ವಿಭಾಗಗಳು

ಸುದ್ದಿಪತ್ರ


 

ಬರೆದಂತೆ ಬದುಕೋದು ಬಹಳ ಕಷ್ಟ

Saturday, July 7th, 2012

ಇದೊಂಥರಾ ವಿಚಿತ್ರ. ಕೆಲವೊಮ್ಮೆ ಸಿನಿಮಾ ಥಿಯೇಟರಿನಲ್ಲಿಯೂ ಸಮಯ ಓಡೋದಿಲ್ಲ. ಇನ್ನು ಕೆಲವೊಮ್ಮೆ ಪ್ರವಚನಗಳಲ್ಲೂ ಸಮಯ ಜಾರಿದ್ದು ಗೊತ್ತಾಗೋಲ್ಲ. ಮನಸಿಗೆ ಯಾವುದು ಇಷ್ಟವಾಗುತ್ತೋ ಅದು ಆನಂದವನ್ನೂ ಕೊಡುತ್ತೆ. ಮೊನ್ನೆ ಮಂಗಳೂರಿನಲ್ಲಿ ಹಿರೇಮಗಳೂರು ಕಣ್ಣನ್ ಮತ್ತು ಬಿಕೆಎಸ್ ವರ್ಮರ ಮಾತು  ಚಿತ್ರಗಳ ಜುಗಲ್‌ಬಂದಿ ಹಾಗೆಯೇ ಇತ್ತು. ಎರಡೂವರೆ ತಾಸು ಕಳೆದದ್ದು ಗೊತ್ತಾಗಲೇ ಇಲ್ಲ. ವೈಚಾರಿಕ ಚಿಂತನೆಗೆ ಬಗೆಬಗೆಯ ಪ್ರಯೋಗಗಳು ನಡೆಯುತ್ತವೆನ್ನುವುದಕ್ಕೆ ಸಾಕ್ಷಿಯಾಯ್ತು ಈ ಕಾರ್ಯಕ್ರಮ. ಆದರೆ ಮಹತ್ವದ ವಿಚಾರ ಅದಲ್ಲ. ತಮ್ಮ ತಮ್ಮ ಕ್ಷೇತ್ರದಲ್ಲಿ ದಿಗ್ಗಜರಾಗಿರುವ ಇಬ್ಬರು ಕಲಾವಿದರು ಒಬ್ಬರೊಬ್ಬರಿಗೆ […]

ಮೂರನೆ ಮಹಾಯುದ್ಧ, ಔಷಧ ಮಾರುಕಟ್ಟೆಯದ್ದಾ?

Saturday, June 16th, 2012

ಯೋಜನಾ ಆಯೋಗದ ವರದಿ ಬಂದಿದೆ. ಈ ದೇಶದ ಆರೋಗ್ಯದ ಕುರಿತು ಅಪಾರ ಕಾಳಜಿ ವ್ಯಕ್ತಪಡಿಸಿರುವ ನಮ್ಮದೇ ಸರ್ಕಾರದ ವರದಿ ಆಘಾತಕಾರಿ ಅಂಶಗಳನ್ನೂ ಹೊತ್ತು ತಂದಿದೆ. ಭಾರತದ ಔಷಧ ಮಾರುಕಟ್ಟೆಯಲ್ಲಿ ೯೦ ಸಾವಿರಕ್ಕೂ ಮಿಕ್ಕಿ ಫಾರ್ಮುಲೇಶನ್‌ಗಳು, ಬ್ರಾಂಡ್‌ಗಳು ಇವೆ. ಮಾರುಕಟ್ಟೆಯಲ್ಲಿ ಅವೈಜ್ಞಾನಿಕ ಸಂಯೋಜನೆಯ, ಅನಗತ್ಯ ಮತ್ತು ಅಪಾಯಕಾರಿ ಔಷಧಗಳು ತುಂಬಿಹೋಗಿವೆ, ಮಾರುಕಟ್ಟೆಯ ಶೇಕಡ ೧೦ರಷ್ಟು ವಹಿವಾಟು ನಡೆಸುವ ಕೆಮ್ಮಿನ ಔಷಧಿ, ವಿಟಮಿನ್ ಗುಳಿಗೆಗಳು ಮತ್ತು ಲಿವರ್ ಟಾನಿಕ್‌ಗಳನ್ನು ತಯಾರಿಸುವ ಹತ್ತು ಕಂಪನಿಗಳಂತೂ ಅನಗತ್ಯವಾಗಿಯೇ ಉಸಿರಾಡುತ್ತಿವೆ. ಹೆಚ್ಚು ಮಾರಾಟವಾಗುವ ೨೫ […]

ಒಂದು ಲೀಟರ್ ಪೆಟ್ರೋಲು, ಸಾಕು ಜಗವ ನಡುಗಿಸಲು…

Friday, June 8th, 2012

ತನ್ನ ತೈಲ ಸ್ವಾಮ್ಯಕ್ಕೆ ಧಕ್ಕೆ ಬಂದಾಗಲೆಲ್ಲ ಅಮೆರಿಕಾ ಯುದ್ಧ ಮಾಡಿದೆ. ಪಶ್ಚಿಮದ ರಾಷ್ಟ್ರಗಳೆಲ್ಲ ಆಗ ಅದರ ಬಗಲಿಗೇ ಆತುಕೊಂಡಿವೆ. ತೈಲ ಉತ್ಪಾದಕ ರಾಷ್ಟ್ರಗಳು ಒಂದಲ್ಲ ಒಂದು ರೀತಿಯಲ್ಲಿ ತನ್ನ ಮರ್ಜಿಯಲ್ಲೆ ಇರಬೇಕೆಂದು ಪಶ್ಚಿಮ ಬಯಸುತ್ತದೆ. ಹೀಗಾಗಿಯೇ ಆ ರಾಷ್ಟ್ರಗಳನ್ನು ಬಡಿದಾಡುವಂತೆ ಮಾಡಿ, ತಾನು ಬೇಳೆ ಬೇಯಿಸಿಕೊಳ್ಳುವ ಕೆಲಸ ಅವು ಮಾಡುತ್ತಲೇ ಇವೆ. ನಮ್ಮಬೈಕಿಗೆ ಹಾಕಿಸಿಕೊಳ್ಳುವ ಒಂದು ಲೀಟರ್ ಪೆಟ್ರೋಲು; ಬೆಲೆ ಏರಿದಾಗ ಬೆಂಕಿ ಹಾಕುತ್ತೇವೆ. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಸುಟ್ಟು ಬೂದಿ ಮಾಡುತ್ತೇವೆ. ರಾಷ್ಟ್ರ ಸ್ತಬ್ಧವಾಗುತ್ತದೆ. ಕೊನೆಗೆ ಸರ್ಕಾರಗಳೇ […]

ರಾಷ್ಟ್ರಪತಿ ಗಾದಿಗೆ ನನ್ನ ಆಯ್ಕೆ ಇವರು, ನಿಮ್ಮ ಆಯ್ಕೆ ಯಾರು?

Saturday, June 2nd, 2012

ರಾಷ್ಟ್ರಪತಿ ಯಾರಾಗಬೇಕೆಂಬುದರ ಕುರಿತಂತೆ ಚರ್ಚೆ ಜೋರಾಗಿ ನಡೆಯುತ್ತಿದೆ. ಮುಸ್ಲಿಮ್ ಮತ ಬ್ಯಾಂಕನ್ನು ಒಲಿಸಿಕೊಳ್ಳಲಿಕ್ಕಾಗಿಯೇ ಉಪರಾಷ್ಟ್ರಪತಿ ಅನ್ಸಾರಿಯವರನ್ನು ಪಟ್ಟಕ್ಕೇರಿಸಿಬಿಡುವ ಹುನ್ನಾರ ಕಾಂಗ್ರೆಸ್ಸಿನದು. ಅತ್ತ ಬಿಜೆಪಿಯಾದರೋ ನೂರಾ ಇಪ್ಪತ್ತೊಂದು ಕೋಟಿ ಜನರಿರುವ ನಾಡಿನಲ್ಲಿ ದೇಶದ ಮಹೋನ್ನತ ಹುದ್ದೆಗೆ ಒಬ್ಬರನ್ನು ಹೆಸರಿಸಲಾಗದಷ್ಟು ದೈನೇಸಿ ಸ್ಥಿತಿಗೆ ತಲುಪಿಬಿಟ್ಟಿದೆ. ರಾಷ್ಟ್ರೀಯತೆಯ ಪ್ರತಿಬಿಂಬ ಎನ್ನಿಸಿಕೊಂಡ ಪಕ್ಷವೊಂದಕ್ಕೆ ರಾಷ್ಟ್ರಪುರುಷರೇ ಕಾಣುತ್ತಿಲ್ಲವೆಂದರೆ ನಿಜಕ್ಕೂ ಆತಂಕವೆ ಸರಿ. ಅತ್ತ ಒಂದಷ್ಟು ಪತ್ರಿಕೆಗಳು, ಒಂದಷ್ಟು ಲೇಖಕರು ತಮ್ಮದೇ ಹೆಸರನ್ನು ಹರಿಬಿಡುತ್ತಿದ್ದಾರೆ. ಒಬ್ಬರಂತೂ ಎರಡು ಅವಧಿಗೆ ಅಮೀರ್ ಖಾನರನ್ನೆ ರಾಷ್ಟ್ರಪತಿ ಮಾಡೋಣವೆಂದು ಫರ್ಮಾನು […]

ಕಪ್ಪುಹಣದ ಶ್ವೇತಪತ್ರಕ್ಕೆ, ಇಷ್ಟೊಂದು ಅರ್ಜೆಂಟು ಯಾಕೆ?

Saturday, May 26th, 2012

ಕುತಂತ್ರದಿಂದ ಸಾವರ್ಕರ್‌ರನ್ನು ಕೋರ್ಟಿಗೆಳೆದ ನೆಹರೂರಿಂದ ಹಿಡಿದು ರಾಜಾನನ್ನು ತಳ್ಳಿ ಜೈಲಿನ ವಿಸ್ತಾರ ನೋಡಿದ ಸೋನಿಯಾವರೆಗೂ ಆ ಕುಟುಂಬದವರ್‍ಯಾರೂ ಸ್ವತಂತ್ರ ಭಾರತದಲ್ಲಿ ನ್ಯಾಯಾಲಯಕ್ಕೆ ಹೋಗಿಯೇ ಇರಲಿಲ್ಲ. ಈಗ ನೋಡಿ, ದೇಶಕ್ಕೆ ಶುಕ್ರದೆಸೆ! ಇಲ್ಲಿಂದಾಚೆಗೆ ಇನ್ನು ಎರಡೇ ತಿಂಗಳು. ದೇಶದಲ್ಲಿ ನಾವು ಈ ಹಿಂದೆ ಕಂಡು ಕೇಳರಿಯದ ಬದಲಾವಣೆಯೊಂದು ಸಿಡಿಲಿನಂತೆ ಅಪ್ಪಳಿಸಲಿದೆ. ಈ ಬಾರಿ ಇದು ಅಣ್ಣಾ ಹಜಾರೆಯವರ ಅಂಗಳದಿಂದಲೋ ರಾಮದೇವ್ ಬಾಬಾರ ಆಶ್ರಮದಿಂದಲೋ ಹೊರಟಿದ್ದಲ್ಲ. ಇದು ಸುಬ್ರಮಣಿಯನ್ ಸ್ವಾಮಿಯವರ ಬತ್ತಳಿಕೆಯಿಂದ ಎಗರಿದ್ದು. ಕಳೆದ ಏಪ್ರಿಲ್ ೧೫ಕ್ಕೆ ಸ್ವಾಮಿ ಪ್ರಧಾನಂತ್ರಿ […]

ಕಪ್ಪುಹಣದ ಶ್ವೇತಪತ್ರಕ್ಕೆ, ಇಷ್ಟೊಂದು ಅರ್ಜೆಂಟು ಯಾಕೆ?

Saturday, May 26th, 2012

ಕುತಂತ್ರದಿಂದ ಸಾವರ್ಕರ್‌ರನ್ನು ಕೋರ್ಟಿಗೆಳೆದ ನೆಹರೂರಿಂದ ಹಿಡಿದು ರಾಜಾನನ್ನು ತಳ್ಳಿ ಜೈಲಿನ ವಿಸ್ತಾರ ನೋಡಿದ ಸೋನಿಯಾವರೆಗೂ ಆ ಕುಟುಂಬದವರ್‍ಯಾರೂ ಸ್ವತಂತ್ರ ಭಾರತದಲ್ಲಿ ನ್ಯಾಯಾಲಯಕ್ಕೆ ಹೋಗಿಯೇ ಇರಲಿಲ್ಲ. ಈಗ ನೋಡಿ, ದೇಶಕ್ಕೆ ಶುಕ್ರದೆಸೆ! ಇಲ್ಲಿಂದಾಚೆಗೆ ಇನ್ನು ಎರಡೇ ತಿಂಗಳು. ದೇಶದಲ್ಲಿ ನಾವು ಈ ಹಿಂದೆ ಕಂಡು ಕೇಳರಿಯದ ಬದಲಾವಣೆಯೊಂದು ಸಿಡಿಲಿನಂತೆ ಅಪ್ಪಳಿಸಲಿದೆ. ಈ ಬಾರಿ ಇದು ಅಣ್ಣಾ ಹಜಾರೆಯವರ ಅಂಗಳದಿಂದಲೋ ರಾಮದೇವ್ ಬಾಬಾರ ಆಶ್ರಮದಿಂದಲೋ ಹೊರಟಿದ್ದಲ್ಲ. ಇದು ಸುಬ್ರಮಣಿಯನ್ ಸ್ವಾಮಿಯವರ ಬತ್ತಳಿಕೆಯಿಂದ ಎಗರಿದ್ದು. ಕಳೆದ ಏಪ್ರಿಲ್ ೧೫ಕ್ಕೆ ಸ್ವಾಮಿ ಪ್ರಧಾನಂತ್ರಿ […]

ಶಾಲೆಯಲ್ಲಿ ಕೊನೆಯ ಬೆಂಚು, ಬಾಳಿನಲ್ಲಿ ಕೋಲ್ಮಿಂಚು

Saturday, May 19th, 2012

ಸುಹಾಸ್ ಗೋಪಿನಾಥ್… ಇಪ್ಪತ್ತಾರು ವರ್ಷದವ. ಅರಳುಹುರಿದಂತೆ ಇಂಗ್ಲಿಷ್ ಮಾತನಾಡುತ್ತಾನೆ. ಕನ್ನಡವೂ ಅಷ್ಟೇ ಮಧುರ. ಸದ್ಯಕ್ಕೆ ಜಾಗತಿಕ ಕಂಪನಿ ಗ್ಲೋಬಲ್ ಇಂಕ್ನ ಮಾಲಿಕ. ಅಷ್ಟೇ ಅಲ್ಲ, ವಿಶ್ವ ಬ್ಯಾಂಕ್‌ಗೆ ಭಾರತದ ಪರವಾದ ಏಕೈಕ, ಅತ್ಯಂತ ಕಿರಿಯ ಸಲಹೆಗಾರ. ಚಿಕ್ಕ ವಯಸ್ಸಿನಲ್ಲಿಯೇ ಇಂಟರ್ನೆಟ್ ಜಗತ್ತಿನೆಡೆಗೆ ಆಕರ್ಷಿತನಾಗಿ ರೈಮ್ ಕಲಿಯುವ ವೇಳೆಗೆ ವೆಬ್‌ಸೈಟ್ ನಿರ್ಮಾಣದ ಭಾಷೆಗಳನ್ನು ಕಲಿತ. ಅವನ ಮೊದಲ ವೆಬ್‌ಸೈಟ್ ಕೂಲ್ ಹಿಂದೂಸ್ಥಾನ್, ಹೆಮ್ಮೆ ಪಡುವ ಮುನ್ನವೇ ಕೂಲ್ ಪಾಕಿಸ್ತಾನ್ ಆಗಿಬಿಟ್ಟಿತ್ತು. ಯಾರೋ ಧೂರ್ತರು ಅದನ್ನು ಹ್ಯಾಕ್ ಮಾಡಿದ್ದರು. ೧೪ರ […]

ನಮ್ಮ ಇತಿಹಾಸ ನಾವೇ ಬರೆದು ಓದೋದು ಬೇಡವೆ?

Saturday, May 12th, 2012

ಬ್ರಿಟಿಷ್ ಅಧಿಕಾರಿ ಮ್ಯಾಲೆಸನ್ ಈ ದೇಶದ ಜನರನ್ನು ಹುಚ್ಚರು ಅಂತ ಕರೀತಾನೆ. ಏಕೆ ಗೊತ್ತೇನು? ನೇಣು ಶಿಕ್ಷೆಗೆ ಕಳಿಸಿದರೆ ಈ ದೇಶದ ಜನ ಹೆದರೋದಿರಲಿ, ತಾವೇ ನೇಣುಗಂಬದ ಬಳಿ ಧಾವಿಸಿ ನೇಣು ಕುಣಿಕೆಯನ್ನು ಕೊರಳಿಗೆ ಹಾಕಿಕೊಂಡುಬಿಡ್ತಾ ಇದ್ದರಂತೆ. ಆದಷ್ಟು ಬೇಗ ನನ್ನ ನೇಣಿಗೇರಿಸಿ ಅಂತ ಗೋಗರಿಯುತ್ತಾ ಇದ್ದರಂತೆ. ಹೀಗೇಕೆಂದು ಪ್ರಶ್ನಿಸಿದಾಗ, ಪುನರ್ಜನ್ಮ ನಂಬೋರು ನಾವು, ಬೇಗ ಹೊರಟರೆ, ಬೇಗ ಮರಳಿ ಬರುತ್ತೇವಲ್ಲ! ಅನ್ನುವ ವಾದ ಮಂಡಿಸುತ್ತಿದ್ದರಂತೆ. ಹೆದರಿಸಬೇಕೆಂದು ನೇಣಿಗೇರಿಸಿದರೆ, ಅದೇ ಪ್ರೇರಣೆಯಾಗುವ ರೀತಿ ಅತೀ ವಿಶಿಷ್ಟವಲ್ಲವೆ? ಅದಕ್ಕೇ […]

ಮೇ ತಿಂಗಳ ಕಾರ್ಯಕ್ರಮಗಳು

Sunday, May 6th, 2012

7: ವಿದ್ಯಾರ್ಥಿಗಳಿಗೆ ವಿಜ್ಞಾನದೆಡೆಗೆ ಪ್ರೇರಣೆ- ಶಿಬಿರ, ಮಣಿಪಾಲ್ 8: ಬಾಲಭವನ್ ಮಕ್ಕಳ ಶಿಬಿರ, ಬೆಂಗಳೂರು ಸಂಜೆ: ರಾಗಿಗುಡ್ಡದಲ್ಲಿ ಪ್ರವಚನ 9ರಿಂದ11: ರಾಷ್ಟ್ರಶಕ್ತಿ ಕೇಂದ್ರದ ಶಿಬಿರ, ಮಹಾತ್ಮಾ ಸ್ಕೂಲ್, ಆನೆಕಲ್ಲು 12: ಭಾರತ್ ಸ್ವಾಭಿಮಾನ್, ಧಾರವಾಡ 13: ಭಾರತ್ ಸ್ವಾಭಿಮಾನ್, ಕಾರವಾರ ಸಂಜೆ: ಉನ್ನತಿ ಟ್ರಸ್ಟ್ ಕಾರ್ಯಕ್ರಮ, ಶಿರಸಿ 14: ಭಾರತ್ ಸ್ವಾಭಿಮಾನ್, ಮಂಗಳೂರು ಸಂಜೆ: ಭಾರತ್ ಸ್ವಾಭಿಮಾನ್, ಉಡುಪಿ 15: ಭಾರತ್ ಸ್ವಾಭಿಮಾನ್, ಹಾಸನ 16: ಭಾರತ್ ಸ್ವಾಭಿಮಾನ್, ಚಿಕ್ಕಮಗಳೂರು 17: ಭಾರತ್ ಸ್ವಾಭಿಮಾನ್, ಆರ್. ಟಿ.ನಗರ, […]

ಶಾಂತಿಯ ಮಂತ್ರಕ್ಕೆ ಅಣ್ವಸ್ತ್ರದ ಅಕ್ಷತೆ

Saturday, May 5th, 2012

ಏನೇ ಹೇಳಿ. ಅಟಲ್ ಬಿಹಾರಿ ವಾಜಪೇಯಿ ಎಂದಾಕ್ಷಣ ಒಮ್ಮೆ ಹೃದಯವೇ ತೇವವಾಗುತ್ತೆ. ಆ ಮನುಷ್ಯ ಪ್ರಧಾನಿ ಗಾದಿಯಲ್ಲಿ ಕುಳಿತ ಆ ದಿನಗಳೇ ಚೆಂದ. ಹದಿಮೂರು ದಿನದ ಸರ್ಕಾರ, ಆಮೇಲಿನ ೧೩ ತಿಂಗಳ ಸರ್ಕಾರ, ಕೊನೆಗೆ ಪೂರ್ಣ ಪ್ರಮಾಣದ ಅಧಿಕಾರ! ಅವರ ಕಾಲಕ್ಕೇ ಭಾರತವೆಂಬ ಈ ದೇಶ ಗಂಡು ರಾಷ್ಟ್ರ ಎನಿಸಿಕೊಂಡಿದ್ದು. ಅವರ ಕಾಲದಲ್ಲೇ ಈ ದೇಶದ ಜನರ ದೇಹದಲ್ಲಿ ಸ್ವಾಭಿಮಾನದ ರಕ್ತ ಹರಿದಿದ್ದು. ನಾಡಿದ್ದು ಮೇ ೧೧ಕ್ಕೆ ಪೋಖರಣ್ ನಲ್ಲಿ ಬಾಂಬ್ ಸ್ಫೋಟದ ಪರೀಕ್ಷೆ ನಡೆಸಿ ೧೫ […]