅತಿಮಾನುಷ ಶಕ್ತಿ ಇರುವುದಂತೂ ಸತ್ಯ. ಈ ಹಿಂದೆ ನರೇಂದ್ರಮೋದಿ ಅಮೇರಿಕಾ, ಕೆನಡಾಗಳ ಪ್ರವಾಸವನ್ನು ಬಿಡುವಿಲ್ಲದೇ ಮಾಡಿ ಡಿಮಾನಿಟೈಸೇಷನ್ನಿಂದಾದ ಕಿರಿಕಿರಿಗಳನ್ನು […]

ಮಾತಾಡಿ ಮರ್ಯಾದೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ಸಿಗರು!

Tuesday, November 27th, 2018

ಮೋದಿಯನ್ನೆದುರಿಸಲು ರಾಹುಲನಷ್ಟೇ ಅಲ್ಲ ಪ್ರತಿಪಕ್ಷದ ಎಲ್ಲ ನಾಯಕರುಗಳೂ ಇನ್ನೂ ಗಟ್ಟಿಯಾಗಬೇಕಿದೆ. ಕಾಂಗ್ರೆಸ್ಸಿನ ಅಧ್ಯಕ್ಷಗಾದಿಯನ್ನು ಹೊತ್ತು ಅದರೊಟ್ಟಿಗೆ ಮಹಾಘಟಬಂಧನದ ಪ್ರಧಾನಿ ಅಭ್ಯಥರ್ಿಯಾಗಿ ಓಟದಲ್ಲಿರುವ ರಾಹುಲ್ ಒಂದೇ ಭಾಷಣವನ್ನು ಮತ್ತೆ-ಮತ್ತೆ ಓದುತ್ತಾ ಕ್ಲೀಷೆ ಎನಿಸಿಬಿಟ್ಟಿದ್ದಾರೆ. ಐದು ರಾಜ್ಯಗಳ ಚುನಾವಣಾ ಕಾವು ಈಗ ಒಂದು ಹದಕ್ಕೆ ಬರುತ್ತಿದೆ. ಮೋದಿ ರ್ಯಾಲಿಗಳಿಗೆ ಬರುವ ಮುನ್ನ ಚುನಾವಣೆ ನಡೆಯುತ್ತಿದೆ ಎಂಬ ವಾತಾವರಣವೂ ನಿಮರ್ಾಣವಾಗಿರುವುದಿಲ್ಲ. ಅವರ ಪ್ರಚಾರ ಶುರುವಾದ ನಂತರವೇ ಜನ ಮೈಚಳಿ ಬಿಟ್ಟು ಹೊರಗೆ ಬರಲಾರಂಭಿಸುವುದು. ಬಹುಶಃ ಈಚಿನ ದಿನಗಳಲ್ಲಿ ಮೋದಿಯನ್ನು ಬಿಟ್ಟರೆ ಮತ್ಯಾವ […]

ರಾಮಮಂದಿರ ಖಾತ್ರಿ, ಅನುಮಾನ ಬೇಡ!

Tuesday, November 27th, 2018

ಅಯೋಧ್ಯೆಗಾಗಿ ಜನಾಗ್ರಹ ಶುರುವಾಗಿದೆ. ಬಹುಶಃ ಮಹಾತ್ಮಾ ಗಾಂಧೀಜಿಯವರು ನೇತೃತ್ವ ವಹಿಸಿದ್ದ ಅಸಹಕಾರ ಚಳುವಳಿಯನ್ನು ಬಿಟ್ಟರೆ ದೇಶವ್ಯಾಪಿಯಾಗಿ ಬೆಳೆದು ನಿಂತ ಮತ್ತೊಂದು ದೊಡ್ಡ ಆಂದೋಲನವೇ ಇದು. ಅಟಲ್ ಬಿಹಾರಿ ವಾಜಪೇಯಿ ದೇಶದ ಪ್ರಧಾನಿಯಾದಾಗ ಅಯೋಧ್ಯೆಯ ಕನಸು ನನಸಾಗಿಯೇ ಬಿಡುವುದೆಂದು ಎಲ್ಲರೂ ಭಾವಿಸಿದ್ದರು. ಆದರೆ ಹಾಗಾಗಲಿಲ್ಲ. ಮುಂದಿನ ಹತ್ತು ವರ್ಷ ಅತ್ಯಂತ ಕೆಟ್ಟ ಪರಿಸ್ಥಿತಿ. 2015ರಲ್ಲಂತೂ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷ ವಿಶ್ವ ಹಿಂದೂ ಪರಿಷತ್ತು ಅಯೋಧ್ಯೆಗೆ ಸಾಗಿಸುತ್ತಿದ್ದ ಕಲ್ಲುಗಳ ಸಾಗಾಣಿಕೆಯನ್ನು ನಿಷೇಧಿಸಿಬಿಟ್ಟಿತು. ಇಂದು ರಾಮ-ಕೃಷ್ಣ ಎಂದೆಲ್ಲಾ ಮಾತನಾಡುವ […]

ಕಾಂಗ್ರೆಸ್ಸಿಗರ ಕಂಗಳೊಳಗೆ ಮೋದಿ ಗೆಲುವಿನ ಮಿಂಚು!

Sunday, November 25th, 2018

ಮೋದಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಭಾರತ ಎಂದಾಗ ಅನೇಕರು ಅವರು ಒಂದು ಪಾಟರ್ಿಯನ್ನೇ ಮುಗಿಸುವ ಹೊಂಚು ಹಾಕುತ್ತಿದ್ದಾರೆ ಎಂದು ಭಾವಿಸಿದ್ದರು. ಆದರೆ ಅದು ಹಾಗಲ್ಲ. ಕಾಂಗ್ರೆಸ್ ಮುಕ್ತ ಭಾರತ ಎಂದರೆ ನಕ್ಸಲ್ ಮುಕ್ತ ಭಾರತ, ಜಾತಿವಾದ ಮುಕ್ತ ಭಾರತ, ಸ್ತ್ರೀಶೋಷಣೆ ಮುಕ್ತ ಭಾರತ, ಮತಾಂತರ ಮುಕ್ತ ಭಾರತ, ಭಯೋತ್ಪಾದನೆ ಮುಕ್ತ ಭಾರತ, ಭ್ರಷ್ಟಾಚಾರ ಮುಕ್ತ ಭಾರತ. ಎಷ್ಟೆಲ್ಲಾ ಅರ್ಥಗಳಿವೆ ಗೊತ್ತಾ? ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ನೀವು ಊಹಿಸಲಾಗದ ಘಟನೆಗಳನೇಕ ನಡೆಯುತ್ತಿವೆ. ಒಂದೆಡೆ ಮೋದಿಯ ಮರು ಅಧಿಕಾರಗ್ರಹಣ […]

ಕನಸುಗಳನ್ನು ನನಸು ಮಾಡುವ ಮೋಡಿಗಾರ!

Tuesday, November 20th, 2018

ನರೇಂದ್ರಮೋದಿಯವರ ಈ ಪರಿಯ ಅಭಿವೃದ್ಧಿಯ ತುಡಿತದಿಂದಾಗಿಯೇ ಅವರಿಂದು ಈ ನಾಡಿನ ಜನರ ಕಣ್ಮಣಿಯಾಗಿರೋದು. ಯಾವ ಯೋಜನೆಯನ್ನು ಕೈಗೆತ್ತಿಕೊಳ್ಳುವಾಗಲೂ ಅವರು ಅದಕ್ಕಿರುವ ಭಿನ್ನ ಭಿನ್ನ ಆಯಾಮಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಸ್ವಾತಂತ್ರ್ಯ ಬಂದ 70 ವರ್ಷಗಳಲ್ಲಿ ನಾವು ಸಮರ್ಥ ರಸ್ತೆಗಳನ್ನೂ ನಿಮರ್ಾಣ ಮಾಡಿಕೊಳ್ಳಲಾಗದೇ ಹೆಣಗಾಡುತ್ತಿದ್ದೇವೆ. ಒಂದು ವರ್ಷದ ಹಿಂದೆ ನನ್ನ ಕನಸಿನ ಕನರ್ಾಟಕ ಎಂದು ಹೊಸ ಕನರ್ಾಟಕದ ನಿಮರ್ಾಣದ ಕಲ್ಪನೆ ಕಟ್ಟಿಕೊಂಡಿದ್ದೆವು. ಆ ಮೂಲಕ ಪ್ರತಿ ಜಿಲ್ಲೆಗಳಲ್ಲೂ ಯಾವ ಬಗೆಯ ಕನಸುಗಳನ್ನು ಕಟ್ಟಬೇಕೆಂಬ ಕಲ್ಪನೆಯನ್ನು ಜನರೆದುರಿಗೆ ಬಿಚ್ಚಿಟ್ಟಿದ್ದೆವು. ದೊಡ್ಡ ಮಟ್ಟದಲ್ಲಿ […]

ಕಥುವಾ ಅತ್ಯಾಚಾರ ಪ್ರಕರಣದಲ್ಲಿ ಬಯಲಿಗೆ ಬಂದ ಮೋಸಗಾರರು!

Tuesday, November 20th, 2018

ಹಿಂದೂಧರ್ಮವನ್ನು ನಾಶಗೈಯ್ಯಬೇಕೆಂಬ ತುಡಿತ ಇವರಿಗಾದರೂ ಏಕೆ? ಹಿಂದೂಧರ್ಮದ ಆಚರಣೆಗಳನ್ನು, ನಂಬಿಕೆಗಳನ್ನು ಯಾರು ಬೇಕಿದ್ದರೂ ಪ್ರಶ್ನಿಸಬಹುದು. ಆದರೆ, ಇತರ ಧಮರ್ೀಯರ ಅವೈಜ್ಞಾನಿಕ ಸಂಗತಿಗಳನ್ನೂ ಪ್ರಶ್ನಿಸುವಂತಿಲ್ಲ. ಒರಿಸ್ಸಾದಲ್ಲಿ ಅಯ್ಯರ್ ವ್ಯಂಗ್ಯವಾಗಿ ಹೇಳಿದ ಮಾತೊಂದು ಆತನನ್ನು ಜೈಲಿಗೇ ತಳ್ಳಿತಲ್ಲದೇ ಅದರ ಕಾರಣಕ್ಕಾಗಿಯೇ ಉಚ್ಚ ಮತ್ತು ಸವರ್ೋಚ್ಚ ನ್ಯಾಯಾಲಯಗಳಲ್ಲಿ ಜಾಮೀನು ಕೂಡ ತಿರಸ್ಕರಿಸಲ್ಪಟ್ಟಿತು. ಆದರೆ ಪ್ರೊಫೆಸರ್ ಭಗವಾನ್ ತನ್ನ ಮನಸ್ಸಿಗೆ ಬಂದಿದ್ದನ್ನೆಲ್ಲಾ ಒದರುತ್ತಾ ಹೋಗುತ್ತಾನೆ. ಕಥುವಾದಲ್ಲಿ ಆಸೀಫಾಳ ಅತ್ಯಾಚಾರದ ಸದ್ದು ಮೊಳಗಿ ತಿಂಗಳುಗಳೇ ಕಳೆದು ಹೋದವು. ಆನಂತರ ಝೀಲಂ ನದಿಯಲ್ಲಿ ಅದೆಷ್ಟು ನೀರು […]

ಬದುಕಲು ಕಲಿಸಿದ ಮೇಷ್ಟರ ಮಹಾಪ್ರಸ್ಥಾನ!

Tuesday, November 20th, 2018

ಸ್ವಾಮಿ ಜಗದಾತ್ಮಾನಂದರು ವೈರಾಗ್ಯದ ಜ್ವಾಲೆಯನ್ನು ಎದೆಯಲ್ಲಿ ಹೊತ್ತು ರಾಮಕೃಷ್ಣಾಶ್ರಮಕ್ಕೆ ಬಂದಾಗ ಇಲ್ಲಿಗೆ ಸೇರಿಕೊಳ್ಳಬಹುದಾಗಿದ್ದ ವಯಸ್ಸು ದಾಟಿ ಹೋಗಿತ್ತಂತೆ. ಆಗ ದೃಷ್ಟಾರರಂತಿದ್ದ ಸ್ವಾಮಿ ಯತೀಶ್ವರಾನಂದಜೀ ಮೂಲ ಮಠಕ್ಕೆ ವಿಶೇಷ ಒಕ್ಕಣಿಕೆಯನ್ನು ಹಾಕಿ ಈತನಿಂದ ಮಾನವ ಜಗತ್ತಿಗೆ ಒಳಿತಾಗಲಿದೆ ಎಂಬ ಸಂದೇಶ ಕೊಟ್ಟಿದ್ದರಂತೆ. ಅದರಿಂದಾಗಿಯೇ ಸನ್ಯಾಸತ್ವದ ಚೌಕಟ್ಟಿಗೆ ಬಂದವರು ಅವರು. ರಾಮಕೃಷ್ಣಾಶ್ರಮ ಅಹಂಕಾರವನ್ನು ನಾಶಮಾಡಿಬಿಡಬಲ್ಲ ಒಂದು ಅದ್ಭುತ ಗರಡಿಮನೆ. ಸನ್ಯಾಸತ್ವ ಸ್ವೀಕಾರ ಮಾಡಬೇಕೆನ್ನುವ ಬಯಕೆಯಿಂದ ಬಂದವನಿಗೆ ತಕ್ಷಣಕ್ಕೆ ಸನ್ಯಾಸ ಸಿಕ್ಕಿಬಿಡುವುದೆನ್ನುವ ಭರವಸೆಯೇ ಇಲ್ಲ. ವಿವೇಕಾನಂದರ ಕಲ್ಪನೆಯ ಸನ್ಯಾಸಿಯಾಗುವ ಯೋಗ್ಯತೆಯ ಪರೀಕ್ಷೆ […]

ಪಾಕಿಸ್ತಾನದ ‘ಚೀನಾನಮಸ್ಕಾರ’ ಯೋಗ!

Tuesday, November 13th, 2018

ಎಕನಾಮಿಕ್ ಕಾರಿಡಾರ್ನ ನೆಪದಲ್ಲಿ ಪಾಕಿಸ್ತಾನಕ್ಕೆ ನುಗ್ಗುತ್ತಿರುವ ಚೀನಿಯರು ತಾವು ಕಾಲಿಟ್ಟೆಡೆಯಲ್ಲೆಲ್ಲಾ ಜನರಿಗೆ ಚೀನಾದ ಭಾಷೆಯನ್ನು ಕಲಿಸುತ್ತಿದ್ದಾರೆ. ಆ ಭಾಗದಲ್ಲಿ ಅದಾಗಲೇ ಚೀನಾದ ಕರೆನ್ಸಿಗಳು ಕಾರ್ಯ ನಿರ್ವಹಿಸಲು ಶುರು ಮಾಡಿವೆ. ಚೀನಾದ ರೆಡಿಯೊ, ಟಿವಿ ಚಾನೆಲ್ಲುಗಳು ಮುಲಾಜಿಲ್ಲದೇ ಕೆಲಸ ಮಾಡುತ್ತಿವೆ. ಮುಲ್ಲಾಗಳ ಒತ್ತಾಯದ ಬದುಕಿನ ವಿರುದ್ಧ ಚೀನಾದ ಈ ಉಡುಗೊರೆಗಳು ಆಕರ್ಷಕವೆನಿಸುತ್ತಿವೆ. ಪಾಕಿಸ್ತಾನ ಪೂರಾ ದಿವಾಳಿಯಾಗುವ ಹಂತಕ್ಕೆ ಬಂದಿದೆ. ಇಮ್ರಾನ್ ಖಾನ್ ಚೀನಾದ ಬೀಜಿಂಗ್ಗೆ ಹೋಗಿದ್ದಾಗ ಪಾಕಿಸ್ತಾನದ ಟಿವಿಯೊಂದು ಬೀಜಿಂಗ್ ಎನ್ನುವುದನ್ನು ತಪ್ಪಾಗಿ ಬೆಗ್ಗಿಂಗ್ ಎಂದು ಬರೆದು ಪ್ರಧಾನಿಯನ್ನು […]

ಭಿಕ್ಷುಕರ ಯುವರಾಜನೊಬ್ಬ ‘ಮಹಾಮನ’ನಾದ ಪರಿ!

Tuesday, November 13th, 2018

ಮುನ್ಷಿ ಈಶ್ವರ್ ಶರಣ್ ಮಾಲವೀಯರ ಬಗ್ಗೆ ಒಮ್ಮೆ ಹೇಳಿದ್ದರು, ‘ಮಾಲವೀಯರು ನಡೆದಾಡಿದರೆ ಭಾರತಕ್ಕೋಸ್ಕರ. ಮಲಗಿದಾಗ ಕನಸುಗಳೂ ಅವರಿಗೆ ಭಾರತದ್ದೇ ಬೀಳಬೇಕು. ಅವರ ಒಟ್ಟಾರೆ ವ್ಯಕ್ತಿತ್ವವನ್ನು ಭಾರತವೇ ಆವರಿಸಿಕೊಂಡಿದೆ. ಆಕೆಯ ಮೇಲಿನ ಪ್ರೀತಿಯೇ ಅವರಿಗೆ ಸ್ಫೂತರ್ಿ ಮತ್ತು ಆಕೆಯ ಸೇವೆಯೇ ಅವರ ಜೀವನದ ಏಕಮಾತ್ರ ಗುರಿ’ ಎಂದು. ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ಪರಿಚಯಿಸುವುದಕ್ಕೆ ಇದಕ್ಕಿಂತಲೂ ಒಳ್ಳೆಯ ಪದಗಳು ಸಿಗಲಾರವೇನೋ! 31 ಡಿಸೆಂಬರ್ 1905. ಮದನ್ ಮೋಹನ ಮಾಲವೀಯರು ಕಾಂಗ್ರೆಸ್ಸಿನ ಸಭೆಯೊಂದರಲ್ಲಿ ಭಾರತೀಯ ಸಂಸ್ಕೃತಿಯನ್ನು ಪಸರಿಸಲೋಸುಗ ಭವ್ಯವಾದ ವಿಶ್ವವಿದ್ಯಾಲಯವೊಂದನ್ನು ನಿಮರ್ಿಸುವ […]

ನಿತ್ಯದ ಬದುಕಿನಲ್ಲೂ ನ್ಯಾಯಾಲಯವೇಕೆ ಮೂಗು ತೂರಿಸುತ್ತದೆ?!

Saturday, November 10th, 2018

ತೀರಾ ಇತ್ತೀಚೆಗೆ ಕೋರೆಂಗಾವ್ ಕೇಸಿನಲ್ಲಿ ರಾಷ್ಟ್ರವನ್ನು ಮೇಲ್ವರ್ಗ ಮತ್ತು ದಲಿತ ಎಂಬ ಹೆಸರಿನಲ್ಲಿ ತುಂಡರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆಂದು ಆರೋಪಿಸಿ ಕೆಲವು ಅರ್ಬನ್ ನಕ್ಸಲರನ್ನು ಬಂಧಿಸಿದಾಗ ಇದೇ ನ್ಯಾಯಾಲಯ ಪ್ರತಿಭಟನೆ ಪ್ರಜಾಪ್ರಭುತ್ವದ ಸ್ವಾಸ್ಥ್ಯಕ್ಕೆ ಅತ್ಯಂತ ಅಗತ್ಯ ಈ ಪ್ರತಿಭಟನೆಯ ದನಿಗಳನ್ನು ಅಡಗಿಸುವಂತಿಲ್ಲ ಎಂದು ಸಕರ್ಾರಕ್ಕೆ ಎಚ್ಚರಿಕೆ ಕೊಟ್ಟಿತು. ಭಾರತೀಯ ನ್ಯಾಯ ಪರಂಪರೆ ಇಂಥದ್ದೊಂದು ಕೆಟ್ಟ ಪರಿಸ್ಥಿತಿಯ ಮೂಲಕ ಹಾದು ಹೋಗಬಹುದೆಂದು ಯಾರೊಬ್ಬರೂ ಎಣಿಸಿರಲಿಲ್ಲ. ನ್ಯಾಯದ ತಕ್ಕಡಿ ತೂಗಾಡುತ್ತಿದೆ ಎಂದೆನಿಸುತ್ತಿದೆ. ಒಂದು ವರ್ಗವನ್ನು ಓಲೈಸುವ ಜಿದ್ದಿಗೆ ನ್ಯಾಯಾಲಯ ಬಿದ್ದುಬಿಟ್ಟಿದೆಯೇನೋ ಎನಿಸುತ್ತಿದೆ. […]